ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯಲ್ಲಿ ಸುವರ್ಣ ಸಂಭ್ರಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಗ್ರಾಮೀಣ ಭಾಗಗಳಿಂದ ಸುತ್ತುವರಿದಿದ್ದ ಕೊಲ್ಲೂರಿನಲ್ಲಿ ಸರ್ವರಿಗೂ ಸುಲಭದಲ್ಲಿ ಪ್ರೌಢಶಿಕ್ಷಣವನ್ನು ಒದಗಿಸಬೇಕೆಂಬ ಮಹೋನ್ನತ ಉದ್ದೇಶದೊಂದಿಗೆ 1969ರಲ್ಲಿ ಶ್ರೀ ಮೂಕಾಂಬಿಕಾ ದೇವಳದ ಆಡಳಿತ ಮಂಡಳಿ ಆರಂಭಿಸಿದ ಶಾಲೆ ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆ ಇಂದು ಸವರ್ಣ ಸಂಭ್ರಮಕ್ಕೆ ಸಜ್ಜಾಗಿ ನಿಂತಿದೆ.

Call us

Call us

Visit Now

ಅಂದು ಕೀರ್ತಿಶೇಷ ಯಡ್ತರೆ ಮಂಜಯ್ಯ ಶೆಟ್ಟಿ ಅವರು ಆಡಳಿತ ಮೊಕ್ತೇಸರರಾಗಿದ್ದರು. ಕಾರ್ಯನಿರ್ವಹಣಾಧಿಕಾರಿ ನಾರಾಯಣ ಭಟ್ಟರು ವಿಶೇಷ ಮುತುವರ್ಜಿ ವಹಿಸಿದ್ದರು. ಆರಂಭದಲ್ಲಿ ಶ್ರೀಮಾತಾ ಛತ್ರದ ತಾತ್ಕಾಲಿಕ ಕಟ್ಟಡದಲ್ಲಿ(ಇಂದಿನ ಸಿಂಡಿಕೇಟ್ ಬ್ಯಾಂಕ್ ಇರುವ ಸ್ಥಳದಲ್ಲಿ) ಕೇವಲ ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಶಾಲೆಯನ್ನು ಪ್ರಾರಂಭಿಸಲಾಯಿತು. ದಾಖಲಾತಿಯ ಕೊರತೆಯನ್ನು ನೀಗಿಸಲು ಅಂದಿನ ಕಷ್ಟದ ದಿನಗಳಲ್ಲೂ ಸ್ಥಳೀಯ ಅನೇಕ ಮಹನೀಯರು ತಮ್ಮ ಬಂಧುಗಳ ಮಕ್ಕಳನ್ನೋ ಪರಿಚಿತರ ಮಕ್ಕಳನ್ನೋ ತಮ್ಮ ಮನೆಯಲ್ಲಿ ಉಳಿಸಿಕೊಂಡು ಶಾಲೆಯನ್ನು ಬೆಳೆಸಿದರು. 1974 ರಲ್ಲಿ ಸರಕಾರದಿಂದ ಅನುದಾನವನ್ನು ಪಡೆದ ವಿದ್ಯಾಸಂಸ್ಥೆ ಪ್ರಸ್ತುತ ರಾಜ್ಯಮಟ್ಟದಲ್ಲಿ ಉತ್ತಮ ಕನ್ನಡ ಮಾಧ್ಯಮ ಅನುದಾನಿತ ಶಾಲೆಯಾಗಿ ಬೆಳೆದು ನಿಂತಿದೆ.

Click here

Call us

Call us

ಮುಂದೆ ಬಿ .ಅಪ್ಪಣ್ಣ ಹೆಗ್ಡೆ, ಬಿ.ಎಂ ಸುಕುಮಾರ್ ಶೆಟ್ಟಿ, ಕೃಷ್ಣ ಪ್ರಸಾದ್ ಅಡ್ಯಂತಾಯರು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶಾಲೆಯನ್ನು ಮುನ್ನಡೆಸಿದರು. ಇವರುಗಳ ಕಾಲದಲ್ಲಿ ಶಾಲೆ ಬಹಳಷ್ಟು ಪ್ರಗತಿಯನ್ನು ಸಾಧಿಸಿತು. ಪ್ರಸ್ತುತ ಹರೀಶ್ ಕುಮಾರ್ ಎಂ ಶೆಟ್ಟಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಲೆಯ ಅಭ್ಯುದಯದ ಬಗೆಗೆ ಕಾಳಜಿ ವಹಿಸಿದ್ದಾರೆ.

