ಕುಂದಾಪುರ ಸೌತ್ ರೋಟರಿ ಕ್ಲಬ್‌ ಮೂಲಕ ಸರ್ಕಾರಿ ಆಸ್ಪತ್ರೆಗೆ 2 ಮೊರ್ಚರಿ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಜಿಲ್ಲೆಯ ಅನುದಾನದಿಂದ ಕುಂದಾಪುರ  ಸೌತ್ ರೋಟರಿ ಕ್ಲಬ್  ಮುಖಾಂತರ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಎರಡು ಶವ ಶೀತಲೀಕರಣ ಘಟಕಗಳನ್ನು (mortuary) ಮಂಗಳವಾರ ಹಸ್ತಾಂತರಿಸಲಾಯಿತು.

ಈ ಸಂದರ್ಭ ಶೀತಲೀಕರಣ ಘಟಕ ಹಸ್ತಾಂತರಿಸಿದ ರೋಟರಿ ಜಿಲ್ಲೆಯ ಪೂರ್ವ ಗವರ್ನರ್ ಅಭಿನಂದನ್ ಎ. ಶೆಟ್ಟಿ ಮಾತನಾಡಿ, ರೋಟರಿ ಜಿಲ್ಲಾ ಅನುದಾನದ ಮೂಲಕ ಸಮಾಜಕ್ಕೆ ಅಗತ್ಯತೆಯನ್ನು ಮನಗಂಡು ಒದಗಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಹುಕಾಲದ ಅಗತ್ಯತೆಯಾಗಿದ್ದ ಮೊರ್ಚರಿಯ ಬಗ್ಗೆ ರೋಟರಿ ಅಂತರಾಷ್ಟ್ರೀಯ ಜಿಲ್ಲೆಯ ಗಮನಕ್ಕೆ ತರಲಾಗಿತ್ತು. 2018-19ರ ಅನುದಾನದ ರೂ.5 ಲಕ್ಷದಲ್ಲಿ ಎರಡು ಬಾಡಿ ಮೊರ್ಚರಿ ಸ್ಟೋರೇಜ್ ಸಿಸ್ಟಮ್ ಈಗ ಲಭಿಸಿದೆ. ಮೃತರಾದ ವ್ಯಕ್ತಿಯ ಮನೆಯವರು ಬರುವುದು ವಿಳಂಬವಾದರೆ ಅಲ್ಲಿನ ತನಕ ಶವವನ್ನು ಸಂಗ್ರಹಿಸಿ ಇಡಲು ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಫೌಂಡೇಶನ್ ಕಮಿಟಿ ಚೆರ್ ಮನ್ ಸದಾನಂದ ಚಾತ್ರ, ವಲಯ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ 2018-19ರ ಅಧ್ಯಕ್ಷ ಜೋನ್ಸನ್ ಆಲ್ಮೆಡಾ, ಕಾರ್ಯದರ್ಶಿ ರಾಮ್ ಪ್ರಸಾದ್ ಶೇಟ್, 2019-20ರ ಅಧ್ಯಕ್ಷ ದೇವರಾಜ, ಕಾರ್ಯದರ್ಶಿ ಶೋಭಾ ಭಟ್ ಮೊದಲಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

4 × five =