ಟಿಕ್‌ಟೊಕ್ ವಿಡಿಯೋ: ಕುಂದಾಪುರದ ಯುವಕರ ಮನಗೆದ್ದ ಕವನ!

ಸುನಿಲ್ ಹೆಚ್. ಜಿ., ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ,ಎ.13: ತಹರೇವಾರಿ ಹಾಡು, ಡೈಲಾಗ್‌ಗಳಿಗೆ ಲಿಪ್‌ಸಿಂಕ್ ಮಾಡಿ, ನಟನಾ ಕೌಶಲ್ಯ ಪ್ರದರ್ಶಿಸುವ ವಿಡಿಯೋ ಹಂಚಿಕೊಳ್ಳಲೆಂದೇ ಇರುವ ಟಿಕ್‌ಟೊಕ್ ಸದ್ಯ ಯುವಕ ಯುವತಿಯರ ನೆಚ್ಚಿನ ಆ್ಯಪ್‌ಗಳಲ್ಲೊಂದು. ಇದೇ ಆ್ಯಪ್‌ ಮೂಲಕ ಕುಂದಾಪುರದ ಯುವತಿಯೋರ್ವಳು ಕುಂದಗನ್ನಡ ಹಾಡಿಗೆ ಮಾಡಿದ ವಿಡಿಯೋವೊಂದು ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಸುದ್ದಿಯಲ್ಲಿದ್ದಾಳೆ.

ಕುಂದಾಪುರ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ಟೆಕ್ಕಿಯಾಗಿರುವ ಕವನ ಎನ್ನುವ ಯುವತಿ ಕುಂದಾಪುರದ ಕ್ರಶ್ ಎಂದೆನಿಸಿಕೊಂಡಿದ್ದು, ಆಕೆಯ ವಿಡಿಯೋಗಳು ನಿನ್ನೆಯಿಂದ ಫೇಸ್ಬುಕ್ ಹಾಗೂ ವಾಟ್ಸ್‌ಪ್ ಸ್ಟೇಟಸ್‌ಗಳಾಗುತ್ತಿರುವುದಲ್ಲದೇ, ಭರ್ಜರಿ ಶೇರ್ ಆಗುತ್ತಿದೆ. ಕವನ ಜಾಗ್ವಾರ್ ಎಂಬ ಪ್ರೊಪೈಲ್ ಮೂಲಕ ಅವರು ಟಿಕ್‌ಟೊಕ್ ವಿಡಿಯೋ ಮಾಡಿದ್ದಾರೆ.  ಕುಂದಾಪ್ರ ಡಾಟ್ ಕಾಂ ವರದಿ.

ಇತ್ತಿಚಿಗೆ ಕುಂದಾಪುರದ ಸಂಗೀತ ನಿರ್ದೇಶಕ ಉತ್ತಮ್ ಸಾರಂಗ್ ಅವರು ನಿರ್ದೇಶಿಸಿದ್ದ ಕುಂದಾಪುರ ಕನ್ನಡದ ’ಹ್ವಾಯ್ ಬನಿಯೆ ಉಂಬುಕ್ ಹ್ವಾಪ’ ಆಲ್ಬಂ ಸಾಂಗ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಕವನ ಅವರು ಅದರ ಸಾಹಿತ್ಯದ ತುಣುಕಿಗೆ ಟಿಕ್‌ಟೊಕ್‌ನಲ್ಲಿ ಧ್ವನಿಗೂಡಿಸಿದ್ದರು. ಈ ವಿಡಿಯೋ ವೈರಲ್ ಆಗುವ ಜೊತೆಗೆ ಕವನ ಅವರು ಈ ಹಿಂದೆ ಮಾಡಿರುವ ಟಿಕ್‌ಟೊಕ್ ವಿಡಿಯೋಗಳನ್ನು ಹುಡುಕಿ ಶೇರ್ ಮಾಡುತ್ತಿರುವುದು ಕವನ ಅವರ ವಿಡಿಯೋಗಳ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.

 

ಕವನ ಟಿಕ್‌ಟೊಕ್ ಪ್ರೊಪೈಲ್‌ನಲ್ಲಿ ಇಂತಹ ನೂರಾರು ವಿಡಿಯೋಗಳಿದ್ದು, ತಮ್ಮ ಮುಖಭಾವ ಹಾಗೂ ನಟನೆಯ ಮೂಲಕ ನೆಟ್ಟಿಗರ ಮನಗೆದ್ದಿದ್ದಾರೆ. ಟಿಕ್‌ಟೊಕ್‌ನಲ್ಲಿ ಅವರನ್ನು ಈವರೆಗೆ 65ಸಾವಿರ ಜನ ಹಿಂಬಾಲಿಸುತ್ತಿದ್ದು, 4.3 ಲಕ್ಷ ಹಾರ್ಟ್ ಲೈಕ್‌ಗಳು ದೊರೆತಿದೆ. ಟಿಕ್‌ಟಾಕ್ ಆ್ಯಪ್‌ ಸುರಕ್ಷಿತೆಯ ದೃಷ್ಟಿಯಿಂದ ತೊಡಕುಂಟುಮಾಡುತ್ತಿದೆ ಹಾಗೂ ಯುವ ಜನರನ್ನು ದಾರಿ ತಪ್ಪಿಸುತ್ತಿದೆ. ಹಾಗಾಗಿ ಅದನ್ನು ನಿಷೇಧಿಸಬೇಕು ಎಂಬ ಕೂಗು ಒಂದೆಡೆ ಕೇಳಿಬರುತ್ತಿದ್ದರೇ, ಇನ್ನೊಂದೆಡೆ ಕವನ ಅವರಂತಹ ನೂರಾರು ಪ್ರತಿಭೆಗಳು ತಮ್ಮ ಪ್ರತಿಭಾ ಪ್ರದರ್ಶನದ ವೇದಿಕೆಯನ್ನಾಗಿಸಿಕೊಳ್ಳುವ ಮೂಲಕ ಎಲ್ಲರ ಮನಗೆಲ್ಲುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.


Leave a Reply

Your email address will not be published. Required fields are marked *

17 − nine =