ಆಭರಣ ಕಳವು ಪ್ರಕರಣ: ಕೊಲ್ಲೂರು ದೇವಳದ ನೌಕರನ ಕರ್ಮಕಾಂಡ ಬಯಲಿಗೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು: ಇಲ್ಲಿನ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಳದ ಆಭರಣ ಕಳವು ಪ್ರಕರಣ ನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಚಿನ್ನಾಭರಣ ಕಳವುಗೈದ ಘಟನೆ ಬಯಲಿಗೆ ಬರುತ್ತಿದ್ದಂತೆ ತಿಜೋರಿಯ ಕೀಲಿಕೈಯೊಂದಿಗೆ ಕಾಣಿಯಾಗಿದ್ದ ಆಪಾದಿತ ದೇವಳದ ಸಿಬ್ಬಂಧಿ ಶಿವರಾಮ ಮಡಿವಾಳ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಸಾರ್ವಜನಿಕರ ಸಮ್ಮುಖದಲ್ಲಿಯೇ ದೇವಳದ ತಿಜೋರಿಯನ್ನು ತೆರೆದು ನೋಡಿದಾಗಿ ಕಳವಾಗಿರುವ ಚಿನ್ನಾಭರಣಗಳ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿದೆ.

Call us

Click Here

Click here

Click Here

Call us

Visit Now

Click here

ಶಿವರಾಮ ಮಡಿವಾಳರ ಕೈಗೆ ತಿಜೋರಿ ಕೀಲಿಕೈ ದೊರೆತಾಗಿನಿಂದ ಇಲ್ಲಿಯವರೆಗೆ ದೇವಳಕ್ಕೆ ಹರಕೆಯ ರೂಪದಲ್ಲಿ ಸಂದಾಯವಾಗಿರುವ 47 ವಿವಿಧ ಬಗೆಯ ಚಿನ್ನಾಭರಣ ಬಗ್ಗೆ ರಶೀದಿಯಲ್ಲಿ ದಾಖಲಾಗಿದೆ. ಆದರೆ ತಿಜೋರಿ ತೆರೆದಾಗ 12 ಬಗೆಯ ಚಿನ್ನಾಭರಣದ ಹಾಗೂ ಇತರೆ ಬೆಳ್ಳಿಯ ಆಭರಣಗಳು ಮಾತ್ರ ದೊರೆತಿವೆ. ಉಳಿದ ಆಭರಣಗಳು ಖೋತಾ ಆಗಿರುವುದು ಸ್ಪಷ್ಟವಾಗಿದೆ. ಹಲವೆಡೆ ಸಾಲ ಮಾಡಿಕೊಂಡಿರುವ ಶಿವರಾಮ್, ಸಾಲ ತೀರಿಸಲು ದೇವಳದ ಚಿನ್ನಾಭರಣಗಳನ್ನೇ ಒಂದೊಂದಾಗಿ ಎಗರಿಸಿ ಬ್ಯಾಂಕಿನಲ್ಲಿ ಅಡವಿಟ್ಟಿರು ಬಗ್ಗೆ ಮಾಹಿತಿ ಲಭ್ಯವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ

ಹಲವರು ಭಾಗಿಯಾಗಿರುವ ಶಂಕೆ:
ದೇವರಿಗೆ ಹರಕೆಯ ರೂಪದಲ್ಲಿ ಸಲ್ಲಿಕೆಯಾದ ಚಿನ್ನಾಭರಣಗಳನ್ನು ವ್ಯವಸ್ಥಿತವಾಗಿ ಎಗರಿಸಿರುವ ಶಿವರಾಮ್ ಅವರ ಸಂಚಿನ ಹಿಂದೆ ಹಲವು ಕಾಣದ ಕೈಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ. ಶಿವರಾಮ ನಾಪತ್ತೆಯಾದ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಅವರು ಕೊಂಡೊಯ್ದಿದ್ದ ನಾಲ್ಕು ಲಕ್ಷ ಹಣ ಬ್ಯಾಂಕಿಗೆ ಮರುಸಂದಾಯವಾಗಿರುವುದು, ಡಿ ದರ್ಜೆಯ ನೌಕರನ ಕೈಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೀಲಿಕೈ ನೀಡಿ ಬೇಜವಾಬ್ದಾರಿ ತೋರ್ಪಡಿಸಿರುವುದು ಈ ಎಲ್ಲದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕೃತ್ಯವೆಸಗುವಾಗ ಪ್ರೋತ್ಸಾಹಿಸಿ, ಸಿಕ್ಕಿಬಿದ್ದಾಗ ತನ್ನನ್ನು ಒಬ್ಬಂಟಿಯನ್ನಾಗಿಸಿದ್ದಾರೆ ಎಂದು ಆಪಾದಿತ ಶಿವರಾಮ್ ದೂರಿಕೊಂಡಿರುವುದು ಅನುಮಾನಗಳಿಗೆ ಪುಷ್ಠಿ ನೀಡಿದಂತಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ

ಸಾರ್ವಜನಿಕರ ಸಮ್ಮುಖದಲ್ಲಿ ದೇವಳದ ತಿಜೋರಿ ತೆರೆಯುವ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್. ಉಮಾ, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ, ಅರ್ಚಕರಾದ ಕೆ. ಮಂಜುನಾಥ ಅಡಿಗ, ಕೆ. ನರಸಿಂಹ ಅಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಅರುಣಪ್ರಕಾಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ
►ಕೊಲ್ಲೂರು ದೇಗುಲದಲ್ಲಿ ಚಿನ್ನಾಭರಣ ಕಳವು? – http://kundapraa.com/?p=11395 .
► ದೇವಳದ ಭದ್ರತೆಯ ಬಗ್ಗೆ ಅನುಮಾನ. ಅಧಿಕಾರಿಗಳ ಬಗ್ಗೆ ಭಕ್ತರ ಆಕ್ರೋಶ – http://kundapraa.com/?p=11401 .
►ಕೊಲ್ಲೂರು ದೇವಳದ ಚಿನ್ನ ಕಳವು ಪ್ರಕರಣ. ಆಪಾದಿತ ನೌಕರ ಶಿವರಾಮ ಪತ್ತೆ – http://kundapraa.com/?p=11440 .

Call us

Leave a Reply

Your email address will not be published. Required fields are marked *

15 − 12 =