ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೋಮವಾರದಿಂದ ರಾಜ್ಯಾದ್ಯಂತ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿಯೂ ಸೋಮವಾರದಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲು ಭರದ ಸಿದ್ಧತೆಗಳು ನಡೆಯುತ್ತಿದೆ.
ನಾಳೆಯಿಂದ ದೇವರ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದ್ದು, ಬೆಳಿಗ್ಗೆ 5 ಗಂಟೆಗೆ ಬಾಗಿಲು ತೆರೆಯಲಿದೆ. ಬೆಳಿಗ್ಗೆ 5:30ರಿಂದ 7:30ರ ತನಕ ಭಕ್ತಾದಿಗಳಿಗೆ ಮೊದಲ ಹಂತದಲ್ಲಿ ದರ್ಶನಕ್ಕೆ ವ್ಯವಸ್ಥೆ, ಮತ್ತೆ ಬೆಳಿಗ್ಗೆ 10:30ರಿಂದ 1:30 ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯ ತನಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸರ್ಕಾರ ಹಾಗೂ ಜಿಲ್ಲಾಡಳಿತ ಸೂಚಿಸಿರುವ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲು ನೌಕರರು ಹಾಗೂ ಹೊರ ಗುತ್ತಿಗೆ ಯವರಿಗೆ ತರಬೇತಿ ನೀಡಲಾಗಿದೆ. ದೇವಸ್ಥಾನ ಪ್ರವೇಶ ಮಾಡುವ ಮೊದಲು ಕೈ ಕಾಲು ತೊಳೆದು ಬಳಿಕ ಭಕ್ತರು ಸ್ಯಾನಿಟೈಸ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ದೇವಳದ ಎದುರಿನ ಮುಖ್ಯದ್ವಾರದಿಂದ ಒಳ ಪ್ರವೇಶಿಸಿ, ಆನೆ ಬಾಗಿಲಿನ ಮೂಲಕ ಹೊರಕ್ಕೆ ತೆರಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದೇವಳದ ಬಲಿಪೀಠದ ಎದುರು ನಿಂತು ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಒಳಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ದೇವಳದಲ್ಲಿ ಯಾವುದೇ ಪೂಜೆ ಹಾಗೂ ಸಂಕಲ್ಪಗಳಿಗೆ ಅವಕಾಶವಿಲ್ಲ. ಸೇವೆ ಮಾಡಬಯಸುವವರು ಹಣ ಪಾವತಿ ಮಾಡಿದಲ್ಲಿ ಆನ್ ಲೈನ್ ಸೇವಾದಾರರಿಗೆ ಕಳುಹಿಸುವಂತೆ ಅಂಚೆ ಮೂಲಕ ಕುಂಕುಮ ಪ್ರಸಾದ ಕಳುಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
► ಜೂ.8 ರಿಂದ ಜಿಲ್ಲೆಯಲ್ಲಿ ದೇವಾಲಯಗಳ ಆರಂಭ. ಇವಿಷ್ಟು ನಿಯಮ ಪಾಲನೆ ಕಡ್ಡಾಯ – https://kundapraa.com/?p=38342 .
- ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಿಗದಿಪಡಿಸಿದ ಸಮಯದಲ್ಲಿ ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಧ್ವನಿ ವರ್ಧಕದ ಮೂಲಕ ಭಕ್ತರನ್ನು ಎಚ್ಚರಿಸಲಾಗುವುದು. ಹಂತ ಹಂತವಾಗಿ ಅನ್ನದಾನಕ್ಕೆ ವ್ಯವಸ್ಥೆ ಮಾಡಲಾಗುವುದು. – ಅರವಿಂದ ಸುತ್ತಗುಂಡಿ, ದೇವಳದ ಕಾರ್ಯನಿರ್ವಹಣಾಧಿಕಾರಿ
- ಇಷ್ಟು ದಿನ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಜು.8ರಿಂದ ಅವಕಾಶವಿದ್ದು ದೇವಸ್ಥಾನ ತೆರೆಯುವ ಕಾರಣಕ್ಕೆ ಭಕ್ತರು ಒಮ್ಮೆಲೆ ಮುಗಿಬೀಳಬಾರದು. ದಿನವೂ ದರ್ಶನಕ್ಕೆ ಅವಕಾಶವಿರುವುದರಿಂದ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಪಾಲಿಸಿ ದೇವಳಕ್ಕೆ ತೆರಳಬೇಕು ಸರಕಾರದ ನಿರ್ದೇಶನಗಳನ್ನು ಪಾಲಿಸಿ ಎಚ್ಚರದಿಂದಿರುವುದು ಅಗತ್ಯ. – ಬಿ. ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ
ಇದನ್ನೂ ಓದಿ:
► ಉಡುಪಿ ಜಿಲ್ಲೆ: ಭಾನುವಾರ 13 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38382 .
► ಕೋವಿಡ್-19 ಚಿಕಿತ್ಸೆಗೆ ಜಿಲ್ಲಾಡಳಿತ ಹಣ ಪಡೆಯುತ್ತಿದೆ ಎಂದು ಆರೋಪಿಸಿದ್ದವನ ಬಂಧನ – https://kundapraa.com/?p=38373 .
► ಉಡುಪಿ ಜಿಲ್ಲೆ: ಶನಿವಾರ 121 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38332 .
► ಪಾಸಿಟಿವ್ ಬರುವವರಲ್ಲಿ ರೋಗದ ಲಕ್ಷಣಗಳಿಲ್ಲ: ಡಾ. ಪ್ರಶಾಂತ್ ಭಟ್ – https://kundapraa.com/?p=38333 .
► ಜೂ.8 ರಿಂದ ಜಿಲ್ಲೆಯಲ್ಲಿ ದೇವಾಲಯಗಳ ಆರಂಭ. ಇವಿಷ್ಟು ನಿಯಮ ಪಾಲನೆ ಕಡ್ಡಾಯ – https://kundapraa.com/?p=38342 .