ಪೆಟ್ರೊಲ್ ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ,ದೇಶದ ಜನ ಕೋವಿಡ್ -19 ನಿಂದ ಸಂಕಷ್ಟದಿಂದ ಇರುವ ಸಂದರ್ಭದಲ್ಲಿ ಡಿಸೇಲ್,ಪೆಟ್ರೊಲ್ ಬೆಲೆ ನಿರಂತರವಾಗಿ ಎರಿಸಿರುವುದು ಕೇಂದ್ರದ ಬಿಜೆಪಿ ಸರಕಾರದ ರಾಕ್ಷಸಿ ಪ್ರವೃತ್ತಿಯ ಸಂಕೇತ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿಹೇಳಿದರು.

Click Here

Call us

Call us

ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯ ನೇತ್ರತ್ವ ವಹಿಸಿ ಮಾತನಾಡಿ ಹಿಂದೆ ಮನ ಮೋಹನ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ಅಂತಾರಾಷ್ಟ್ರಿಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೆ ಎರಿದಾಗ ದೇಶದಲ್ಲಿ ತೈಲ ಬೆಲೆ ಹೆಚ್ಚಿಸಿದಾಗ ಬೀದಿಗಿಳಿದು ಹೋರಾಟ ಮಾಡಿವವರೇ ಈಗ ಅಧಿಕಾರದಲ್ಲಿದ್ದು ಪ್ರಸ್ತುತ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದುದರಿಂದ 30 ರಿಂದ 35 ರೂಪಾಯಿಗೆ ಡಿಸೇಲ್ ನೀಡಬೇಕಿತ್ತು. ಇದು ಜನ ಸಾಮಾನ್ಯರ ಪರವಾದ ಪ್ರತಿಭಟನೆ ಎಂದ ಅವರು ಕೋವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು ಆರ್ಥಿಕವಾಗಿ ಜನರು ಹೃರಾಣಾಗಿದ್ದಾರೆ ಎಂದರು .

Click here

Click Here

Call us

Visit Now

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಶಂಕರ ಕುಂದರ, ವಿಕಾಸ್ ಹೆಗ್ಡೆ, ಅಶೋಕ್ ಪೂಜಾರಿ, ಇಚ್ಚಿತಾರ್ಥ್ ಶೆಟ್ಟಿ, ಶ್ಯಾಮಲ ಭಂಡಾರಿ , ಕುಮಾರ್ ಖಾರ್ವಿ, ಅಣ್ಣಯ್ಯ ಪುತ್ರನ್, ಚಂದ್ರ ಅಮೀನ್, ದೇವಕಿ ಸಣ್ಣಯ್ಯ, ಕೆ. ಶಿವಕುಮಾರ್, ಶಶಿರಾಜ್ , ಶ್ರೀನಿವಾಸ ಶೆಟ್ಟಿ, ವಿಠಲ್ ಕಾಂಚನ್, ಚಂದ್ರಶೇಖರ್ ಶೆಟ್ಟಿ, , ಬಿ.ವೈ. ರಾಘವೇಂದ್ರ, ಸ್ಟೀವನ್ ಡಿ ಕೋಸ್ಟಾ , ಶ್ರೀಧರ ಶೇರಿಗಾರ್, ಚಂದ್ರಶೇಖರ್ ಖಾರ್ವಿ, ಮೋಹಮದ್ ಹುಸೇನ್, ರಘುರಾಮ ನಾಯ್ಕ್, ರೋಶನ್ ಶೆಟ್ಟಿ, ಶಿವರಾಮ್ ಪುತ್ರನ್, ಧನರಾಜ್, ಶಶಿರ, ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.ನಂತರ ಸಹಾಯಕ ಕಮಿಷನರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಗಣೇಶ ಶೇರಿಗಾರ್ ಸ್ವಾಗತಿಸಿ ,ಚಂದ್ರಶೇಖರ ಖಾರ್ವಿ ವಂದಿಸಿದರು. ವಿನೋದ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

Call us

 

Leave a Reply

Your email address will not be published. Required fields are marked *

17 + one =