ನೆಹರು ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ: ನಿರ್ಣಯ ಕಾದಿರಿಸಿದ ಜಿಲ್ಲಾ ಉಸ್ತವಾರಿ ಸಚಿವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಯಕ್ಷಗಾನ ಅಭಿಮಾನಿಗಳು ಹಾಗೂ ಸಾರ್ವಜನಿಕರ ಒಕ್ಕೂರಲ ಒತ್ತಾಯ, ಚರ್ಚೆ ನಡುವೆ ಅಂತಿಮ ತೀರ್ಮಾನವನ್ನು ಜಿಲ್ಲಾ ಉಸ್ತವಾರಿ ಸಚಿವರು ಕಾದಿರಿಸಿದ್ದು, ಯಕ್ಷಭಿಮಾನಿಗಳು ನಿರ್ಣಯ ಹೇಗೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೆಹರು ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನಿಡುವ ಕುರಿತು ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಇಲಾಖೆ ಅಧಿಕಾರಿಗಳು, ಯಕ್ಷಪ್ರಿಯರು, ಕಲಾವಿದರು ಹಾಗೂ ಸಾರ್ವಜನಿಕರ ಅಭಿಪ್ರಾಯ ಕಲೆ ಹಾಕಲಾಗಿದ್ದು, ಒಂದಿಬ್ಬರು ಬಿಟ್ಟರೆ ಮತ್ತೆಲ್ಲರೂ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಸಲಹೆ ಮಾಡಿದರು. ಇದಕ್ಕೆ ಇಲಾಖೆ ಅಧಿಕಾರಿಗಳು ಕೂಡಾ ಪರೀಕ್ಷೆ ಸಮಯ ಹೊರತು ಪಡಿಸಿ, ಯಕ್ಷಗಾನ ಪ್ರದರ್ಶನಕ್ಕೆ ಅವಾಕಾಶ ನೀಡಲು ಅಭ್ಯಂತರವಿಲ್ಲ ಎನ್ನುವ ಅಭಿಪ್ರಾಯ ಸಭೆಯಲ್ಲಿ ಮೂಡಿಬಂತು.

ಯಕ್ಷಾಗಾನ ಅಭಿಮಾನಿ ರಾಮಕೃಷ್ಣ ಹೇರ್ಳೆ, ಮಾಜಿ ಕುಂದಾಪುರ ಪುರಸಭೆ ಅಧ್ಯಕ್ಷ ನರಸಿಂಹ, ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ಪರ್ತಕರ್ತರಾದ ಜಾನ್ ಡಿಸೋಜಾ, ಕೆ.ಸಿ.ರಾಜೇಶ್, ಕೆ.ಜಿ.ವೈದ್ಯ, ನ್ಯಾಯವಾದಿ ಮಹಾಬಲ ತ್ರಾಸಿ, ಕಮ್ಯುನಿಸ್ಟ್ ಪಕ್ಷದ ವೆಂಕಟೇಶ್ ಕೋಣೆ, ಜೆಡಿಎಸ್ ಮುಖಂಡ ಕಿಶೋರ್, ತೆಂಕು ಬಡಗು ತಿಟ್ಟು ಕಲಾವಿದ ವಾಸುದೇವ ಸಾಮಗ ಮಲ್ಪೆ, ಪೆರ್ಡೂರು ಮೇಳ ಮಾಲೀಕ ವೈ.ಕರುಣಾಕರ ಶೆಟ್ಟಿ, ಯಕ್ಷಗಾನ ಅಕಾಡೆಮಿ ಸದಸ್ಯ ಪಳ್ಳಿ ಕಿಶನ್ ಹೆಗ್ಡೆ. ನರಂಸಿಂಹ ವಡೇರ ಹೋಬಳಿ ಮುಂತಾದವರು ನೆಹರೂ ಮೈದಾನದಲ್ಲಿ ಯಕ್ಷಗಾನಕ್ಕೆ ಅವಕಾಶ ಮಾಡಿಕೊಡುವ ಜೊತೆ ಸಾಂಸ್ಕೃತಿ ಪ್ರದರ್ಶನಕ್ಕೆ ನೆಹರೂ ಮೈದಾನ ಕಾದಿರಿಸುವಂತೆ ಒತ್ತಾಯಿಸಿರು

