ಕುಂದಾಪುರ ಮೂಲದ ದಂಪತಿಗೆ ಜರ್ಮನಿಯಲ್ಲಿ ಚೂರಿ ಇರಿತ

Call us

Call us

ಘಟನೆಯಲ್ಲಿ ಪತಿ ಸಾವು, ಪತ್ನಿಗೆ ಗಂಭೀರ ಗಾಯ

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪೂರ್ವ ಜರ್ಮನಿಯ ಮ್ಯೂನಿಚ್ ನಗರದಲ್ಲಿ ನಡೆದ ಗಲಾಟೆಯೊಂದರಲ್ಲಿ ವಿದೇಶಿಗನೋರ್ವನಿಂದ ಕುಂದಾಪುರ ಮೂಲದ ದಂಪತಿಗಳಾದ ಪ್ರಶಾಂತ್ ಬಸ್ರೂರು (47) ಹಾಗೂ ಸ್ಮಿತಾ ಬಸ್ರೂರು ಇರಿತಕ್ಕೊಳಗಾಗಿದ್ದು, ಘಟನೆಯಲ್ಲಿ ಪ್ರಶಾಂತ್ ಬಸ್ರೂರು ದಾರುಣವಾಗಿ ಮೃತಪಟ್ಟಿದ್ದಾರೆ. ಅವರ ಪತ್ನಿ ಸ್ಮಿತಾ ಬಸ್ರೂರು ಅವರಿಗೂ ಗಂಭೀರ ಹಲ್ಲೆಯಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Click here

Call us

Call us

ಪ್ರಶಾಂತ್ ಹಾಗೂ ಸ್ಮಿತಾ ದಂಪತಿಗಳು ಜರ್ಮನಿಯ ಹಂಬರ್ಗ್ ನಗರದಲ್ಲಿ ವಾಸಿಸುತ್ತಿದ್ದು ಅಲ್ಲಿನ ಪೌರತ್ವ ಪಡೆದಿದ್ದರು. ಸ್ಮಿತಾ ಸಿದ್ಧಾಪುರದ ಡಾ. ಚಂದ್ರಮೌಳಿ ಎಂಬುವವರ ಪುತ್ರಿಯಾಗಿದ್ದು, ಮದುವೆಯ ಬಳಿಕ ಪತಿಯೊಂದಿಗೆ  ಹಂಬರ್ಗ್ ನಗರದಲ್ಲಿ ವಾಸಿಸುತ್ತಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಶಾಂತ್ ಶಿವಮೊಗ್ಗ ಜಿಲ್ಲೆಯ ಹೊಸನಗರದವರಾಗಿದ್ದು, ಹತ್ತು ವರ್ಷದ ಹಿಂದೆ ಕುಂದಾಪುರದಲ್ಲಿ ಮನೆ ಖರೀದಿಸಿದ್ದರು. ಅವರ ತಾಯಿ ಕುಂದಾಪುರದಲ್ಲಿ ನೆಲೆಸಿದ್ದರು. ಸಹೋದರ ಪ್ರಭಾತ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು ಎನ್ನಲಾಗಿದೆ. ಮುಂದಿನ ತಿಂಗಳು ೯ರಂದು ಅವರು ತಮ್ಮ ಹುಟ್ಟೂರಿಗೆ ಬರುವವರಿದ್ದು ಈ ನಡುವೆ ಪ್ರಶಾಂತ್ ಅವರ ತಾಯಿಯನ್ನು ಜಪಾನಿಗೆ ಕರೆದುಕೊಂಡು ಹೋಗಲು ವೀಸಾಗೆ ಸಿದ್ಧಪಡಿಸಿದ್ದರು ಎನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

  ಪತ್ನಿ ಮಕ್ಕಳೊಂದಿಗೆ ಪ್ರಶಾಂತ್ ಬಸ್ರೂರ್

ಪ್ರಶಾಂತ್ ಹಾಗೂ ಸ್ಮಿತಾ ದಂಪತಿಗಳು ಮ್ಯೂನಿಚ್ ನಗರಕ್ಕೆ ಶಾಂಪಿಂಗ್‌ಗೆ ತೆರಳಿದ್ದಾಗ ಹಂಬರ್ಗ್‌ನ ಅಪಾರ್ಟ್‌ಮೆಂಟ್ ವಿಚಾರದಲ್ಲಿ ಆಫ್ರಿಕ ಮೂಲದ ವಲಸಿಗ ಹಾಗೂ ಪ್ರಶಾಂತ್ ನಡುವೆ ಗಲಾಟೆ ನಡೆದಿದ್ದು, ಆತ ಏಕಾಏಕಿ ಚೂರಿಯಿಂದ ಹಲ್ಲೆಗೆ ಮುಂದಾಗಿದ್ದ ಎನ್ನಲಾಗಿದೆ. ಘಟನೆಯಲ್ಲಿ ಪ್ರಶಾಂತ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದರೇ, ತಪ್ಪಿಸಲು ಹೋದ ಸ್ಮಿತಾ ಅವರಿಗೂ ಗಾಯಗಳಾಗಿವೆ. ದ್ವೇಷಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸದ್ಯ ದಂಪತಿಗಳ ಮಕ್ಕಳನ್ನು ಚೈಲ್ಡ್ ಕೇರ್‌ನಲ್ಲಿ ಇರಿಸಲಾಗಿದೆ. ಘಟನೆಯ ಬಗ್ಗೆ ವರದಿಯಾಗುತ್ತಿದ್ದಂತೆ ಭಾರತದ ವಿದೇಶಾಂಗ ಕಾರ್ಯಾಲಯ ಪ್ರಶಾಂತ್ ಅವರ ಸಹೋದರನನ್ನು ಜರ್ಮನಿಗೆ ತೆರಳಲು ಅನುವು ಮಾಡಿಕೊಟ್ಟಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ ಮಾಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Indian couple stabbed in Munich, Sushma Swaraj offers assistance

Leave a Reply

Your email address will not be published. Required fields are marked *

10 + ten =