ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯ ಐತಿಹಾಸಿಕ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ, ಶಿವನಾಮ ಸ್ಮರಣೆ ನಡೆದವು.

ಐತಿಹ್ಯ:
ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿನ ಈ ಐತಿಹಾಸಿಕ ಗುಹೇಶ್ವರ ದೇವಾಲಯದಲ್ಲಿ ಶಿವನ ಮೂಲ ಸಾನಿಧ್ಯಕ್ಕೊಂದು ಮೆರಗಿದೆ. 20 ಅಡಿ ಉದ್ದದ ಕಲ್ಲಿನ ಪೊಟರೆಯ ಅಂತ್ಯದಲ್ಲಿ ಉದ್ಘವಿಸಿರುವ ಈ ಶಿವಲಿಂಗದಲ್ಲೊಂದು ಬೆರಗಿದೆ. ಈಶ್ವರನೊಂದಿಗೆ ಸ್ಕಂದ ದೇವರ ಉದ್ಭವ ಸನ್ನಿಧಿಯೂ ಇದೆ.

ಈ ಮೊದಲು ಶಿವರಾತ್ರಿಯಂದು ಗುಹೆಯೋಳಗಿನ ಉದ್ಭವರೂಪಿ ಗುಹೇಶ್ವರ ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಕಳೆದೆರಡು ವರ್ಷದಿಂದ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಅರ್ಚಕರು ಪೂಜೆ ಸಲ್ಲಿಸುತ್ತಾರೆ.

ಪ್ರಾಚಿನ ದೇವಾಲಯಗಳಲ್ಲೊಂದಾಗ ಶ್ರೀ ಗುಹೇಶ್ವರ ದೇವಾಲಯದ ಈಶ್ವರ, ಸ್ಕಂದ, ಗಣಪತಿ ಹಾಗೂ ಅಮ್ಮನವರ ಸಾನಿಧ್ಯವಿದ್ದು ಪ್ರತಿನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಸ್ವಯಂ ಸೇವಕರು, ಗುಜ್ಜಾಡಿಯ ಯುವಕರು ಶಿವರಾತ್ರಿಯಂದು ಒಂದಾಗಿ ದೇವರ ಕಾರ್ಯದಲ್ಲಿ ಭಾಗವಹಿಸಿ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

twelve + eleven =