ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೋರ್ಗಿ ಗ್ರಾಮದಲ್ಲಿ ಮೇಯಲು ಬಿಟ್ಟ ಜಾನುವಾರುಗಳನ್ನು ಕದ್ದ ನಾಲ್ವರು ಗೋ ಕಳ್ಳರನ್ನು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ಧಾರೆ. ಶಂಕರ ಕುಲಾಲ್, ಅಶ್ಪಕ್ ಸಿರಾಜ್, ಸನ್ನಿ ಪೌಲೋಸ್ ಹಾಗೂ ಅಶ್ವಕ್ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬೈಂದೂರು ಸಮೀಪ ಚೆಕ್ ಪೋಸ್ಟ್ ಬಳಿ ಭಾನುವಾರ ಬೆಳಿಗ್ಗೆನ ಸುಮಾರಿಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಾಲೂಕಿನ ಕೊರ್ಗಿಯ ಶರತ್ ಶೆಟ್ಟಿ ಎಂಬವರ ಮನೆಯ ಮೂರು ಜಾನುವಾರುಗಳನ್ನು ಮೇಯಲು ಬಿಟ್ಟ ಸಂದರ್ಭ ಕಳವು ಮಾಡಿದ ಬಗ್ಗೆ ಜ.22ರಂದು ಕಂಡ್ಲೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಕಳವಾದ ದನಗಳಲ್ಲಿ ಎರಡು ಗಬ್ಬದ ಹಸುಗಳು ಸೇರಿ ಒಟ್ಟು ಮೂರು ಜಾನುವಾರುಗಳಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಒಂದು ವಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಪಿಎಸ್ಐ ರಾಜಕುಮಾರ್, ಸುಧಾ ಪ್ರಭು, ಸಿಬ್ಬಂದಿಗಳಾದ ಮಧು, ಆನಂದ್, ಸತೀಶ್, ನಾಗೇಶ್, ರಮೇಶ್, ಅನಿಲ್, ಶ್ರೀಕಾಂತ್, ಚಿದಾನಂದ ಮೊದಲಾದವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.