ಕೋಟೇಶ್ವರ ಕೊಡಿ ಹಬ್ಬದ ಸಂಭ್ರಮದೊಂದಿಗೆ ಸೆಲ್ಫಿ ಹಬ್ಬ!

ಕುಂದಾಪುರ: ಕುಂದಾಪುರದ ಸಂಸ್ಕೃತಿಯನ್ನು ಜಗದಗಲಕ್ಕೂ ಸಾರುವ ಸಲುವಾಗಿ ಕುಂದಾಪುರ ಮೂಲದ ತರುಣರಿಂದ ಹುಟ್ಟಿಕೊಂಡ ಕಾಣಿ ಸ್ಟುಡಿಯೋ ತಂಡ ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ತಾಣಗಳಲ್ಲಿ ಗುರುತಿಸಿಕೊಂಡಿತ್ತು. ಇಲ್ಲಿನ ಭಾಷೆ, ಕಲೆ, ಜೀವನ ಶೈಲಿ, ಸಂಸ್ಕೃತಿಗೆ ಹೊಸ ಕಲ್ಪನೆಯೊಂದಿಗೆ ಬಣ್ಣ ನೀಡುತ್ತಿರುವ ಕಾಣಿ ಸ್ಟುಡಿಯೋ ಹುಡುಗರ ತಂಡ ಡಿಸೈನ್, ನಿರ್ವಹಣೆ, ನೆಟ್‌ವರ್ಕಿಂಗ್ ಮತ್ತು ಫಲಿತಾಂಶ ಹೀಗೆ ಮೂರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತೀರುವಹಿಸುತ್ತಿದೆ.

ಈಗ ಕೋಟೇಶ್ವರ ಕೊಡಿ ಹಬ್ಬದಲ್ಲಿ ಸೆಲ್ಫಿ ಹಬ್ಬ ಎನ್ನುವ ಹೆಸರಿನೊಂದಿಗೆ ನವದಂಪತಿಗಳು, ಕುಟುಂಬ, ಸ್ನೇಹಿತರು, ಕೊಡಿ ಹಬ್ಬ ಸಂಭ್ರಮ, ಆಚರಣೆ ಗಮನದಲ್ಲಿಟು ಸೆಲ್ಫಿ ಪೋಟೋಗ್ರಾಫಿ ಸ್ಪರ್ಧೆ ಏರ್ಪಡಿಸಿದ್ದಾರೆ. ಕಾಣಿ ಸ್ಟುಡಿಯೋ ಆಯೋಜಿಸಿರುವ ಕೋಟೇಶ್ವರ ಕೊಡಿ ಹಬ್ಬದಲ್ಲಿ ಸೆಲ್ಫಿ ಸ್ವರ್ಧೆಗೆ ಕೋಟೇಶ್ವರ ರೋಟರಿ ಕ್ಲಬ್, ರೋಟರ‍್ಯಾಕ್ಟ್ ಕ್ಲಬ್, ಕೆನರಾ ಕಿಡ್ಸ್, ರಾಮನಾಥಗೋಳಿಕಟ್ಟೆ ಫ್ರೆಂಡ್ಸ್, ಹಾಗೂ ಐಶ್ವರ್ಯ ಸ್ಟೂಡಿಯೋ ಸಾಥ್ ನೀಡಿದೆ. ಇನ್ನು ಕೊಡಿ ಹಬ್ಬಕ್ಕೆ ಬಂದು ಹಾಗೇ ಹೊಗಬೇಡಿ. ಸೆಲ್ಫಿ ಹೇಗೆ ಬರುತ್ತೆ ಅಂತ ಕಾಣಿ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಸೆಲ್ಫಿ ತೆಗೆದು ಕಳುಹಿಸುವುದು ಹೇಗೆ?: ನಿಮ್ಮ ಫೇಸ್‌ಬುಕ್ ಅಂಕೌಟ್‌ನಲ್ಲಿ Add Photos ಕ್ಲಿಕ್ ಮಾಡಿ ನಿಮ್ಮ Selfi Photo ಒಂದನ್ನುOpen ಮಾಡಿ Say Something About this Photo ನಲ್ಲಿ #KaaniStudio, ನಿಮ್ಮ ಹೆಸರು ಟೈಪ್ ಮಾಡಿ Post ಕೊಡಿ. ಇಲ್ಲಿಗೆ ನಿಮ್ಮ ಪೋಟೋ ಅಪ್‌ಲೋಡ್ ಮಾಡುವ ಕ್ರಮ ಮುಗಿಯುತ್ತದೆ.ಸೆಲ್ಫಿ ಸ್ಪರ್ಧೆ ನಿಯಮ: ಸಾಮಾಜಿಕ ಜಾಲತಾಣವಾದ facebookನಲ್ಲಿ ಮಾತ್ರ ಈ Selfi ಪೋಟೋ ಸ್ಪರ್ಧೆಗೆ ಅವಕಾಶ ಇರುವುದರಿಂದ facebook ಅಕೌಂಟ್ ಇರುವವರು ಈ Selfi ಪೋಟೋ ಸ್ಪರ್ಧೆಗೆ ಭಾಗವಹಿಸಬಹುದು.ಒಬ್ಬ ಸ್ಪರ್ಧಾಳು ಒಂದೇ ಪೋಟೋ ಅಪ್‌ಲೋಡ್ ಮಾಡಬೇಕು. ಒಂದಕ್ಕಿಂತ ಹೆಚ್ಚು ಪೋಟೋ ಅಪಲೋಡ್ ಮಾಡಿದ್ದಲ್ಲಿ ಅಂತಹ ಪೋಟೊ ಪರಿಗಣಿಸುವುದಿಲ್ಲ.

ಸ್ಪರ್ಧಾ ವಿಜೇತರ ಮಾಹಿತಿಯನ್ನು KaaniStudio facebook ಪೇಜ್‌ನಲ್ಲಿ 26-11-2015 ಮಧ್ಯಾಹ್ನ 4 ಘಂಟೆಗೆ ಹಾಕಲಾಗುವುದು. ಟಾಪ್ 10 ಸೆಲ್ಫಿ ವಿಜೇತರ facebook ಅಕೌಂಟ್ ಮೂಲಕ ರವಾನಿಸಲಾಗುವುದು. ನ.26 ರಂದು ರಾತ್ರಿ ಕೋಟೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗುವ ರಾಮನಾಥಗೋಳಿಕಟ್ಟೆ ಫ್ರೆಂಡ್ಸ್ ಇವರ ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಣೆ ನಡೆಸಲಾಗುವುದು.

Leave a Reply

Your email address will not be published. Required fields are marked *

four × four =