ಕೊಲ್ಲೂರು: ದೇವಳ ಚಿನ್ನ ಕಳವು ಪ್ರಕರಣಕ್ಕೆ 2 ವರ್ಷ. ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ. 400 ಗ್ರಾಂ ಚಿನ್ನ ಪತ್ತೆಯಿಲ್ಲ.

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಚಿನ್ನಭಾರಣ ಕಳವು ಪ್ರಕರಣ ನಡೆದು 2 ವರ್ಷ ಸಂದರೂ ಈ ವರೆಗೂ ಆರೋಪಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಸಿಲ್ಲ ಅಲ್ಲದೇ ಕಳವಾದ ಸುಮಾರು 75 ಲಕ್ಷಕ್ಕೂ ಹೆಚ್ಚು ಮೌಲ್ಯದ 2.289ಕೆ.ಜಿ ಚಿನ್ನಾಭರಣದ ಪೈಕಿ 400 ಗ್ರಾಂ ಚಿನ್ನಾಭರಣ ಈವರೆಗೂ ಪತ್ತೆಯಾಗಿಲ್ಲ. ದೇವಿಯ ಆಭರಣ ಕಳವು ಪ್ರಕರಣ ರಾಜ್ಯ ಹೊರರಾಜ್ಯಗಳಲ್ಲೂ ಸುದ್ದಿಯಾಗಿದ್ದವು.

Click Here

Call us

Call us

Visit Now

ಅಂದಿನ ದೇಗುಲದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್. ಉಮಾ ನಿತ್ಯ ಸಂಗ್ರಹವಾದ ಕಾಣಿಕೆ, ಹರಿಕೆ ಆಭರಣಗಳ ಬಗ್ಗೆ ಲೆಕ್ಕಪರಿಶೋಧನೆ ಮಾಡುತ್ತಿದ್ದಾಗ ಅದರಲ್ಲಿ ವ್ಯತ್ಯಾಸವನ್ನು ಕಂಡುಹಿಡಿದಿದ್ದರು. ಈ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದ್ದ ಶಿವರಾಮ ಮಡಿವಾಳ ಎಂಬಾತನನ್ನು ಸಂಪರ್ಕಿಸಿದ್ದರು. ಆತ ನೀಡಿದ ಉತ್ತರ ನೀಡಲು ಅಸಮರ್ಥನಾದ್ದರಿಂದ ಅವರು ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರಿಗೆ ಶರಣಾದ ಶಿವರಾಮ್ ತಾನು ಬ್ಯಾಂಕ್ ಇನ್ನಿತರ ಲೇವಾದೇವಿ ಸಂಸ್ಥೆಗಳಲ್ಲಿ ಚಿನ್ನಾಭರಣ ಅಡವಿಟ್ಟ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದ. ಆತನೊಡನೆ ದೇಗುಲದ ಇತರ 4 ಮಂದಿ ಸಿಬಂದಿಯನ್ನೂ ಪೊಲೀಸರು ಬಂಧಿಸಿದ್ದರು. ಜತೆಗೆ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ ಅವರನ್ನೂ ಬಂಧಿಸಲಾಗಿದ್ದು, ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

Click here

Click Here

Call us

Call us

ಅಂದಿನ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಪೊಲೀಸರ ವಿಶೇಷ ತಂಡ ಅಂದಿನ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ್, ಎಸ್.ಐ. ಶೇಖರ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಎಸ್.ಪಿ ಅಣ್ಣಾಮಲೈ ಅವರ ವರ್ಗಾವಣೆ ಬಳಿಕ ತನಿಖೆ ವೇಗಪಡೆಯಲಿಲ್ಲ. ಊರ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಮಿಕ್ಕುಳಿದ ಚಿನ್ನಾಭರಣಗಳ ಬಗ್ಗೆ ಧ್ವನಿ ಎತ್ತಿದ್ದರೂ ಆ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿದೆ. ದೇಗುಲದಲ್ಲೀಗ ಕಾಣಿಕೆ ರೂಪದಲ್ಲಿ ಚಿನ್ನಾಭರಣ ಸಮರ್ಪಿಸಲು ಬರುವ ಭಕ್ತರಿಗೆ ರಶೀದಿ ನೀಡುವ ವ್ಯವಸ್ಥೆಯೂ ಮಾಯವಾಗಿದೆ. ಇದರ ಬದಲಿಗೆ ದೇಗುಲ ಸಿಬಂದಿ ಕಾಣಿಕೆ ಹುಂಡಿಗೆ ಹಾಕುವಂತೆ ಹೇಳುತ್ತಿರುವುದು ಭಕ್ತರಿಗೆ ಕಿರಿಕಿರಿ ಉಂಟುಮಾಡಿದೆ.

Leave a Reply

Your email address will not be published. Required fields are marked *

7 − two =