ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ: ಸಂಭ್ರಮದ ಮನ್ಮಹಾರಥೋತ್ಸವ ಸಂಪನ್ನ  

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು, ಮಾ.30: ದಕ್ಷಿಣ ಭಾರತದ ಪ್ರಸಿದ್ದ ತೀರ್ಥಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ಮನ್ಮಹಾರಥೋತ್ಸವ ಬುಧವಾರ ಸಡಗರ ಸಂಭ್ರಮದಿಂದ ಜರುಗಿತು.

Call us

Call us

ಕ್ಷೇತ್ರದ ಅಧಿದೇವತೆಯಾದ ಶ್ರೀ ಮೂಕಾಂಬಿಕೆಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಮಾ.23ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ಊರಿನ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮಾ.30ರ ಬೆಳಿಗ್ಗೆ ದೇವಳದ ತಂತ್ರಿ ನಿತ್ಯಾನಂದ ಅಡಿಗ ನೇತೃತ್ವದಲ್ಲಿ ಮುಹೂರ್ತ ಮಂಗಳಾರತಿ, ಪಂಚಾಮೃತ ಅಭಿಷೇಕ, ಕ್ಷಿಪ್ರಬಲಿ, ವಿಶೇಷ ಭೂತ ಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಭೋಜನಾಲದಲ್ಲಿ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ದೇವರಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಮಹಿಳೆಯರು ಏಲಂನಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಖರೀದಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ಉಡುಪಿ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಮಾರ್ಗದರ್ಶನದಲ್ಲಿ ದೇವಳದ ಕಾರ್ಯನಿರ್ವಹಣಾಕಾರಿ ಟಿ. ಆರ್. ಉಮಾ ಉತ್ಸವದ ಉಸ್ತುವಾರಿ ವಹಿಸಿದ್ದು, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ, ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ, ಅರ್ಚಕವೃಂದ, ಸಿಬ್ಬಂದಿವರ್ಗ ಜಾತ್ರೆಯ ಯಶಸ್ಸಿಗೆ ಸಹಕರಿಸಿದ್ದರು. ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಬಿಗು ಪೊಲೀಸ್ ಬಂದೋವಸ್ತ್ ಹಾಗೂ ದಾರಿಯುದ್ದಕ್ಕೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Call us

ಗುರುವಾರ ರಾತ್ರಿ ದೇವರ ಅವಭ್ರತಸ್ನಾನ ನಡೆಯಲಿದೆ. ಹಾಗೂ ವಾರ್ಷಿಕ ಉತ್ಸವದ ಪ್ರಯುಕ್ತ ಕಳೆದ ಒಂದು ವಾರದಿಂದ ರಾಜ್ಯ-ಹೊರರಾಜ್ಯದ ಕಲಾವಿದರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗತ್ತಿವೆ.

Kolluru Car Fest March 30 - Kolluru Ratotsava (2) Kolluru Car Fest March 30 - Kolluru Ratotsava (3) Kolluru Car Fest March 30 - Kolluru Ratotsava (6) Kolluru Car Fest March 30 - Kolluru Ratotsava (7)

Kolluru Car Fest March 30 - Kolluru Ratotsava (13) Kolluru Car Fest March 30 - Kolluru Ratotsava (15) Kolluru Car Fest March 30 - Kolluru Ratotsava (16) Kolluru Car Fest March 30 - Kolluru Ratotsava (9) Kolluru Car Fest March 30 - Kolluru Ratotsava (10)

Kolluru Car Fest March 30 - Kolluru Ratotsava (4) Kolluru Car Fest March 30 - Kolluru Ratotsava (5) Kolluru Car Fest March 30 - Kolluru Ratotsava (11) Kolluru Car Fest March 30 - Kolluru Ratotsava (12)

Leave a Reply

Your email address will not be published. Required fields are marked *

seven + 10 =