ಫ್ರೌಢಶಾಲೆಯಲ್ಲಿ ಜಿ ಮಂಜುನಾಥ್ ಹೆಗ್ಡೆ ಅವರು ಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ ನಂತರ ಪದ್ಮನಾಭಯ್ಯ, ಪಿ.ವಿ. ಹೆಗಡೆ, ಯು ಚಂದ್ರಶೇಖರ ಶೆಟ್ಟಿ, ಬಿ ಕರುಣಾಕರ್ ಶೆಟ್ಟಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದರು. ಬಿ ಕರುಣಾಕರ ಶೆಟ್ಟಿಯವರು 2017ರಲ್ಲಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ಪಡೆದು ಎಲ್ಲರ ಗಮನಸೆಳೆದರು. ಪ್ರಸ್ತುತ ನಾಗರಾಜ್ ಭಟ್ ಮುಖ್ಯೋಪಾಧ್ಯಾಯರಾಗಿ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಶಾಲೆಯು ಆರಂಭದಿಂದಲೂ ಉತ್ತಮ ಫಲಿತಾಂಶವನ್ನು ದಾಖಲಿಸಿದ್ದು, ಹಲವಾರು ಬಾರಿ ಶೇಕಡಾ 100 ಫಲಿತಾಂಶವನ್ನು ದಾಖಲಿಸಿದೆ. ಉಳಿದಂತೆ ಪ್ರತಿ ಬಾರಿಯೂ ಶೇಕಡಾ 95ಕ್ಕೆ ಕಡಿಮೆ ಇಲ್ಲದಂತೆ ಫಲಿತಾಂಶದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಪಠ್ಯದೊಂದಿಗೆ ಸಹಪಠ್ಯ, ಕ್ರೀಡಾ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿದೆ. ಪ್ರತಿವರ್ಷವೂ ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವ ಸಂಸ್ಥೆಯ ಕ್ರೀಡಾಪಟುಗಳು ಇದ್ದೇ ಇರುತ್ತಾರೆ. ಅಂತರಾಷ್ಟ್ರೀಯ ಕ್ರೀಡಾಪಟು ಗುರುರಾಜ್ ಪೂಜಾರಿ ಸಂಸ್ಥೆಯ ಹೆಮ್ಮೆಯ ಪೂರ್ವ ವಿದ್ಯಾರ್ಥಿಯಾಗಿದ್ದವರು.

ಉತ್ತಮ ಶಿಕ್ಷಕ ಶಿಕ್ಷಕೇತರ ವೃಂದವನ್ನು ಹೊಂದಿರುವ ಈ ವಿದ್ಯಾಸಂಸ್ಥೆ ತನ್ನ ಶ್ರೇಷ್ಠತೆಯನ್ನು ಕಾಪಾಡಿಕೊಂಡಿದೆ. ಶ್ರೀ ದೇವಳದ ವತಿಯಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳ ಸೌಲಭ್ಯವನ್ನು ಪಡೆದು ದೂರದ ವಿದ್ಯಾರ್ಥಿಗಳಿಗೂ ಕೂಡ ವಿದ್ಯಾರ್ಜನೆ ಯನ್ನು ಮಾಡಲು ಅನುಕೂಲ ಮಾಡಿಕೊಡಲಾಗಿದೆ.ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉತ್ತಮ ಉದ್ಯೋಗದಲ್ಲಿದ್ದಾರೆ.

ಡಿ. 21 ರಿಂದ ಮೂರು ದಿನಗಳ ಕಾಲ ಸಂಭ್ರಮಾಚರಣೆ:
ವಿದ್ಯಾಸಂಸ್ಥೆಯು 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 20, 21, 22 ರಂದು ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನಡೆಯಲಿದೆ. ಡಿಸೆಂಬರ್ 20ರಂದು ಸುವರ್ಣ ಮಹೋತ್ಸವದ ಕಾರ್ಯಕ್ರಮವನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಬಿ. ಎಂ ಸುಕುಮಾರ್ ಶೆಟ್ಟಿ ಅವರು ಅಪರಾಹ್ನ 3ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ಸಂಜೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್ 21ರಂದು 8:30 ರಿಂದ ಪೂರ್ವ ವಿದ್ಯಾರ್ಥಿಗಳ ಸುವರ್ಣ ಸಂಗಮ ಮತ್ತು ಡಿಸೆಂಬರ್ 22ರಂದು 8:30 ರಿಂದ ಸುವರ್ಣ ಸಾಂಸ್ಕೃತಿಕ ಹಬ್ಬ ನಡೆಯಲಿದ್ದು ವಿವಿಧ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

 

Leave a Reply

Your email address will not be published. Required fields are marked *

thirteen − 3 =