ಸಾರ್ವಜನಿಕರ ಅಭಿಪ್ರಾಯ ನಂತರ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಪ್ರದರ್ಶನ ಮಿತಿ ಜೊತೆ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಚಿಂತಿಸಲಾಗುತ್ತದೆ. ಕುಂದಾಪುರ ನೆಹರು ಮೈದಾನದಲ್ಲಿ ನಡೆಯುವ ಯಕ್ಷಗಾನದ ಬಗ್ಗೆ ಗೊತ್ತಿದ್ದು, ನಾನೂ ಕೂಡಾ ಪಾಲ್ಗೊಂಡಿದ್ದೆ. ಯಕ್ಷಗಾನ ಪ್ರದರ್ಶನದ ಎಲ್ಲಾ ಮಜಲುಗಳ ಒಳ, ಹೊರ ತಿಳಿದು ಹೆಜ್ಜೆ ಇಡಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಚರ್ಚಿಸದ ಎಲ್ಲಾ ವಿಷಯಗಳ ಮುಂದಿಟ್ಟುಕೊಂಡು ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿ ಅತೀ ಶೀಘ್ರದಲ್ಲಿ ಅಂತಿಮ ನಿಲುವ ಪ್ರಕಟಿಸಲಾಗುತ್ತದೆ. ಸ್ವಚ್ಛತೆ ಬಗ್ಗೆ ಡಿಪಾಸಿಟ್ ಇನ್ನಿತರ ಸಂಗತಿಗಳ ಬಗ್ಗೆಯೂ ಯೋಚಿಸಿ, ಹಾಸ್ಟೆಲ್, ಆಶ್ರಮ ಶಾಲೆ ಎಲ್ಲವನ್ನೂ ಗಮನದಲ್ಲಿಟ್ಟು ಕೊಂಡು ಯಕ್ಷಗಾನ ಅವಕಾಶ ಮಾಡಿಕೊಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಮೊಗವೀರ, ತಹಸೀಲ್ದಾರ್ ಜಿ.ಎಂ.ಬೋರ್ಕರ್ ಇದ್ದರು .

ಇದನ್ನೂ ಓದಿ
► ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ದೊರೆಯುತ್ತಿಲ್ಲ ಅನುಮತಿ – http://kundapraa.com/?p=18845 

► ಯಕ್ಷಗಾನ ಪ್ರದಶನಕ್ಕೆ ಆಗ್ರಹಿಸಿ ಪತ್ರ ಚಳವಳಿ- http://kundapraa.com/?p=18870

► ಯಕ್ಷಗಾನ ಪ್ರದರ್ಶನಕ್ಕೆ ಪರವಾನಿಗೆ ನೀಡದಿದ್ದರೆ ಕಾನೂನು ಸಮರಕ್ಕೂ ಸಿದ್ಧ: ಜಯಪ್ರಕಾಶ್ ಹೆಗ್ಡೆ – http://kundapraa.com/?p=18876

 ►  ಯಕ್ಷಗಾನ ಪ್ರದರ್ಶನ ತಡೆಹಿಡಿದಿರುವ ಬಗ್ಗೆ ಕುಂದಾಪುರದ ಜನಪ್ರತಿನಿಧಿಗಳು, ಗಣ್ಯರು ಏನಂತಾರೆ?- http://kundapraa.com/?p=18870

► ವಲಸೆ ಕಾರ್ಮಿಕರಿಗೆ ನೆಹರೂ ಮೈದಾನವೇ ಆಶ್ರಯತಾಣ – http://kundapraa.com/?p=18944 

Leave a Reply

Your email address will not be published. Required fields are marked *

5 × five =