ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಕುಂದಾಪುರದ ಶ್ರೀ ವೆಂಕಟ್ರಮಣ ವಿದ್ಯಾ ಸಂಸ್ಥೆ

Call us

Call us

‘ಶಿಕ್ಷಣವು ಮನುಷ್ಯರನ್ನು ಶ್ರೇಷ್ಠ ನಾಗರಿಕರನ್ನಾಗಿ ಮಾಡುತ್ತದೆ’. ಶ್ರೇಷ್ಠ ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ನುಡಿಯಂತೆ ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣವು ಪ್ರಮುಖ ಸಾಧನವಾಗಿದೆ. ಈ ದಿಶೆಯಲ್ಲಿ ಆರಂಭವಾದ ವಿದ್ಯಾ ಸಂಸ್ಥೆಯು ವಿಶಾಲವಾದ ಕಟ್ಟಡ, ದಕ್ಷ ಆಡಳಿತ ಮಂಡಳಿ, ಅನುಭವಿಶಾಲಿ ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಶಿಕ್ಷಕ ವೃಂದ, ಸದಾ ಪ್ರೆರೇಪಿಸುವ ಪೋಷಕರು ಹಾಗೂ ಸೃಜನಶೀಲ ವಿದ್ಯಾರ್ಥಿಗಳಿಂದ ಸಮ್ಮಿಳಿತಗೊಂಡ ಸಂಸ್ಥೆಯೇ ಶ್ರೀ ವೆಂಕಟ್ರಮಣ ಸಮೂಹ ಶಿಕ್ಷಣ ಸಂಸ್ಥೆ.

Call us

Call us

Call us

ಶ್ರೀ ವೆಂಕಟ್ರಮಣ ದೇವ್ ಎಜ್ಯುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್ ನ ಶೀರ್ಷಿಕೆಯಡಿಯಲ್ಲಿ ಕುಂದಾಪುರ ಪರಿಸರದ ಜಿ.ಎಸ್.ಬಿ. ಸಮಾಜದ ಮುಖಂಡರಾದ ಕೆ. ವಿಶ್ವನಾಥ ಕಾಮತ್, ಕೆ. ಸಂಜೀವ ಪ್ರಭು ಮುಂತಾದ ಗಣ್ಯರ ಸಹಯೋಗದೊಂದಿಗೆ 01/06/1987ರಲ್ಲಿ ನಗರದ ಕೋಟೆ ಆಂಜನೇಯ ದೇಗುಲದ ಪರಿಸರದಲ್ಲಿ ಪ್ರಾರಂಭವಾದ ಶ್ರೀ ವೆಂಕಟ್ರಮಣ ವಿದ್ಯಾ ಸಂಸ್ಥೆಯು ಇಂದು ಅನುಕ್ರಮವಾಗಿ ಫ್ಲೇ ಸ್ಕೂಲ್, ನರ್ಸರಿ, ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನವರೆಗೆ ಹಂತ ಹಂತವಾಗಿ ಬೆಳೆಯುತ್ತಾ ರಾಜ್ಯ ಪಠ್ಯಕ್ರಮದ ಶಿಕ್ಷಣ ನೀಡಲಾಗುತ್ತಿದೆ. ಪ್ರಸ್ತುತ ಸುಮಾರು 3000ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

Call us

Call us

ಗುಣಮಟ್ಟದ ಶಿಕ್ಷಣಕ್ಕಾಗಿ ನಿರಂತರ ಬದ್ಧತೆಯನ್ನು ಕಾಯ್ದುಕೊಂಡು ಬಂದಿರುವ ಈ ಶಿಕ್ಷಣ ಸಂಸ್ಥೆಯ ಶಿಕ್ಷಣ ಕ್ಷೇತ್ರದ ಸಾಧನೆ ಅಪಾರವಾದದ್ದು. ಕಳೆದ ನಾಲ್ಕು ವರ್ಷಗಳಿಂದ (2018,2019,2020,2021) ದ್ವಿತೀಯ ಪಿ.ಯು.ಸಿ.ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ. 2019-20ನೇ ಶೈಕ್ಷಣಿಕ ಸಾಲಿನಲ್ಲಿ ನಾಲ್ಕು ವಿದ್ಯಾರ್ಥಿಗಳು ರಾಜ್ಯ ಮಟ್ಟದ ರ್ಯಾಂಕ್’ಗಳನ್ನು ಪಡೆಯುವುದರ ಮೂಲಕ ಇಡೀ ರಾಜ್ಯವ್ಯಾಪಿ ಶಿಕ್ಷಣ ಸಂಸ್ಥೆ ಎಂದು ಗುರುತಿಸಿಕೊಂಡಿದೆ. CET, NEET, JEE ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವುದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶದಲ್ಲಿಯೂ ಅಗ್ರಗಣ್ಯ ಸ್ಥಾನ ಪಡೆದುಕೊಂಡಿದ್ದು, ಈ ಮೂಲಕ ಉಡುಪಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ಪಡೆಯುವುದರ ಮೂಲಕ ಕುಂದಾಪುರ ತಾಲೂಕಿನ ಉನ್ನತ ಶಿಕ್ಷಣ ಸಂಸ್ಥೆಯಾಗಿ ಮೂಡಿ ಬಂದಿದೆ. 2020-21ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯ 218 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು 600/600 ಪರಿಪೂರ್ಣ ಅಂಕಗಳನ್ನು ಪಡೆಯುವುದರ ಮೂಲಕ ಸಂಸ್ಥೆಯ ಸಾಧನೆಯ ಶಿಖರವನ್ನು ಉತ್ತುಂಗಕ್ಕೆ ಏರಿಸಿದ್ದಾರೆ.

