ಕೋಟ ಅವಳಿ ಕೊಲೆ ಪ್ರಕರಣ: ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಸೇರಿದಂತೆ 6 ಮಂದಿ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟದಲ್ಲಿ ನಡೆದ ಯುವರೀರ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣದ ರುವಾರಿ ಉಡುಪಿ ಜಿ. ಪಂ ಸದಸ್ಯ ರಾಘವೇಂದ್ರ ಕಾಂಚನ್(38) ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಒಟ್ಟು ಆರು ಮಂದಿ ಬಂಧಿತರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಫೆ.7ರಂದು ಮಡಿಕೇರಿಯಲ್ಲಿ ರಾಜಶೇಖರ ರೆಡ್ಡಿ(44), ರವಿ ಯಾನೆ ಮೆಡಿಕಲ್ ರವಿ(42) ಎಂಬವರನ್ನು ಬಂಧಿಸಲಾಗಿತ್ತು. ರಾಘವೇಂದ್ರನನ್ನು ಇಂದು ಕೋಟದಲ್ಲಿ ಬಂಧಿಸಲಾಗಿದೆ. ಹೊಸನಗರದಲ್ಲಿ ಮಣೂರು ಗ್ರಾಮದ ಹರೀಶ್ ರೆಡ್ಡಿ(40), ಕೊಡವೂರು ಗ್ರಾಮದ ಮಹೇಶ್ ಗಾಣಿಗ(38), ಉಡುಪಿ ಲಕ್ಷ್ಮಿ ನಗರದ ರವಿಚಂದ್ರ ಪೂಜಾರಿ(23) ಎಂಬವರನ್ನು ಬಂಧಿಸಲಾಗಿದೆ.

ಜ.27ರಂದು ನಡೆದ ಯುವಕರ ಬರ್ಬರ ಕೊಲೆ ಆರೋಪಿಗಳು ರಾಘವೇಂದ್ರ ಕಾಂಚನ್ ಜೊತೆ ಸಂಪರ್ಕದಲ್ಲಿದ್ದರು. ಕೊಲೆ ನಡೆದ ರಾತ್ರಿಯೇ ರಾಘವೇಂದ್ರ ಕಾಂಚನ್ ಸಂಪರ್ಕಿಸಿದ್ದರು. ಪೊಲೀಸ್ ತನಿಖೆ ಸಂದರ್ಭ ರಾಘವೇಂದ್ರ ಕಾಂಚನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿತ್ತು. ರಾಘವೇಂದ್ರ ಕಾಂಚನ್ ಅಧ್ಯಕ್ಷನಾಗಿದ್ದ ಸಂಘಟನೆಗೆ ಪರ್ಯಾಯವಾಗಿ ಭರತ್ ಬೇರೊಂದು ಸಂಘಟನೆಯಲ್ಲಿ ಸಕ್ರೀಯವಾಗಿದ್ದೇ ದ್ವೇಷಕ್ಕೆ ಕಾರಣವಾಗಿತ್ತು ಎನ್ನಲಾಗಿದ್ದು, ಇದರೊಂದಿಗೆ ಟಾಯ್ಲೆಟ್ ಪಿಟ್ ಹೊಂಡದ ಗಲಾಟೆಯೂ ಸೇರಿಕೊಂಡಿತ್ತು. ಯತೀಶನಿಗೂ ಈ ಪ್ರಕರಣಕ್ಕೂ ಸಂಬಂಧಿವಿಲ್ಲ ಎನ್ನಲಾಗಿದೆ.

ರಾಘವೇಂದ್ರ ಕಾಂಚನ್ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದು ಕೋಟ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ.

 

Also Read:

► ಕೋಟದಲ್ಲಿ ಯುವಕರಿಬ್ಬರ ಬರ್ಬರ ಕೊಲೆ – https://kundapraa.com/?p=30959 .

► ಕೋಟದಲ್ಲಿ ಸ್ನೇಹಿತರಿಬ್ಬರ ಕೊಲೆ: ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ – https://kundapraa.com/?p=30976 .

► ಸಾವಿನಲ್ಲೂ ಒಂದಾದ ಆಪ್ತ ಸ್ನೇಹಿತರು. ಮರುಗಿದ ಕೋಟ ಜನತೆ – https://kundapraa.com/?p=30979 .

► ಕೋಟ ಯುವಕರ ಹತ್ಯೆ ಪ್ರಕರಣ: ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ – https://kundapraa.com/?p=31009 .

Leave a Reply

Your email address will not be published. Required fields are marked *

one × 4 =