ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾವೇರಿ ನದಿ ನೀರು ಹಂಚಿಕೆಯ ಸಂಬಂಧ ತಮಿಳುನಾಡಿನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಕುಂದಾಪುರದಿಂದ ದಕ್ಷಿಣ ಭಾರತದ ಪ್ರವಾಕ್ಕೆಂದು ೧೨ ಮಂದಿ ತೆರಳಿದ್ದ ಟೆಂಪೋ ಟ್ರಾವೆಲ್ಲರ್ನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ ದುಷ್ಕರ್ಮಿಗಳು ಜಖಂಗೊಳಿಸಿದ್ದರಿಂದ ಅತಂತ್ರರಾಗಿದ್ದ ಕುಂದಾಪುರದ ಪ್ರವಾಸಿಗರು ತಮಿಳುನಾಡಿನ ಪೊಲೀಸರ ನೆರವಿನೊಂದಿಗೆ ಸುರಕ್ಷಿತವಾಗಿ ರೈಲಿನಲ್ಲಿ ಉಡುಪಿಗೆ ಬಂದಿಳಿದಿದ್ದಾರೆ.
ವಾಹನದ ತೆರಳಿದ್ದ ಮಂಜುನಾಥ ಕುಲಾಲರ ತಂದೆ ಶೀನ ಕುಲಾಲ್, ತಾಯಿ ಗಿರಿಜಮ್ಮ, ಅಮಾಸೆಬೈಲಿನ ವಿಠ್ಠಲ ಶೆಟ್ಟಿ ಹಾಗೂ ಅವರ ಪತ್ನಿ ಮಗಳು, ಗಂಗೊಳ್ಳಿಯ ಕಾಮತ್ ಕುಟುಂಬದ ಮೂವರು ಸದಸ್ಯರು ಸೇರಿದಂತೆ ಇತರರು ತಮಿಳುನಾಡಿನಿಂದ ಸುರಕ್ಷಿತವಾಗಿ ಉಡುಪಿಗೆ ಹಿಂತಿರುಗಿದ್ದು ಅಲ್ಲಿಂದ ಕುಂದಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ತಮಿಳುನಾಡಿನ ರಾಮೇಶ್ವರಂನಲ್ಲಿ ಲಾಡ್ಜ್ ಸಮೀಪ ನಿಲ್ಲಿಸಲಾಗಿದ್ದ ವಾಹನದ ಗಾಜು ಪುಡಿಗೈದಿರುವುದಲ್ಲದೇ ವಾಹನ ಚಾಲಕ ಮಂಜುನಾಥ ಕುಲಾಲ್ ಎಂಬುವವರಿಗೆ ತಮಿಳುನಾಡಿನ ನಾಮ್ ತಮಿಳಾರ್ ಇಯಕ್ಕಂ ಎಂಬ ಸಂಘಟನೆಯ ಕಾರ್ಯಕರ್ತರು ಹಿಗ್ಗಾಮುಗ್ಗಾ ತಳಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಳಿದವರು ಗಲಭೆಯ ಸಂದರ್ಭ ತಮಿಳುನಾಡಿನ ಲಾಡ್ಜ್ವೊಂದರಲ್ಲಿ ಸುರಕ್ಷಿತವಾಗಿದ್ದರಲ್ಲದೇ ತಮಿಳುನಾಡಿನ ಪೊಲೀಸರ ರಕ್ಷಣೆಯಲ್ಲಿದ್ದರು. ಹಲ್ಲೆಗಳಗಾದ ಮಂಜುನಾಥ ಕುಲಾಲ್ ಪ್ರಾಣಾಪಾಯದಿಂದ ಪಾರಾಗಿದ್ದು ತಮ್ಮ ವಾಹನದೊಂದಿಗೆ ಹಿಂದಿರುಗಲಿದ್ದಾರೆ.ಕುಂದಾಪ್ರ ಡಾಟ್ ಕಾಂ ಸುದ್ದಿ.
ಚಿತ್ರಗಳು: ಸುಜೀತ್ ಕುಮಾರ್, ಲೆನ್ಸ್ ಆರ್ಟ್
ಇದನ್ನೂ ಓದಿ:
► ಕುಂದಾಪುರ ಯುವಕನ ಮೇಲಿನ ಹಲ್ಲೆಯ ವೀಡಿಯೋ ಬೆಂಗಳೂರನ್ನು ಹತ್ತಿ ಉರಿಸಿತು – http://kundapraa.com/?p=17467
► ಕಾವೇರಿ ನೀರು ಹಂಚಿಕೆ ವಿವಾದ. ಕುಂದಾಪುರದ ಯುವಕನಿಗೆ ಹಲ್ಲೆ, ವಾಹನ ಜಖಂ – http://kundapraa.com/?p=17456
► ಅಮಾಸೆಬೈಲು: ತಮಿಳುನಾಡಿನಲ್ಲಿ ರಟ್ಟಾಡಿಯ ಯುವಕನ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ – http://kundapraa.com/?p=17493