ಜಡ್ಕಲ್: ಕೊಲ್ಲೂರು ಸೊಸೈಟಿ ಹಾಗೂ ಅಂಗಡಿಯ ಲಕ್ಷಾಂತರ ಮೌಲ್ಯದ ಉತ್ಪನ್ನಗಳು ಕಳವು

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಖೆ ಹೊಂದಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಖಾಸಗಿ ವ್ಯಕ್ತಿಗಳಿಗೆ ಸೇರಿದ್ದ ಅಂಗಡಿಯ ಪ್ರತ್ಯೇಖ ದಾಸ್ತಾನು ಕೊಠಡಿಯಲ್ಲಿ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಅಡಿಕೆ, ಕಾಳು ಮೆಣಸು, ರಬ್ಬರ್ ಶೀಟ್ ಮುಂತಾದ ಉತ್ಪನ್ನಗಳನ್ನು ದೋಚಿಕೊಂಡು ತೆರಳಿರುವ ಘಟನೆ ವರದಿಯಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Call us

ಜಡ್ಕಲ್ ಸೈಂಟ್ ಜಾಜ್ ಚರ್ಚ್ ಕಾಂಪೆಕ್ಸ್‌ನಲಿದ್ದ್ಲ ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ  ಜಡ್ಕಲ್ ಶಾಖೆ ದಾಸ್ತಾನು ಕೊಠಡಿಯ ಬಾಗಿಲು ಮುರಿದು ಸುಮಾರು 16ಲಕ್ಷ ಮೌಲ್ಯದ ಅಡಿಕೆ ಹಾಗೂ 2 ಲಕ್ಷ ಮೌಲ್ಯದ ಕಾಳುಮೆಣಸು ದೊಚಿರುವ ಕಳ್ಳರು, ಪಕ್ಕದ ಸಬಾಸ್ಟಿನ್ ಪಟ್ಟಾಮನ & ಸನ್ಸ್ ಅಂಗಡಿಗೆ ಸೇರಿದ್ದ ದಾಸ್ತಾನು ಕೊಠಡಿಯಿಂದ ಸುಮಾರು 2.44 ಲಕ್ಷ ಮೌಲ್ಯದ3 ಸಾವಿರ ಕೆ.ಜಿ ರಬ್ಬರ್ ಶೀಟ್, 45,600ರೂ ಮೌಲ್ಯದ 40 ಡಬ್ಬಿ ಸ್ಟಿಕ್‌ವೆಲ್ ಗಮ್, 44.800ರೂ ಮೌಲ್ಯದ 310ಕೆ.ಜಿ ಪ್ಲಾಸ್ಟಿಕ್ ಹಾಗೂ 5,200ರೂ ಮೌಲ್ಯದ 40ಕೆ.ಜಿ ರಬ್ಬರ್ ಕೋಟ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ವಾಹನದ ಜಾಕ್ ಬಳಸಿ ಸೊಸೈಟಿ ದಾಸ್ತುನು ಕೊಠಡಿ ಶಟರ್ ಹಾಗೂ ಪಕ್ಕದ ದಾಸ್ತನು ಕೊಠಡಿಯ ಬೀಗದ ಚಿಲಕ ಮುರಿದು ಕಳವುಗೈದಿದ್ದಾರೆನ್ನಲಾಗಿದೆ. ದಾಸ್ತುನು ಕೊಠಡಿಯ ಸಮೀಪದ ಕೊಠಡಿಯಲ್ಲಿ ವಾಸವಿದ್ದವರು ಹೊರಬಾರದಂತೆ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಕಳವುಗೈದಿದ್ದಾರೆ. ರಾತ್ರಿ ಸುಮಾರು ಎರಡು ಗಂಟೆಯ ವೇಳೆಗೆ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.

Call us

Call us

ಘಟನಾ ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲ್ಲೂರು ಠಾಣಾಧಿಕಾರಿ ಶೇಖರ್, ವೃತ್ತ ನಿರೀಕ್ಷಕ ರಾಘವ ಪಡೀಲ್ ಭೇಟಿ ನೀಡಿ ತನಿಕೆ ಮುಂದುವರಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕು ಪಂಚಾಯತ್ ಸದಸ್ಯೆ ಗ್ರೀಷ್ಮಾ ಬಿಡೆ, ಜಡ್ಕಲ್ ಗ್ರಾ.ಪಂ ಅಧ್ಯಕ್ಷ ಅನಂತಮೂರ್ತಿ, ಕುಂದಾಪುರ ಉಪ ವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ರಾಜು ಪೂಜಾರಿ, ಸಹಕಾರಿ ಸಂಘಗಳ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ, ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

nineteen − fourteen =