ಶೈಕ್ಷಣಿಕವಾಗಿ ಸಾಧನೆಯ ಶಿಖರವನ್ನು ಏರುತ್ತಿರುವ ನಮ್ಮ ಕಾಲೇಜು ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪು ಮೂಡಿಸುವುದರ ಮೂಲಕ ಸಾಧನೆಯ ಹಾದಿಗೆ ಮತ್ತಷ್ಟು ಪುಷ್ಟಿ ದೊರಕಿದಂತಾಗಿದೆ.

ಕಳೆದ 11 ವರ್ಷಗಳಿಂದ ಪದವಿ ಪೂರ್ವ ಹಂತದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಶಿಕ್ಷಣ ನೀಡುತ್ತಾ ಬಂದಿದ್ದು, ವಿಜ್ಞಾನ ವಿಭಾಗದಲ್ಲಿ PCMB, PCMS, PCMC, PCME ಹಾಗೂ ವಾಣಿಜ್ಯ ವಿಭಾಗದಲ್ಲಿ CEBA,SEBA,ಹಾಗೂ BEBA ಪಠ್ಯಕ್ರಮ ವಿಭಾಗಗಳನ್ನು ಹೊಂದಿದೆ.

ಶಿಸ್ತುಬದ್ಧ ಶಿಕ್ಷಣಕ್ಕೆ ಅರಸಿ ಬಂದ ವಿದಾರ್ಥಿಗಳ ಸಂಖ್ಯೆ ಸಾವಿರಾರು. ಸಾಗಿ ಬಂದ ಹಾದಿಯುದ್ಧಕ್ಕೂ ಇರಿಸಿದ ಹೆಜ್ಜೆ ಗಾಡವಾಗಿದೆ. ಶಿಸ್ತು, ಅಚ್ಚುಕಟ್ಟುತನ, ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ಮಕ್ಕಳ ಆಂತರ್ಯದಲ್ಲಿ ಬಿತ್ತಿದ ಕಾರಣಕ್ಕೆ ಸಂಸ್ಥೆಯಲ್ಲಿ ಸುಶಿಕ್ಷಿತ ವಿದ್ಯಾರ್ಥಿಗಳು ಹೊರ ಹೊಮ್ಮುತ್ತಿದ್ದಾರೆ.

ಮೌಲ್ಯಯುತ ಶಿಕ್ಷಣವನ್ನು ನೀಡುವುದರ ಜೊತೆ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಉದ್ದೇಶವನ್ನು ಇಟ್ಟುಕೊಂಡು ಅನೇಕ ಸೃಜನಶೀಲ ಚಟುವಟಿಕೆಗಳನ್ನು ಆಯೋಜನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಚಿತ್ತ ಭಿತ್ತಿಯಲ್ಲಿ ಚಿಗುರೊಡೆಯುವ ಆಲೋಚನೆಗಳಿಗೆ ಪುಷ್ಟಿ ನೀಡಿ ಬಲ ಪಡಿಸಲಾಗುತ್ತಿದ್ದು, ಕೇವಲ

