ಕೊಲ್ಲೂರು ಠಾಣೆ ಪೊಲೀಸ್ ಸಿಬ್ಬಂದಿಗಳೀರ್ವರ ಪ್ರೇಮ ಪ್ರಕರಣ: ಪ್ರಿಯಕರ ಆತ್ಮಹತ್ಯೆಗೆ ಶರಣು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆಯೋರ್ವರು ಪ್ರೇಮ ವೈಫಲ್ಯದಿಂದ ಕೊಲ್ಲೂರಿನ ವಸತಿಗೃಹದಲ್ಲಿ ನೇಣಿಗೆ ಶರಣಾಗಿರುವ ಘಟನೆ ವರದಿಯಾಗಿದೆ. ಪೊಲೀಸ್ ಪೇದೆ ನಾಗರಾಜ (23) ಆತ್ಮಹತ್ಯೆಗೆ ಮಾಡಿಕೊಂಡವರು. ಅವರ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಅವರ ಪ್ರೇಯಸಿ ಹಾಗೂ ಅದೇ ಠಾಣೆಯ ಮಹಿಳಾ ಪೇದೆ ಕೂಡ ಬಾವಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅವರನ್ನು ರಕ್ಷಿಸಲಾಗಿದೆ.

Click Here

Call us

Call us

ಶನಿವಾರ ಬೆಳಿಗ್ಗೆ ತನ್ನ ಕರ್ತವ್ಯ ಮುಗಿಸಿ ಕೊಲ್ಲೂರಿನ ಸೌಪರ್ಣಿಕಾ ಗೆಸ್ಟ್ ಗೌಸ್‌ನಲ್ಲಿ ತಂಗಿದ್ದ ನಾಗರಾಜ್ ಅವರು ರಾತ್ರಿವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಅವರ ಕೊಠಡಿಯಲ್ಲಿದ್ದ ಇನ್ನೊರ್ವ ಪೇದೆ ರಾತ್ರಿಪಾಳಿ ಮುಗಿಸಿ ಬೆಳಿಗ್ಗೆ ಕೊಣೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

Click here

Click Here

Call us

Visit Now

ದಾವಣಗೆರೆಯ ಮಲೆಬೆನ್ನೂರಿನವರಾದ ನಾಗರಾಜ್ ೨೦೧೪ರಲ್ಲಿ ಪೊಲೀಸ್ ಪೇದೆಯಾಗಿ ನೇಮಕಗೊಂಡು ಕೊಲ್ಲೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಅದೇ ಠಾಣೆಯಲ್ಲಿ ಮಹಿಳಾ ಪೇದೆಯೋರ್ವರೊಂದಿಗೆ ಪ್ರೇಮಾಂಕುವಾಗಿತ್ತು. ಇಬ್ಬರ ಪ್ರೀತಿಯ ವಿಚಾರ ಅವರ ಕುಟುಂಬಿಕರಿಗೂ ತಿಳಿದು ಮದುವೆಗೆ ಸಮ್ಮತಿ ಸೂಚಿಸಿದ್ದರು. ಆದರೆ ಈ ಮಧ್ಯೆ ಪ್ರೇಮಿಗಳಿರ್ವರ ನಡುವೆ ಉಂಟಾದ ಬಿರುಕು ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ನಾಗರಾಜ್ ಡೆತ್‌ನೋಟ್‌ನಲ್ಲಿ ’ನನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿಕೊಂಡಿರುವುದಲ್ಲದೆ ಅಪ್ಪ ಅಮ್ಮ ಕ್ಷಮಿಸಿ, ತನ್ನ ಪ್ರೇಯಸಿ ಚನ್ನಾಗಿರಬೇಕು’ ಎಂದು ಬರೆದಿದ್ದರು.

ಆತನ ಆತ್ಮಹತ್ಯೆಯ ವಿಚಾರ ತಿಳಿಯುತ್ತಿದ್ದಂತೆ ಅದೇ ಠಾಣೆಯ ಸಿಬ್ಬಂಧಿ, ಪ್ರೇಯಸಿಯೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಸ್ಥಳೀಯರು ಹಾಗೂ ಇತರೆ ಸಿಬ್ಬಂಧಿಗಳು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

► ಕೊಲ್ಲೂರು ಠಾಣೆಯ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣು – http://kundapraa.com/?p=27421

Call us

Leave a Reply

Your email address will not be published. Required fields are marked *

5 × three =