ಇರಾನಿನಲ್ಲಿ ಬಂಧಿತ ಭಟ್ಕಳದವರ ಬಿಡುಗಡೆಗೆ ಉಪ ರಾಯಬಾರಿಯೊಂದಿಗೆ ಚರ್ಚೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇರಾನಿನಲ್ಲಿ ಬಂಧಿತರಾಗಿರುವ ಭಟ್ಕಳ್ ಪ್ರದೇಶದ 23 ಮಂದಿಯನ್ನು ಬಿಡುಗಡೆಗೊಳ್ಳಿಸುವ ಪ್ರಯತ್ನಕ್ಕಾಗಿ ಕೆ.ಏನ್.ಆರ್ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ ನೇತೃತ್ವದ ತಂಡ ಇಂದು ದುಬೈಯಲ್ಲಿರುವ ಭಾರತದ ಉಪ ರಾಯಬಾರಿ ಕಚೇರಿಗೆ ಭೇಟಿ ನೀಡಿ ಉಪ ರಾಯಬಾರಿಗಳಾದ ವಿಪುಲ್ ಅವರೊಂದಿಗೆ ಚರ್ಚೆ ನಡೆಸಿದರು.

ಶೀಘ್ರ ಈ ಬಗ್ಗೆ ಇರಾನಲ್ಲಿರುವ ಭಾರತ ರಾಯಬಾರಿಯವರೊಂದಿಗೆ ಚರ್ಚೆ ನಡಿಸಿ ಬಿಡುಗಡೆಗೆ ಬೇಕಾದ ವ್ಯವಸ್ಥೆ ಮಾಡುವುದಾಗಿ ವಿಪುಲ್ ಅವರು ಭರವಸೆ ನೀಡಿದ್ದಾರೆ. ಭಟ್ಕಳ್ ಸಂಘಟನೆಯ ಮುಖ್ಯಸ್ಥರಾದ ಸಯೀದ್ ಖಲೀಲ್ ಹಾಗು ಕೆ ಏನ್ ಆರ್ ಐ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮೊಹಮ್ಮದ್ ಚರ್ಚೆಯಲ್ಲಿ ಭಾಗವಹಿಸಿದರು. ಪ್ರದಾನ ಕಾರ್ಯದರ್ಶಿ ಪ್ರಭಾಕರ್ ಅಂಬಲತೆರೆ ಇದ್ದರು.

Leave a Reply

Your email address will not be published. Required fields are marked *

3 × 2 =