ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟ ಅವಳಿ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಎಲ್ಲಾ ಹದಿನಾರು ಆಪಾದಿತರ ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ಜನರಿಗೆ ಮಾ.೧ರ ತನಕ ನ್ಯಾಯಾಂಗ ಬಂಧನ ಹಾಗೂ ಇಬ್ಬರಿಗೆ ಫೆ.20ರ ತನಕ ಪೊಲೀಸ್ ಕಸ್ಟಿಡಿಗೆ ಒಪ್ಪಿಸಲಾಗಿದೆ.
ಕೋಟ ಪೊಲೀಸ್ ಠಾಣೆ ಸರಿಹದ್ದಿನ ಮಣೂರು ಚಿಕ್ಕಿನಕರೆ ಸಮೀಪ ಸ್ನೇಹಿತರಾದ ಭರತ್ ಶ್ರೀಯಾನ್ ಹಾಗೂ ಯತೀಶ್ ಕರ್ಕೇರ ಎಂಬವರ ತಲವಾರಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆ ನಡೆದ ನಂತರ ಆಪಾದಿತರು ತಲೆ ಮರೆಸಿಕೊಂಡಿದ್ದು, ವಿವಿಧ ಸ್ಥಳದಲ್ಲಿ ಕೊಲೆಗೆ ಸಂಬಂಧಿಸಿದ ವ್ಯಕ್ತಿಗಳ ಪೊಲೀಸರು ಬಂಧಿಸಿದ್ದರು. ಕೊಲೆಯಲ್ಲಿ ಭಾಗಿ ಹಾಗೂ ಸಾಕ್ಷಿನಾಶ ಮತ್ತು ಕೊಲೆಗಾರರಿಗೆ ಸಹಕಾರ ಮಾಡಿದ ಆರೋಪದಡಿ ಒಟ್ಟು ೧೬ಜನರ ಬಂಧಿಸಿದ್ದು, ಎಲ್ಲರನ್ನು ಕುಂದಾಪುರ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯ ನ್ಯಾಯಾಧೀಶ ಶ್ರೀಕಾಂತ್ ಮುಂದೆ ಹಾಜರು ಪಡಿಸಲಾಗಿತ್ತು.
ಅಭಿಷೇಕ್ ಪಾಲನ್, ರೊಟ್ಟಿ ನಾಗರಾಜ್, ಸಂತೋಷ್ ಕುಂದರ್, ಪ್ರಣವ್ ರಾವ್, ಪವನ್ ಅಮೀನ್, ವಿರೇಂದ್ರ ಆಚಾರ್ಯ, ರಿತೀಶ್ ಕರ್ಕೇರಾ, ಶಂಕರ ಮೊಗವೀರ, ರಾಜಶೇಖರ ರೆಡ್ಡಿ, ಹರೀಶ್ ರೆಡ್ಡಿ, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಮಹೇಶ್ ಗಾಣಿಗ, ರವಿಚಂದ್ರ ಹಾಗೂ ರವೀಂದ್ರ ಎಂಬವರಿಗೆ ಮಾ.೧ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜ.26 ರಾತ್ರಿ ಲೋಹಿತ್ ಪೂಜಾರಿ ಮನೆ ಮುಂದೆ ಭರತ್ ಶ್ರೀಯಾನ್ ಹಾಗೂ ಯತೀಶ್ ಕರ್ಕೇರ ಎಂಬವರ ಹರೀಶ್ ರೆಡ್ಡಿ, ಸಹೋದರರು ಹಾಗೂ ಸಹಚರರು ತಲಾವರು ಬೀಸಿ ಕೊಲೆ ಮಾಡಿ ನಾಪತ್ತೆಯಾಗಿದ್ದರು. ರೋಹಿತ್ ಪೂಜಾರಿ ಮನೆ ಥಂಡಾಸ್ ಬಿಟ್ ವಿಷಯದಲ್ಲಿ ಹರೀಶ್ ರೆಡ್ಡಿ ಹಾಗೂ ಲೋಹಿತ್ ಪೂಜಾರಿ ನಡುವೆ ವೈಮನಸ್ಸಿದ್ದು, ಮೆಹೆಂದಿ ಕಾರ್ಯಕ್ರಮ ಮುಗಿಸಿ ಮನೆಗೆ ಲೋಹಿತ್ ಪೂಜಾರಿ ಬರುವ ಸಮಯದಲ್ಲಿ ಕೊಲೆ ಆಪಾದಿತರು ಫಾಲೋ ಮಾಡಿಕೊಂಡು ಬಂದಿದ್ದರು. ತನ್ನ ಮೇಲೆ ಹಲ್ಲೆ ನಡೆಯುತ್ತದೆ ಎಂಬ ಭಯದಲ್ಲಿ ಲೋಹಿತ್ ಪೂಜಾರಿ ಭರತ್ ಹಾಗೂ ಯತೀಶ್ ಅವರಿಗೆ ದೂರವಾಣಿ ಮೂಲಕ ಸಹಾಯ ಯಾಚಿಸಿದ್ದರು.
