ಕೊಲ್ಲೂರು ದೇವಳದ ಆಭರಣ ಕಳವು ಪ್ರಕರಣ: ಭದ್ರತೆಯ ಬಗ್ಗೆ ಅನುಮಾನ. ಭಕ್ತರ ಆಕ್ರೋಶ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಕೊಲ್ಲೂರು: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಮೂಕಾಂಬಿಕಾ ದೇವಸ್ಥಾನದ ಗುಮಾಸ್ತನೊಬ್ಬ ಖಜಾನೆಯ ಬೀಗದ ಕೈಯೊಂದಿಗೆ ನಾಪತ್ತೆಯಾಗಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿರುವ ಬೆನ್ನಲ್ಲೇ, ಸಾರ್ವಜನಿಕರು ದೇವರಿಗೆ ಸಲ್ಲಿರುವ ಹರಕೆಯ ವಸ್ತುಗಳ ಭದ್ರತೆಯ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದೆ. ಇದರೊಂದಿಗೆ ಕಾರ್ಯನಿವಹಣಾಧಿಕಾರಿಗಳು ಮತ್ತು ಇತರೇ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ದೇವಳದ ವಿಚಾರ ಅನಗತ್ಯವಾಗಿ ಚರ್ಚಾಸ್ಪದವಾಗುತ್ತಿರುವ ಬಗ್ಗೆ ಭಕ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Call us

Click Here

Click here

Click Here

Call us

Visit Now

Click here

ಕೊಲ್ಲೂರು ದೇವಳದ ಒಳಗೆ ಒಂದನೇ ನಂಬರಿನ ಸೇವಾ ಕೌಂಟರ್‌ನಲ್ಲಿ ಕಳೆದ ಹದಿನೈದು ವರ್ಷಗಳಿಂದ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಶಿವರಾಮ ಮಡಿವಾಳ ಎಂಬುವವರು ಕಳೆದ ಆರು ದಿನಗಳಿಂದ ಸೇವೆಗೆ ನಾಪತ್ತೆಯಾಗಿರುವುದು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ಯಾರ ಅನುಮತಿಯೂ ಪಡೆಯದೇ ಏಕಾಏಕಿ ಕರ್ತವ್ಯಕ್ಕೆ ಗೈರು ಹಾಜರಾಗಿ ತಲೆಮರೆಸಿಕೊಂಡಿರುವ ಸೇವಾ ಕೌಂಟರ್ ಖಜಾನೆಯ ಕೀಲಿಕೈಯನ್ನು ಕೊಂಡೊಯ್ದಿರುವುದು ಅನುಮಾನಗಳಿಗೆ ಆಸ್ಪದ ನೀಡಿದೆ. ಕುಂದಾಪ್ರ ಡಾಟ್ ಕಾಂ ವರದಿ

ಆದದ್ದೇನು?
ಏಕಾಏಕಿ ಕರ್ತವ್ಯಕ್ಕೆ ಹಾಜರಾಗದೇ ನಾಪತ್ತೆಯಾಗಿರುವ ಶಿವರಾಮ, ತನಗೆ ಮಧುಮೇಹ ಹಾಗೂ ರಕ್ತದೊತ್ತಡ ಹೆಚ್ಚಾಗಿರುವುದರಿಂದ ಹತ್ತು ದಿನಗಳ ಕಾಲ ರಜೆಯಲ್ಲಿ ತೆರಳುತ್ತಿದ್ದೇನೆ ಎಂದು ತನ್ನ ಒಂದನೇ ನಂಬರಿನ ಕೌಂಟರಿನಲ್ಲಿ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಗೈರು ಹಾಜರಾಗಿರುವ ಅವರು ಭಕ್ತಾದಿಗಳು ಹರಕೆ/ಸೇವಾ ರೂಪದಲ್ಲಿ ಸಲ್ಲಿಸಿದ್ದ ಚಿನ್ನ, ಬೆಳ್ಳಿಯ ಒಡವೆಗಳನ್ನಿಡುವ ಖಜಾನೆಯ ಬೀಗದ ಕೈಯನ್ನು ತಮ್ಮೊಂದಿಗೆ ಕೊಂಡೊಯ್ದಿರುವುದು ಅನುಮಾನಕ್ಕೆ ಎಡೆಮಾಡಿಕೊಂಡಿದೆ. ಕುಂದಾಪ್ರ ಡಾಟ್ ಕಾಂ ವರದಿ

ಹಣವನ್ನೂ ಕೊಂಡ್ಯೊಯ್ದಿದ್ದರೇ?
ಶಿವರಾಮ ರಜೆಯಲ್ಲಿ ತೆರಳುವಾಗ ಕೌಂಟರಿನಲ್ಲಿದ್ದ 4 ಲಕ್ಷ ರೂಪಾಯಿಯನ್ನು ಬ್ಯಾಂಕಿಗೆ ಜಮಾ ಮಾಡದೇ ತೆಗೆದುಕೊಂಡು ಹೋಗಿರುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಆದರೆ 4 ಲಕ್ಷ ಮೊತ್ತದ ಹಣವನ್ನು ಶಿವರಾಮ ಅವರ ಸ್ನೇಹಿತ ಸಿಬ್ಬಂದಿಗಳು ಅವರ ಮಡದಿಯ ಮೂಲಕ ಬ್ಯಾಂಕಿಗೆ ಜಮಾ ಮಾಡಿಸಿದ್ದಾರೆ ಎನ್ನಲಾಗಿದೆ. ಕಳೆದ ಹದಿನೈದು ವರ್ಷಗಳಿಂದ ದೇವಳದಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಗಂಡನ ಬಗ್ಗೆ ಯಾವುದೇ ದೂರುಗಳಿಲ್ಲ. ಆದರೆ ಏಕಾಏಕಿ ಈ ಆರೋಪ ಹೊರಿಸುವುದು ಸರಿಯಲ್ಲ. ಸ್ನೇಹಿತರಿಂದ ಪಡೆದ ನಾಲ್ಕು ಲಕ್ಷ ಹಣವನ್ನು ಹೊಂದಿಸುವ ಸಲುವಾಗಿ ಅವರು ಬೆಂಗಳೂರಿಗೆ ತೆರಳಿದ್ದಾರೆ. ಬಂದ ಕೂಡಲೇ ಕೀಲಿಕೈ ಹಿಂದಿರುಗಿಸುವುದಾಗಿ ದೂರವಾಣಿಯಲ್ಲಿ ತಿಳಿಸಿದ್ದಾರೆಂದು ಪೊಲೀಸರಿಗೆ ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ

