ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟೇಶ್ವರ: ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿರುವ ಸನರೈಸ್ ಮಾರ್ಕೆಟಿಂಗ್ನ ವಠಾರದಲ್ಲಿರುವ ಶ್ರೀ ಸುಧೀಂದ್ರ ಪ್ರಸಾದ ಕಟ್ಟಡದಲ್ಲಿ ಯುಪಿವಿಸಿಯಿಂದ ಬಾಗಿಲು ಹಾಗೂ ಕಿಟಕಿಯನ್ನು ತಯಾರಿಸುವ ಹೊಸ ಉದ್ಯಮವಾದ ‘ರೋಯ್ಸ ಯುಪಿವಿಸಿ ಡೋರ್ಸ & ವಿಂಡೋಸ್’ ಅನ್ನು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು. ದೀಪ ಪ್ರಜ್ವಲಿಸಿ ಹಾಗೂ ಯಂತ್ರದ ಗುಂಡಿಯನ್ನು ಒತ್ತುವುದರ ಮೂಲಕ ಘಟಕದ ಆರಂಭಕ್ಕೆ ಚಾಲನೆ ನೀಡಿದರು.
ಡಿ.ಜಿ.ಕೆ. ಸಮೂಹ ಸಂಸ್ಥೆಯ ಆಡಳಿತ ಪಾಲುದಾರರಾದ ದಿನೇಶ ಜಿ ಕಾಮತ್ ಸ್ವಾಮೀಜಿಯವರನ್ನು ಬರಮಾಡಿಕೊಂಡರು. ಯಂತ್ರಗಳ ಹಾಗೂ ತಯಾರಿಸ್ಪಡುವ ಉತ್ಪನಗಳ ಮಾಹಿತಿಯನ್ನು ಸ್ವಾಮೀಜಿಯವರಿಗೆ ರಾಜೇಂದ್ರ ಡಿ ಕಾಮತ್ ನೀಡಿದರು. ನಂತರ ಸ್ವಾಮೀಜಿಯವರಿಗೆ ಕುಟುಂಬದ ವತಿಯಿಂದ ಪಾದಪೂಜೆ ಸೇವೆ ಸಲ್ಲಿಸಲಾಯಿತು. ಈ ಸಂಸ್ಥೆಯ ವೆಬ್ಸೈಟನ್ನು ಹಾಗೂ ಮಾಹಿತಿ ಕೈಪಿಡಿಯನ್ನು ಗುರುವರ್ಯರು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಹೊಸ ಯುರೋಪಿಯನ್ ತಂತ್ರಜ್ಞಾನದಿಂದ ಇಲ್ಲಿ ಯುಪಿವಿಸಿ ಬಾಗಿಲು ಹಾಗೂ ಕಿಟಕಿಯನ್ನು ತಯಾರಿಸಲಾಗುತ್ತದೆ. ಸ್ಲೈಡಿಂಗ್, ಕೇಸ್ಮೆಂಟ್, ಫ್ರೆಂಚ್ ಡೋರ್, ಟಿಲ್ಟ್ & ಟರ್ನ್ ಹಾಗೂ ಬೈ-ಫೋಲ್ಡ್ ಮುಂತಾದ ಮಾದರಿಯ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕ ಹೊಂದಿದೆ. ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಯುರೋಪಿಯನ್ ಯುಪಿವಿಸಿ ಬಾಗಿಲು ಮತ್ತು ಕಿಟಕಿಗಳನ್ನು ತಯಾರಿಸುವ ಹೆಮ್ಮೆ ಈ ಸಂಸ್ಥೆಯದಾಗಿದೆ. ಈ ಉತ್ಪನ್ನಗಳನ್ನು ಉಪಯೋಗಿಸುವುದರಿಂದ ದೂಳುರಹಿತ, ಶಬ್ದದ ಪ್ರಮಾಣ ಕಡಿಮೆಯಾಗುವಂತಹ ಮನೆಯ/ಕಟ್ಟಡದ ವಾತಾವರಣ ನಿರ್ಮಾಣವಾಗುತ್ತದೆ ಹಾಗೂ ಹವಾನಿಯಂತ್ರಿತ ಪರಿಸರಿದಲ್ಲಿ ವಿದ್ಯುತ್ತಿನ ಬಳಕೆ ಕಡಿಮೆಯಾಗುತ್ತದೆ. ಈ ಸಂಸ್ಥೆ ತಮ್ಮ ಉತ್ಪನ್ನಗಳಿಗೆ ೧೦ ವರ್ಷದ ವಾರಂಟಿ ಯನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ.