ಯೋಗರಾಜ್ ಭಟ್‌ಗೆ ‘ಕೀರ್ತಿಕಳಶ’ ಪುರಸ್ಕಾರ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಜನಸೇವಾ ಟ್ರಸ್ಟ್ ರಿ. ಮೂಡುಗಿಳಿಯಾರು ಇವರ ಪ್ರಸ್ತುತಿಯಲ್ಲಿ ಅಭಿಮತ ಸಂಭ್ರಮ 2020 ಕಾರ್ಯಕ್ರಮ ಫೆಬ್ರವರಿ ತಿಂಗಳ 8 ರಂದು ಮೂಡುಗಿಳಿಯಾರಿನಲ್ಲಿ ಜರುಗಲಿದ್ದು ಈ ವರ್ಷದ ಕೀರ್ತಿಕಳಶ ಪುರಸ್ಕಾರವನ್ನು ಚಲನಚಿತ್ರ ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್ ರವರಿಗೆ ನೀಡಲಾಗುತ್ತಿದೆ.

Click Here

Call us

Call us

Visit Now

ಉಡುಪಿ ಜಿಲ್ಲೆಯ ಮಂದಾರ್ಥಿ ಮೂಲದವರಾದ ಯೋಗರಾಜ್ ಭಟ್ ಕನ್ನಡ ಚಲನಚಿತ್ರರಂಗದಲ್ಲಿ ಹೊಸ ಅಲೆಯ ಸಿನೇಮಾಗಳ ಸೃಷ್ಠಿಗೆ ನಾಂದಿ ಹಾಡಿ ಚಿತ್ರರಂಗದಲ್ಲಿ ಹೊಸ ಮನ್ವಂತರವನ್ನೇ ಸೃಷ್ಠಿಸಿದವರು. ಚಿತ್ರನಿರ್ದೇಶಕರಾಗಿಯಷ್ಟೇ ಅಲ್ಲದೆ ಸಾಹಿತ್ಯ ರಚೆನೆಯಲ್ಲಿಯೂ ಯಶಸ್ಸನ್ನ ಕಂಡವರು ಭಟ್. ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಎಂ.ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ಶ್ರೀಯುತರ ಜೀವಮಾನದ ಸಾಧನೆಯನ್ನು ಗುರುತಿಸಿ ಅವರ ತವರು ನೆಲದಲ್ಲಿ ಕೀರ್ತಿಕಳಶ ಪುರಸ್ಕಾರವನ್ನ ನೀಡಿ ಗೌರವಿಸಲಾಗುತ್ತಿದೆ ಎಂದು ಅಭಿಮತ ಸಂಭ್ರಮದ ಅಧ್ಯಕ್ಷರಾದ ಉಳ್ತೂರು ಅರುಣ್ ಕುಮಾರ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ಈ ಸಂದರ್ಭ ಟೀಮ್ ಅಭಿಮತದ ಸಂಚಾಲಕರಾದ ಪ್ರವೀಣ್ ಯಕ್ಷಿಮಠ, ಸಾಂಸ್ಕೃತಿಕ ಚಿಂತಕ ಉದಯ್ ಶೆಟ್ಟಿ ಪಡುಕರೆ,ಜನಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ಬನ್ನಾಡಿ, ಕೋಶಾಧಿಕಾರಿ ಅರುಣ್ ಶೆಟ್ಟಿ ಪಡುಮನೆ ಪ್ರಮುಖರಾದ ಕೊತ್ತಾಡಿ ಸಂತೋಷ್ ಕುಮಾರ್ ಶೆಟ್ಟಿ, ಹೈಕಾಡಿ ವಿಜಯ್ ಕುಮಾರ್ ಶೆಟ್ಟಿ. ಕಿರಣ್ ಆಚಾರ್ಯ ಗಿಳಿಯಾರು ಮುಂತಾದವರು ಉಪಸ್ಥಿತರಿದ್ದರು,

Click here

Click Here

Call us

Call us

Leave a Reply

Your email address will not be published. Required fields are marked *

1 × 2 =