ಕುಂದಾಪ್ರ ಡಾಟ್ ಕಾಂ ವಿಶೇಷಾಂಕಕ್ಕೆ ಕುಂದಾಪ್ರ ಕನ್ನಡದ ಬರಹ ಆಹ್ವಾನ

ಕುಂದಾಪುರ: ಕುಂದಾಪುರ ತಾಲೂಕನ್ನು ವಿಶ್ವಕ್ಕೆ ಪರಿಚಯಿಸುತ್ತಾ ಕುಂದನಾಡಿಗರ ಧ್ವನಿಯಾಗಿರುವ ಹೆಮ್ಮೆಯ ‘ಕುಂದಾಪ್ರ ಡಾಟ್ ಕಾಂ’ ಅಂತರ್ಜಾಲ ಸುದ್ದಿತಾಣವು ತನ್ನ ಐದನೇ ವರ್ಷದ ಸಂಭ್ರಮಾಚರಣೆಗೆ ಪೂರ್ವಭಾವಿಯಾಗಿ ಕುಂದಾಪ್ರ ಕನ್ನಡದ ಭಾಷಾ ಸೊಗಡನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಉದ್ದೇಶದಿಂದ ತಾಲೂಕಿನ ಇತಿಹಾಸದಲ್ಲಿಯೇ ಮೊದಲ ಭಾರಿಗೆ ಕುಂದಾಪ್ರ ಕನ್ನಡದ ವಿಶೇಷಾಂಕವನ್ನು ಪ್ರಕಟಿಸುತ್ತಿದೆ.

ಕುಂದಗನ್ನಡದ ವಿಶೇಷಾಂಕಕ್ಕೆ ಬರಹಗಾರರಿಂದ ಕುಂದಾಪ್ರ ಕನ್ನಡದ ಬರಹಗಳನ್ನು ಆಹ್ವಾನಿಸಲಾಗಿದ್ದು, ಕುಂದಾಪುರ ಭಾಷಾಪ್ರಾಂತ್ಯದ ವೈವಿಧ್ಯ, ವಿಶೇಷತೆ, ಇತಿಹಾಸ, ಕಲೆ, ಸಂಸ್ಕೃತಿ, ಜಾನಪದ, ಸಾಹಿತ್ಯ, ಭಾಷಾ ಸೊಗಡು, ಜನ ಜೀವನ ಮುಂತಾದ ವಿಷಯದ ಕುರಿತಾದ ಲೇಖನ, ಕಥೆ, ಕವನ, ಸಂಗ್ರಹ ಬರಹಗಳನ್ನು ಎರಡು ಪುಟ ಮೀರದಂತೆ ನುಡಿ ಅಥವಾ ಬರಹದಲ್ಲಿ ಟೈಪ್ ಮಾಡಿ ಪೋಸ್ಟ್ ಅಥವಾ ಇಮೇಲ್ ಮಾಡಬಹುದಾಗಿದೆ. ನಿಮ್ಮ ಬರಹಗಳನ್ನು ಸುನಿಲ್ ಬೈಂದೂರು, ಸಂಪಾದಕರು ಕುಂದಾಪ್ರ ಡಾಟ್ ಕಾಂ, ಪೋಸ್ಟ್-ತಗ್ಗರ್ಸೆ, ಕುಂದಾಪುರ ತಾಲೂಕು 576214 ಈ ವಿಳಾಸಕ್ಕೆ ಅಂಚೆ ಅಥವಾ editor@kundapra.com ಗೆ ಇಮೇಲ್ ಮುಖಾಂತರ ನವೆಂಬರ್ 25ರ ಒಳಗಾಗಿ ಕಳುಹಿಸಬಹುದಾಗಿದೆ.

  • ಹೆಚ್ಚಿನ ಮಾಹಿತಿಗಾಗಿ 9738877358 ಸಂಖ್ಯೆಯನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

fourteen − two =