ಓದಿಗಷ್ಟೆ ಸೀಮಿತವಾಗಿರದೆ ಸ್ಪರ್ಧಾತ್ಮಕ ಜಗತ್ತಿನ ವೇಗದ ಜೊತೆಗೆ ಹೆಜ್ಜೆ ಹಾಕಲು ಇಂದಿನ ಯುವ ಪೀಳಿಗೆಗೆ ವಿಶೇಷ ತರಬೇತಿಗಳ ಅಗತ್ಯವಿರುವುದನ್ನು ಮನಗೊಂಡು ಭವಿಷ್ಯದಲ್ಲಿ ವಿವಿಧ ಉದ್ಯೋಗಗಳನ್ನು ಪಡೆಯಲು ಬೇಕಾಗಿರುವ ಸಂದರ್ಶನಗಳನ್ನು ಎದುರಿಸುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುಲಾಗುತ್ತಿದೆ, ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷಾ ಕೌಶಲ್ಯವನ್ನು ಹೆಚ್ಚಿಸುವ ಸಲುವಾಗಿ ವಿವಿಧ ಚಟುವಟಿಕೆ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳ ವೈಕ್ತಿತ್ವದ ಬೆಳವಣಿಗೆಗಾಗಿ ವ್ಯಕ್ತಿತ್ವ ವಿಕಸನದಂತಹ ತರಬೇತಿ ಹಾಗೂ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ವಿದ್ಯಾರ್ಥಿ ಕೌನ್ಸಲಿಂಗ್ ನಡೆಸಲಾಗುತ್ತಿದೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ವರ್ಷದುದ್ದಕ್ಕೂ ಆಯೋಜನೆ ಮಾಡುವುದರ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ವಿದ್ಯಾರ್ಥಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ.

ಶ್ರೀ ವೆಂಕಟ್ರಮಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ದೊರಕುವ ವಿಶೇಷ ಸೌಲಭ್ಯಗಳು:

  • ಸ್ಪರ್ಧಾತ್ಮಕ ಪರೀಕ್ಷೆಗಳಾದ CET/ NEET/JEE-M/IIT/KVPY/NATA/NDA/CA,CS ತರಗತಿಗಳು CMAಹಾಗೂ Banking Foundation Courseಗಳಿಗೆ ಅನುಭವಶಾಲಿ ಉಪನ್ಯಾಸಕರಿಂದ ಉತ್ತಮ ರೀತಿಯ ತರಬೇತಿ.
  • ವಿಜ್ಞಾನ ವಿಭಾಗವನ್ನು ಆರಿಸಿಕೊಂಡು ಸಂಶೋಧನಾ ಕ್ಷೇತ್ರಕ್ಕೆ ಹೋಗ ಬಯಸುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ Indian Institute of Science ಹಮ್ಮಿಕೊಂಡಿರುವ KVPY(Kishor Vaigyanic Protsahan Yojana) Fellowship Award 2021-22 ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಉತ್ತಮ ಫಲಿತಾಂಶವನ್ನು ಪಡೆಯುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ.
  • ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತರಗತಿ ಕಲಿಕೆಯ ಜೊತೆಗೆ ಪ್ರಾಯೋಗಿಕ ಜ್ಞಾನಕ್ಕಾಗಿ Business Day, Industrial Visit ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
  • ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ಕ್ರೀಡಾ ಉತ್ತೇಜನಕ್ಕಾಗಿ ನಮ್ಮ ಕಾಲೇಜಿನಲ್ಲಿ ಉಚಿತ ಪ್ರವೇಶವನ್ನು ನೀಡಲಾಗುವುದು.
  • ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿಗಳು
  • ದೂರದ ಊರುಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗಾಗಿ ಬಸ್ ವ್ಯವಸ್ಥೆ. (ಶಿರೂರು, ಬೈಂದೂರು, ಹೊಸಂಗಡಿ, ಬ್ರಹ್ಮಾವರ, ಕೊಲ್ಲೂರು, ಗೋಳಿಹೊಳೆ, ಕೊರ್ಗಿ, ಕೆದೂರು, ಹಾಲಾಡಿ, ಹುಣ್ಸೆಮಕ್ಕಿ, ಕಾಳಾವರ, ಸಲ್ವಾಡಿ ಈ ಮಾರ್ಗಗಳ ಮೂಲಕ ಕಾಲೇಜಿನ ಕ್ಯಾಂಪಸ್ ವರೆಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.)

ವಿದ್ಯಾರ್ಥಿಗಳ ಜ್ಞಾನಕೌಶಲ್ಯವನ್ನು ಗಟ್ಟಿಗೊಳಿಸಲು ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ವಿದ್ಯಾರ್ಥಿಗಳ ಹೊಂಗನಸು ನನಸಾಗಲೆಂಬುದು ಸಂಸ್ಥೆಯ ರೂವಾರಿಯಾದ ಶ್ರೀ. ಕೆ. ರಾಧಾಕ್ರಷ್ಣ ಶೆಣೈಯವರ ಕನಸಿನೊಂದಿಗೆ, ಶೈಕ್ಷಣಿಕ ಮಾರ್ಗದರ್ಶಕರಾದ ಚಿತ್ರಾ ಕಾರಂತರವರ ಮಾರ್ಗದರ್ಶನದಲ್ಲಿ, ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರರವರ ಉತ್ತಮ ನಾಯಕತ್ವ ಗುಣ, ದೈಹಿಕ ಶಿಕ್ಷಣ ಸಲಹೆಗಾರರಾದ ಪ್ರದೀಪ್ ಕುