ಕುಂಭಾಶಿ: ಶಿಥಿಲ ಸೂರಲ್ಲಿ ವಾಸಿಸುವ ಕುಟುಂಬಕ್ಕೆ ಬೇಕಿದೆ ಸಹೃದಯಿಗಳ ನೆರವು

Click Here

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಸೋರುವ ಮಾಡು, ಶಿಥಿಲಗೊಂಡಿರುವ ಗೋಡೆಯ ಸಣ್ಣ ಸೂರೊಳಕ್ಕೆ ಏಳು ಮಂದಿಯ ನಿತ್ಯದ ಬದುಕು. ಕುಟುಂಬಕ್ಕೆ ನೆಲೆಯಾಗಬೇಕಿದ್ದ ಪತಿರಾಯ ಮನೆಯತ್ತ ಸುಳಿಯುವುದೇ ಇಲ್ಲ. ರಕ್ತ ಸಂಬಂಧಿಗಳಂತೂ ಸದ್ಯಕ್ಕೆ ಯಾರೂ ಇಲ್ಲ. ದಿನವೂ ಆತಂಕದ ನಡುವೆ ಮಕ್ಕಳೊಂದಿಗೆ ಬದುಕುತ್ತಿರುವ ಮಹಿಳೆಗೆ ಆರೋಗ್ಯವೂ ಆಗಿಂದ್ದಾಗೆ ಕೈಕೊಡುತ್ತಿದೆ. ಇದು ತಾಲೂಕಿನ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಳೆಕಟ್ಟು ನಿವಾಸಿ ಶಕುಂತಲಾ ಪೂಜಾರ್ತಿ ಎಂಬುವವರ ಕುಟುಂಬದ ಕರುಣಾಜನಕ ಕಥೆ.

Call us

Call us

Visit Now

ಕುಂಭಾಶಿಯ ಹೊಳೆಕಟ್ಟಿವಿನ ಶಕುಂತಲಾ ಅವರಿಗೆ ಆರು ಮಕ್ಕಳು. ಕೂಲಿ ಮಾಡಿ ಮಕ್ಕಳೊಂದಿಗೆ ನಿತ್ಯದ ಬದುಕು ಸವೆಸುತ್ತಿದ್ದರೂ ತಿಂಗಳ ರೇಷನ್ ಅಕ್ಕಿಯನ್ನೇ ಇಡಿ ಕುಟುಂಬ ನಂಬಿ ಕುಳಿತಿದೆ. ಇಷ್ಟರ ಮಧ್ಯೆ ಶಾಕುಂತಲ ಅವರಿಗೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು ದುಡಿದು ತಿನ್ನಬೇಕೆನ್ನುವ ಛಲವನ್ನೇ ಹತ್ತಿಕ್ಕುತ್ತಿದೆ. ಮಕ್ಕಳಿಗೆ ಉತ್ತಮ ಬದುಕು, ಶಿಕ್ಷಣ ಕೊಡಿಸಬೇಕೆಂಬುವ ತಾಯಿಯ ಹಂಬಲ; ಶಿಥಿಲಗೊಂಡಿರುವ ಮನೆಯಯನ್ನು ದುರಸ್ತಿಗೊಳಿಸುವ ಅನಿವಾರ್ಯ ಸಂದರ್ಭ ಕೈಗೂಡಲು ಆರ್ಥಿಕ ಸಮಸ್ಯೆ ಅಡ್ಡಿ ಉಂಟುಮಾಡುತ್ತಿದೆ.

Click Here

Click here

Click Here

Call us

Call us

ಕುಂಭಾಶಿ ಗ್ರಾಮ ಪಂಚಾಯತಿಯ ಹೊಳೆಕಟ್ಟುವಿನಲ್ಲಿ ಕುಟುಂಬಿಕರಿಂದ ಬಂದ ಸ್ವಂತ ಜಾಗದಲ್ಲಿ ವಾಸಿಸುತ್ತಿರುವ ಶಾಕುಂತಲ ಪೂಜಾರ್ತಿ ಅವರು ಮನೆ ಕಟ್ಟಿಕೊಳ್ಳಬೇಕೆಂಬ ಕಾರಣಕ್ಕೆ ಸರಕಾರದ ಯೋಜನೆಗಳ ಹಿಂದೆ ಹೋಗಿದ್ದರೂ ಈವರೆಗೂ ಆ ಬಗ್ಗೆ ಪಂಚಾಯತ್ ಸಮರ್ಪಕವಾದ ಮಾಹಿತಿ ಒದಗಿಸದೇ ಅವಕಾಶವಂಚಿರನ್ನಾಗಿಸಿದೆ. ಶೌಚಾಲಯ ನಿರ್ಮಾಣಕ್ಕೆ ನೀಡಬೇಕಿದ್ದ ೧೨೦೦೦ ರೂ ಅನುದಾನದಲ್ಲಿ ೬೦೦೦ರೂ ಅಷ್ಟನೇ ನೀಡಿ ೧೨,೦೦೦ ಅನುದಾನ ನೀಡಿರುವ ಬೋರ್ಡ್ ಹಾಕಿ ಹೋಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಹೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಈ ಕುಟುಂಬದ ಮನೆಯ ಕನಸು ಈಡೇರುವುದೇ? ಕುಂದಾಪ್ರ ಡಾಟ್ ಕಾಂ ವರದಿ.

ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿರುವ ಆ ಮಕ್ಕಳಿಗೆ ಸುರಕ್ಷಿತ ಮನೆ, ಶಿಕ್ಷಣದೊಂದಿಗೆ ಉತ್ತಮವಾದ ಬದುಕು ಕಟ್ಟಿಕೊಳ್ಳಲು ಸಹೃದಯಿಗಳು ಮನಸ್ಸು ಮಾಡಬೇಕಿದೆ. ಆ ಕುಟುಂಬದ ನೋವಿನಲ್ಲಿ ಒಂದಿಷ್ಟು ಜೊತೆಯಾಗಿ ಸಾಧ್ಯವಾದ ಸಹಾಯವನ್ನು ಮಾಡಬಹುದಾಗಿದೆ. ಅವರ ಮನೆ ದುರಸ್ತಿಗೆ ಸಹಾಯ ಮಾಡುವ ಇಚ್ಛೆ ಇರುವವರು ಶಾಕುಂತಲಾ ಪೂಜಾರ್ತಿ ಅವರ ಮಗಳ ಭಾರತಿಯ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ/ಕುಂದಾಪ್ರ ಡಾಟ್ ಕಾಂ/

ವಿಜಯ ಬ್ಯಾಂಕ್ ಕುಂಭಾಶಿ ಶಾಖೆ
ಬ್ಯಾಂಕ್ ಎಸ್.ಬಿ ಖಾತೆ ಸಂಖ್ಯೆ – 140801011002074
ಐಎಫ್‌ಎಸ್‌ಸಿ: VIJB0001408

  • ಕುಟುಂಬಕ್ಕೆ ನೆರವಾಗಲು ಸಾಸ್ತಾನ ಮಿತ್ರರ ತಂಡವೂ ಜೊತೆಯಾಗಿದ್ದು ಕುಟುಂಬದ ಸ್ಥಿತಿಗತಿಗಳ ಬಗೆಗೆ ಮಾಹಿತಿ ತಿಳಿದುಕೊಳ್ಳಬಹುದು. ಮೊಬೈಲ್ – 8197407570

Leave a Reply

Your email address will not be published. Required fields are marked *

5 × five =