ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಲಿ., ಉಪ್ಪುಂದ ಇದರ ನೂತನ ಕಟ್ಟಡ ರೈತಸಿರಿ ಲೋಕಾರ್ಪಣೆಗೆ ಸಜ್ಜುಗೊಂಡಿದ್ದು ಡಿ.೧೪ರ ಬುಧವಾರ ಭವ್ಯ ಕಾರ್ಯಕ್ರಮದೊಂದಿಗೆ ಉದ್ಘಾಟನೆಗೊಳ್ಳಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಸಭಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಅವರು ಉಪ್ಪುಂದದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ರಾಜ್ಯ ಸಹಕಾರ ಸಚಿವ ರಮೇಶ ಜಾರಕಿಹೋಳಿ ಉದ್ಘಾಟಿಸಲಿದ್ದು, ಪ್ರಧಾನ ಕಛೇರಿಯನ್ನು ಮೀನುಗಾರಿಕೆ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಬ್ಯಾಂಕಿಂಗ್ ವಿಭಾಗವನ್ನು ಕ.ರಾ.ಸ.ಮಾರಾಟ ಮಹಾಮಂಡಳಿ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ವಹಿಸಲಿದ್ದಾರೆ. ರೈತಸಿರಿ ಸಭಾಭವನವನ್ನು ಶಾಸಕ ಕೆ.ಗೋಪಾಲ ಪೂಜಾರಿ, ರೈತರ ಉತ್ಪತ್ತಿ ದಾಸ್ತಾನು ಮತ್ತು ಕೃಷಿ ಸಲಕರಣೆ ಮಳಿಗೆಯನ್ನು ಮಾಜಿ ಸಚಿವ ವಿನಯಕುಮಾರ ಸೊರಕೆ, ನ್ಯಾಯಬೆಲೆ ಅಂಗಡಿಯನ್ನು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ನೂತನ ಗಣಕೀಕರಣ ಕೇಂದ್ರವನ್ನು ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ, ಭದ್ರತಾ ಕೋಶವನ್ನು ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಸಂಜೆ 6 ಗಂಟೆಗೆ ಸಹಕಾರಿ ಸಂಜೆ-ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ವಹಿಸಲಿದ್ದು, ಹಿರಿಯ ಸಹಕಾರಿ, ಪ್ರಾ.ಸ.ಕೃಷಿ ಗ್ರಾಮೀಣಾಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಎಸ್.ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ರಾತ್ರಿ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ-ಗಾನ-ನಾಟ್ಯ-ಯಕ್ಷ-ವೈಭವ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಬಿ. ರಘುರಾಮ ಶೆಟ್ಟಿ, ಕೆ. ಮೋಹನ ಪೂಜಾರಿ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ವಾಮನ ಪೈ ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿವರ:
ಮೆರವಣಿಗೆ ಬೆಳಿಗ್ಗೆ 9:30ಕ್ಕೆ (ಪೂರ್ಣಿಮಾ ಪೆಟ್ರೋಲ್ ಬಂಕ್ ಹತ್ತಿರದಿಂದ)
* 10 ಗಂಟೆಗೆ ಉದ್ಘಾಟನೆ-ನೂತನ ಕಟ್ಟಡ “ರೈತಸಿರಿ”
*10:30ಕ್ಕೆ ಉಪ್ಪುಂದ ಶಾಲೆಬಾಗಿಲಿನ ಭವ್ಯ ವೇದಿಕೆಯಲ್ಲಿ ಸಭಾಕಾರ್ಯಕ್ರಮ.
* ಗಣೇಶ್ ಗಂಗೊಳ್ಳಿ ಇವರಿಂದ ಸಂಗೀತ ಕಾರ್ಯಕ್ರಮ ಜೊತೆಯಲ್ಲಿ ಶೈಲಜಾ ಭಟ್ ಉಪ್ರಳ್ಳಿ ಇವರಿಂದ ಕುಂದಾಪುರ ಕನ್ನಡ ಭಾಷೆಯ ಭತ್ತಕುಟ್ಟುವ ಹಾಡುಗಳು.
* ರಾಜ್ಯ ಸರಕಾರದ ಯೋಜನೆಯಂತೆ ಸಾಲಮನ್ನಾ ರೈತರಿಗೆ ಮರುಸಾಲ ವಿತರಣೆ ಚಾಲನೆ.
* ಕೇಂದ್ರ ಸರಕಾರದ ಕೃಷಿ ಪತ್ತಿನ ಸಂಘಗಳ ಮೂಲಕ ಉತ್ಪಾದನಾ ಕಂಪೆನಿಗಳ ಸ್ಥಾಪಿಸಲು ಪೂರಕವಾಗುವ ಸಂಘದ ಪ್ರಾಯೋಜಿತ ರೈತಸಿರಿ ರೈತ ಕೂಟಕ್ಕೆ ಚಾಲನೆ.
*ಮಧ್ಯಾಹ್ನ ಸುಮಾರು 10,000ಜನರಿಗೆ ಊಟೋಪಚಾರದ ವ್ಯವಸ್ಥೆ.
*ಸಂಜೆ:- ಮಾಜಿ ಅಧ್ಯಕ್ಷರು, ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಮಾಜಿ ನಿರ್ದೇಶಕರು, ಹಾಗೂ ಹಾಲಿ ನಿರ್ದೇಶಕರುಗಳಿಗೆ ಸನ್ಮಾನ.
* ಸಂಗೀತ
* ಯಕ್ಷಗಾನ