ಡಾ. ಬಿ.ಎಂ. ಹೆಗ್ಡೆ, ಪಿ. ಜಯರಾಮ ಭಟ್‌ಗೆ ಅವರಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೀರ್ತಿಶೇಷ ಶ್ರೀ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಕುಂದಾಪುರ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ಜರುಗಿದ ಯಡ್ತರೆ ಮಂಜಯ್ಯ ಶೆಟ್ಟಿ 103ನೇ ಜನ್ಮ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಹೆ ವಿಶ್ರಾಂತ ಕುಲಪತಿ ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಹಾಗೂ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್ ಅವರಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

Call us

ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಡಾ.ವೀರಪ್ಪ ಮೋಯ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎ.ಜಿ.ಕೊಡ್ಗಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ಪ್ರೊ. ಎಂ. ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ನೇತ್ರ ತಜ್ಞ ಡಾ. ವೈ. ಎಸ್. ಹೆಗ್ಡೆ, ಮಂಗಳೂರು ಐಎಫ್‌ಎಸ್ ನಿವೃತ್ತ ಅಧಿಕಾರಿ ಯು.ಟಿ.ಆಳ್ವಾ, ಡಾ.ಎಂ.ಲಕ್ಷ್ಮೀನಾರಾಯಣ ಶೆಟ್ಟಿ, ಯು.ಸೀತಾರಾಮ ಶೆಟ್ಟಿ, ತಾರಾನಾಥ ಶೆಟ್ಟಿ, ದಿ.ಮಂಜಯ್ಯ ಶೆಟ್ಟಿ ಅವರ ಪುತ್ರ ಅಶೋಕ್ ಶೆಟ್ಟಿ ಇದ್ದರು.

ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಡಾ. ಎಚ್. ನರಸಿಂಹಮೂರ್ತಿ ಪ್ರಸ್ತಾವನೆ ಮಾಡಿದರು. ನಿವೃತ್ತ ಉಪನ್ಯಾಸಕ ಕೋ.ಶಿವಾನಂದ ಕಾರಂತ ಅಭಿನಂದನಾ ಭಾಷಣ ಮಾಡಿದರು. ಪತ್ರಕರ್ತ ಯು.ಎಸ್.ಶೆಣೈ, ಬಸ್ರೂರು ಶಿಕ್ಷಕ ದಿನಕರ ಆರ್.ಶೆಟ್ಟಿ, ವೈ.ಗೌತಮ್ ಹೆಗ್ಡೆ, ಬಂಡಾಡಿ ಸದಾಶಿವ ಶೆಟ್ಟಿ ನಿರೂಪಿಸಿದರು. ಆವರ್ಸೆ ಸುಧಾಕರ ಶೆಟ್ಟಿ ವಂದಿಸಿದರು.

kirthi-shesha-shri-yedthare-manjayya-shetty-award-ceremony-2016-1 kirthi-shesha-shri-yedthare-manjayya-shetty-award-ceremony-2016-2   kirthi-shesha-shri-yedthare-manjayya-shetty-award-ceremony-2016-5kirthi-shesha-shri-yedthare-manjayya-shetty-award-ceremony-2016-6 kirthi-shesha-shri-yedthare-manjayya-shetty-award-ceremony-2016-7 kirthi-shesha-shri-yedthare-manjayya-shetty-award-ceremony-2016-8 kirthi-shesha-shri-yedthare-manjayya-shetty-award-ceremony-2016-9kirthi-shesha-shri-yedthare-manjayya-shetty-award-ceremony-2016-3kirthi-shesha-shri-yedthare-manjayya-shetty-award-ceremony-2016-4

Leave a Reply

Your email address will not be published. Required fields are marked *

20 − 5 =