ಕೊರ್ಗಿ: ಹಲ್ಲೆ ನಡೆಸಿ ಮಹಿಳೆ ಆಭರಣ ದೋಚಿದ್ದ ಆರೋಪಿ ಬಂಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.11:
ತಾಲೂಕಿನ ಕೊರ್ಗಿ ಗ್ರಾಮದ ದಬ್ಬೆಕಟ್ಟೆ ಕಾಡಿನಬೇರೆ ಬಳಿ ಶಾಲೆಯಿಂದ ಬಸ್ಸಲ್ಲಿ ಬರುವ ಮಗಳನ್ನು ಮನೆಗೆ ಕರೆದೊಯ್ಯಲು ನಿಂತಿದ್ದ ಮಹಿಳೆ ತಲೆಗೆ ರಾಡಿನಲ್ಲಿ ಹೊಡೆದ ಆಭರಣ ದೋಚಿದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಹೊಸಾಡು ನಿವಾಸಿ ಪ್ರವೀಣ್ (24) ಬಂಧಿತ ಆರೋಪಿ

Call us

Call us

ಹಲ್ಲೆ ನಡೆಸಿ ದೋಚಿದ ಆಭರಣ ಗುಜ್ಜಾಡಿ ಸೊಸೈಟಿಯೊಂದರಲ್ಲಿ ಗಿರವಿ ಇಟ್ಟು 41 ಸಾವಿರ ನಗದು ಪಡೆದಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗುರುವಾರ ಸಂಜೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅಗಸ್ಟ್ 25ರವರೆಗೂ ನ್ಯಾಯಾಂಗ ಬಂಧನ ವಿಧಿಸಿದೆ.

Call us

Call us

ಅಗಸ್ಟ್ 5ರಂದು ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡ ದೇವಕಿ ಪೂಜಾರಿ ಎಂಬ ಮಹಿಳೆಯನ್ನು ಮಣಿಪಾಲ ಖಾಸಗಿ ಆಸ್ಪತ್ತೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಿಂದ ಚೇತರಿಸಿಕೊಂಡ ಮಹಿಳೆ ಇದೀಗ ಆಸ್ಪತ್ತೆಯಿಂದ ಬಿಡುಗಡೆ ಆಗಿದ್ದಾರೆ.

ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಂಡ್ಕೂರು ಎಸ್ಸೈ ನಿರಂಜನ ಗೌಡ ಮತ್ತು ಸಿಬ್ಬಂದಿ ಆರೋಪಿ ಬಂಧಿಸಿದ್ದಾರೆ.

ಕೃತ್ಯ ನಡೆಸುವ ಮೊದಲು ಆರೋಪಿ ಪ್ರವೀಣ್ ಎರಡು ಮೂರು ದಿನಗಳಿಂದ ಕೊರ್ಗಿ ಪರಿಸರಕ್ಕೆ ಬಂದು ಹೋಗುತ್ತಿದ್ದು, ದೇವಕಿಯವರ ಚಲನವಲನಗಳನ್ನು ಹತ್ತಿರದಿಂದಲೇ ಗಮನಿಸಿದ್ದ. ದೇವಕಿ ಅವರು ಮನೆಯಿಂದ ಹೊರಡುವ ಸಮಯ, ಶಾಲಾ ಬಸ್ ಬರುವ ಸಮಯ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಸಾಕಷ್ಟು ಪೂರ್ವ ತಯಾರಿ ನಡೆಸಿಕೊಂಡಿದ್ದ. ಕೃತ್ಯ ನಡೆಸುವ ಸ್ಥಳದಿಂದ ಅನತಿ ದೂರದಲ್ಲಿ ಬೈಕ್ ಅನ್ನು ನಿಲ್ಲಿಸಿ ರಾಡ್ನಿಂದ ಹಲ್ಲೆ ನಡೆಸಿ ಚಿನ್ನಾಭರಣವನ್ನು ಎಗರಿಸಿ ಆ ಬಳಿಕ ಬೈಕ್ ಮೂಲಕ ವಾಪಾಸ್ಸಾಗಿದ್ದ. ಘಟನೆ ನಡೆಯುವ ಸ್ವಲ್ಪ ಸಮಯದ ಮುಂಚೆ ವ್ಯಕ್ತಿಯೋರ್ವ ಬೈಕಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡಿದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರ ಆಧಾರದಲ್ಲಿ ಅಂಗಡಿಯೊಂದರ ಸಿಸಿ ಟಿವಿ ಪರೀಕ್ಷಿಸಿದ್ದು ತನಿಕೆ ಮುಂದುವರಿಸಿದ್ದರು. ಕೃತ್ಯಕ್ಕೆ ಸ್ನೇಹಿತನ ಬೈಕ್ ಬಳಸಿಕೊಂಡಿದ್ದು, ಕೀ ಇಲ್ಲದ ಕಾರಣ ಯಾವ ಸಮಯದಲ್ಲಾದರೂ ಬೈಕ್ ಅನ್ನು ಪ್ರವೀಣ್ ತೆಗೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್.ಕೆ. ಕುಂದಾಪುರ ಉಪವಿಭಾಗ ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್.ರವರ ನೇತೃತ್ವದಲ್ಲಿ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ್ ಗೌಡ ಬಿ. ಎಸ್, ಸಿಬ್ಬಂದಿಗಳಾದ ರಾಜು.ಬಿ, ಅನಿಲ್ ಕುಮಾರ್, ಚಿದಾನಂದ, ಜೀಪು ಚಾಲಕ ಆನಂದ, ಕುಂದಾಪುರ ಉಪವಿಭಾಗ ಅಪರಾಧ ಪತ್ತೆ ದಳದ ರಾಮು ಹೆಗ್ಡೆ ಮತ್ತು ರಾಘವೇಂದ್ರ ಉಪ್ಪುಂದ, ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಕಾರ್ಯಾಚರಣೆಯಲ್ಲಿ ಇದ್ದರು.

Leave a Reply

Your email address will not be published. Required fields are marked *

2 + 13 =