ಕೋಟದಿಂದ ಭರತ್ ಹಾಗೂ ಯತೀಶ್ ಸ್ಥಳಕ್ಕೆ ಬಂದಿದ್ದು, ಮೊದಲು ಭರತ್ ಮೇಲೆ ತಲವಾರು ಧಾಳಿ ನಡೆಸಲಾಗಿತ್ತು. ಭರತ್ ಸ್ಥಳದಲ್ಲೇ ಮೃತಪಟ್ಟರೆ ಯತೀಶ್ ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆ ಮೃತಪಟ್ಟಿದ್ದರು. ಕೊಲೆ ಕೃತ್ಯ ಖಂಡಿಸಿ, ಆರೋಗಿಗಳ ತಕ್ಷಣ ಬಂಧಿಸುವಂತೆ ಕೋಟದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಲ್ಲದೆ, ಕೋಟ ಶ್ರೀ ಅಮೃತೇಶ್ವರ ದೇವಸ್ಥಾಲದಲ್ಲಿ ಕೊಲೆ ಆಪಾದಿತರಿಗೆ ಶಿಕ್ಷೆ ನೀಡುವಂತೆ ಹುಯಿಲು ನೀಡಲಾಗುತ್ತು. ತನಿಕಾಧಿಕಾರಿ ಜೈಶಂಕರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಅರೋಪಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಕೋಟ ಅವಳಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಗುರುವಾರ ಪೊಲೀಸರು ಇಬ್ಬರ ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಬೆಳಗ್ಗೆ ಎಂಟು ಹಾಗೂ ಮಧ್ಯಾಹ್ನ 8 ಜನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಗುರುವಾರ ಬಂಧಿಸಿದ ರೋಪಿಗಳಾದ ಚಂದ್ರಶೇಖರ ರೆಡ್ಡಿ ಹಾಗೂ ಸುಜಯ್ ಎಂಬವರಿಗೆ ನ್ಯಾಯಾಧೀಶ ಶ್ರೀಕಾಮತ್ ಫೆ.20ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಜಾಮೀನಿಗಾಗಿ ಅರ್ಜಿ
ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಪವನ್ ಅಮೀನ್, ವಿರೇಂದ್ರ ಆಚಾರ್ಯ ಹಾಗೂ ಕಾಲೇಜ್ ವಿದ್ಯಾರ್ಥಿ ಪ್ರಣವ್ ರಾವ್ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅರ್ಜಿ ಸಲ್ಲಿಸಿದರು. ಆಪಾದಿತರಾದ ಪವನ್ ಅಮೀನ್, ವಿರೇಂದ್ರ ಆಚಾರ್ಯ ಹಾಗೂ ಪ್ರಣವ್ ರಾವ್ ಘಟನೆಯಲ್ಲಿ ನೇರವಾಗಿ, ಒಳ ಸಂಚು ಹಾಗೂ ಪ್ರಚೋದನೆಯಲ್ಲಿ ಭಾಗಿಯಾಗಿಲ್ಲ. ಸಾಕ್ಷೀ ನಾಶ ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ್ದಾರೆ ಎನ್ನುವ ಆರೋಪಗಳು ಜಾಮೀನು ಪರಿಗಣನೆಗೆ ಅರ್ಹವಾಗಿದ್ದು, ಜಾಮೀನು ಅರ್ಜಿ ಶೀಘ್ರವೇ ಇತ್ಯರ್ಥ ಪಡಿಸುವಂತೆ ಮನವಿ ಮಾಡಿದರು. ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಂಗಲ ನಾಯಕ್ ಮಂಡಿಸಲಿರುವುದರಿಂದಾಗಿ ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ:
► ಕೋಟದಲ್ಲಿ ಯುವಕರಿಬ್ಬರ ಬರ್ಬರ ಕೊಲೆ – https://kundapraa.com/?p=30959 .
► ಕೋಟದಲ್ಲಿ ಸ್ನೇಹಿತರಿಬ್ಬರ ಕೊಲೆ: ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ – https://kundapraa.com/?p=30976 .
► ಸಾವಿನಲ್ಲೂ ಒಂದಾದ ಆಪ್ತ ಸ್ನೇಹಿತರು. ಮರುಗಿದ ಕೋಟ ಜನತೆ – https://kundapraa.com/?p=30979 .
► ಕೋಟ ಯುವಕರ ಹತ್ಯೆ ಪ್ರಕರಣ: ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ – https://kundapraa.com/?p=31009 .
► ಕೋಟ ಅವಳಿ ಕೊಲೆ ಪ್ರಕರಣ: ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಸೇರಿದಂತೆ 6 ಮಂದಿ ಬಂಧನ – https://kundapraa.com/?p=31071 .
► ಡಬ್ಬಲ್ ಮರ್ಡರ್ ಆರೋಪಿಗಳ ಜೊತೆ ನಂಟು, ಇಬ್ಬರು ಪೇದೆಗಳ ಆರೆಸ್ಟ್ – https://kundapraa.com/?p=31204