ಟ್ರೋಲ್ ಕುಂದಾಪ್ರದ್ ಕುಡಿಯಿಂದ ‘ಕುಂದಗನ್ನಡ ವಿಡಿಯೋ ಚಾಲೆಂಜ್’

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಪರಿಸರದ ಸೋಶಿಯಲ್ ಮೀಡಿಯಾ ಪೇಜ್ ‘ಟ್ರೋಲ್ ಕುಂದಾಪ್ರದ್ ಕುಡಿ’ ಕುಂದಾಪುರದ ಪ್ರತಿಭೆಗಳನ್ನು ಬೆಳಕಿಗೆ ತರುವ ಹಾಗೂ ಕುಂದಗನ್ನಡ ಪಸರಿಸುವ ನಿಟ್ಟಿನಲ್ಲಿ ಕುಂದಗನ್ನಡ ವಿಡಿಯೋ ಚಾಲೆಂಜ್ ಎಂಬ ಸೋಶಿಯಲ್ ಮೀಡಿಯಾ ಅಭಿಯಾನವನ್ನು ಆರಂಭಿಸಿದೆ.

Click Here

Call us

Call us

‘ಟ್ರೋಲ್ ಕುಂದಾಪ್ರದ್ ಕುಡಿ’ಯ ಈ ವಿಭಿನ್ನ ಪ್ರಯತ್ನ ಕುಂದಗನ್ನಡ ವೀಡಿಯೋ ಚಾಲೆಂಜ್‌ಗೆ ಈಗಾಗಲೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕುಂದಗನ್ನಡ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Click here

Click Here

Call us

Visit Now

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೆಸರು ಮಾಡಿರುವ ಕುಂದಾಪುರ ಭಾಗದ ಕಲಾವಿದರೂ ಕೂಡ ಕುಂದಾಪ್ರ ಕನ್ನಡ ಚಾಲೆಂಜ್ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಕುಂದಾಪ್ರ ಕನ್ನಡ ಚಾಲೆಂಜ್‌ನಲ್ಲಿ ಭಾಗವಹಿಸುವವರು ಸ್ವದೇಶಿ ಆಪ್ ಹಾಗೂ ಮೊಬೈಲ್ ಕ್ಯಾಮರಾ ಬಳಸಿ ವಿಡಿಯೋ ಮಾಡಿ ಎಂದು ಪೇಜ್ ಅಡ್ಮಿನ್‌ಗಳು ಮನವಿ ಮಾಡಿಕೊಂಡಿದ್ದಾರೆ.

ಜನರು ಬಿಡುವಿನ ಸಮಯದಲ್ಲಿ ಮನೋರಂಜನೆಗಾಗಿ ವಿಡಿಯೋ ಮಾಡಲು ಬೇರೆ ಬೇರೆ ಭಾಷೆಗಳಲ್ಲಿನ ಡೈಲಾಗ್ ಅಥವಾ ಹಾಡುಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅದೇ ಪ್ರಯತ್ನವನ್ನು ನಮ್ಮ ಕುಂದಗನ್ನಡದಲ್ಲಿ ಮಾಡಿದಾಗ ಇತರರಿಗೂ ನಮ್ಮ ಭಾಷೆಯ ಸೊಗಡು ತಿಳಿಯುತ್ತದೆ. ಹಲವಾರು ಪ್ರತಿಭೆಗಳು ಬೆಳಕಿಗೆ ಬರುತ್ತಾರೆ. ಇದರಿಂದ ಮುಂದೆ ಕುಂದಗನ್ನಡ ಆಲ್ಬಂ, ಕಿರುಚಿತ್ರ ಹಾಗೂ ಸಿನೆಮಾಗಳಿಗೆ ಬೇಡಿಕೆ ಬರುತ್ತದೆ. – ಶಾಶ್ವತ್ ಶೆಟ್ಟಿ, ಕುಂದಾಪ್ರದ್ ಕುಡಿ ಟ್ರೋಲ್ ಪೇಜ್ ಅಡ್ಮಿನ್

Call us

Leave a Reply

Your email address will not be published. Required fields are marked *

20 + one =