ಕುಂದಾಪುರ: ಯೋದರ ಮೇಲಿನ ಉಗ್ರ ದಾಳಿಗೆ ಕಾಂಗ್ರೆಸ್ ಖಂಡನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿನ್ನೆ ಪಾಕಿಸ್ತಾನ ಪ್ರೇರಿತ ಕಾಶ್ಮೀರ ಉಗ್ರನೊಬ್ಬ ಬಾಂಬ್ ದಾಳಿ ನಡೆಸಿ 40ಸಿಆರ್‌ಪಿಎಫ್ ಯೋದರ ಹತ್ಯೆಗೆ ಕಾರಣವಾಗಿರುವ ಘಟನೆಯನ್ನು ಕಾಂಗ್ರೆಸ್ ಪಕ್ಷವು ಅತ್ಯುಗ್ರವಾಗಿ ಖಂಡಿಸುತ್ತದೆ ಮತ್ತು ಈ ಘಟನೆಯು ಕಾಶ್ಮೀರದಲ್ಲಿ ಕಳೆದ 20ವರ್ಷಗಳಲ್ಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ ಆ ಕಾರಣಕ್ಕಾಗಿ ಜೀವದ ಹಂಗು ತೊರೆದು ದೇಶವನ್ನು ರಕ್ಷಿಸುವ ಯೋದರ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಕೇಂದ್ರ ಸರ್ಕಾರ ಈಗಿಂದೀಗಲೇ ಕೈಗೊಳ್ಳಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಆಗ್ರಹಿಸಿದ್ದಾರೆ.

ಅವರು ಇಂದು ಕಾಂಗ್ರೆಸ್ ಕಛೇರಿ ಇಂದಿರಾ ಪ್ರಿಯದರ್ಶಿನಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಘಟನೆಯನ್ನು ಖಂಡಿಸಿ ಮಾತನಾಡುತ್ತಿದ್ದರು.

ಈ ಸಂಧರ್ಭದಲ್ಲಿ ಹಿರಿಯ ಮುಖಂಡರಾದ ಗೋಪಾಲ್ ಕೃಷ್ಣ ಶೆಟ್ಟಿ, ಕೃಷ್ಣದೇವ ಕಾರಂತ, ನಾರಾಯಣ ಆಚಾರ್, ವಿನೋದ್ ಕ್ರಾಸ್ಟೊ, ಅಬ್ದುಲ್ಲಾ ಕೋಡಿ, ಚಂದ್ರಶೇಖರ ಶೆಟ್ಟಿ, ಧರ್ಮ ಪ್ರಕಾಶ್, ಶೋಬಾ ಸಚ್ಚಿದಾನಂದ, ಅಶೋಕ್ ಸುವರ್ಣ, ಕೇಶವ ಭಟ್, ಶಿವಾನಂದ ಕೆ. ಜ್ಯೋತಿ ಡಿ. ನಾಯ್ಕ್, ಚಂದ್ರಕಾಂತ ಖಾರ್ವಿ, ಹೇಮಾ ಪೂಜಾರಿ, ಅಶ್ಫಕ್ ಅಹಮ್ಮದ್, ಗಣೇಶ್ ಶೆಟ್ಟಿ, ಕೃಷ್ಣ ಮೊಗವೀರ, ವಿಠ್ಠಲ ಕಾಂಚನ್, ಅಣ್ಣಯ್ಯ ಪುತ್ರನ್, ಸದಾನಂದ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

twelve + 8 =