ಗುಮಾಸ್ತನ ಕೈಯಲ್ಲಿ ಖಜಾನೆ ಕೀಲಿಕೈ?
ಕಳೆದ ನಾಲ್ಕು ವರ್ಷಗಳಿಂದ ಶಿವರಾಮ ಸೇವಾ ಕೌಂಟರಿನ ಖಜಾನೆಯ ಕೀಲಿಕೈ ಶಿವರಾಮ ಅವರ ಬಳಿಯೇ ಇದ್ದುದರ ಬಗ್ಗೆ ಸಾರ್ವಜನಿಕರ ಆಕ್ರೋಶದ ಬೆನ್ನಲ್ಲೆ ಭದ್ರತೆಯ ಬಗ್ಗೆ ಅನುಮಾನಗಳ ಮೂಡತೊಡಗಿದೆ. ಮುಜರಾಯಿ ಇಲಾಖೆಗೆ ಒಳಪಡುವ ಪ್ರಸಿದ್ಧ ದೇವಸ್ಥಾನದ ಖಜಾನೆಯ ಕೀಲಿಕೈ ಗುಮಾಸ್ತನ ಬಳಿ ಇರುವುದು ಸರಿಯೇ ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ದೇವಳದ ಸೊತ್ತಿನ ನಿರ್ವಹಣೆಯ ಬಗ್ಗೆ ಜಾಗೃತೆ ವಹಿಸಬೇಕಾಗಿದ್ದ ಅಧಿಕಾರಿಗಳು ಬೇಜವಾಬ್ದಾರಿ ಹೊಂದಿರುವುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ. ಮೂರನೇ ಭಾರಿಗೆ ದೇವಳದಲ್ಲಿ ಅಧಿಕಾರಿಗಳ ಆಡಳಿತವಿರುವಾಗ ಇಂತಹ ಪ್ರಕರಣ ನಡೆಯುತ್ತಿದೆ. ಜಿಲ್ಲಾಡಳಿತ ಇದರ ಬಗ್ಗೆ ಎಚ್ಚರ ವಹಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

Call us

ಮಾಧ್ಯಮಗಳ ಮೇಲೆ ಕಾರ್ಯನಿರ್ವಹಣಾಧಿಕಾರಿ ಗರಂ:
ಮಾಧ್ಯಮಗಳಲ್ಲಿ ಬರುವ ಕೆಲವು ವಿಷಯಗಳಲ್ಲಿ ಸತ್ಯಾಂಶವಿರುವುದಿಲ್ಲ. ಸುಮ್ಮನೆ ನೀವಿಲ್ಲಿ ಬಂದು ರಂಪ ಮಾಡಬೇಡಿ. ಅಂತದ್ದು ಏನೂ ನಡೆದಿಲ್ಲ. ಆ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಬಂದು ಮೂರುವರೆ ತಿಂಗಳಾದ್ರು ಚಾರ್ಜ್ ಕೊಡಲಿಲ್ಲ. ಸುಮ್ಮನೆ ಏನೆನೋ ಕಲ್ಪಸಿಕೊಂಡು ಬಣ್ಣಕಟ್ಟಿ ಬರೆಯಬೇಡಿ. ಲ್ಲಾದಕ್ಕೂ ರಸೀದಿ ಇದೆ. ಖಜಾನೆ ನನ್ನ ಕಸ್ಟಡಿಯಲ್ಲಿದೆ. ಸಂಜೆ ವೇಳೆಗೆ ಆತ ಬರುತ್ತಾನೆ ಎನ್ನುವ ಮಾಹಿತಿ ಇದೆ. ಒಂದುವೇಳೆ ಬರದಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ಅಲ್ಲಿಯ ತನಕ ನೀವುಗಳು ಏನೂ ಬರೆಯಲು ಹೋಗಬೇಡಿ. ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್. ಉಮಾ ಮಾಧ್ಯಮದವರ ಮೇಲೆ ಗರಂ ಆದ ಪ್ರಸಂಗ ನಡೆದಿದೆ. ಕುಂದಾಪ್ರ ಡಾಟ್ ಕಾಂ ವರದಿ

ಶಿವರಾಮ ಮಡಿವಾಳ ಕಾಣೆಯಾದ ಬಗ್ಗೆ ಈವರೆಗೆ ದೇವಳದಿಂದ ದೂರು ದಾಖಲಾಗಿಲ್ಲ. ಪಿಟಿಷನ್ ಆಧಾರದಲ್ಲಿ ಆತನನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೇವೆ. ಆತ ಊರಿಗೆ ಹಿಂದಿರುಗುವ ಬಗ್ಗೆ ಮಡದಿ ತಿಳಿಸಿದ್ದು, ಒಂದು ವೇಳೆ ಬಾರದೇ ಇದ್ದಲ್ಲಿ ನಾವು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

eighteen + twenty =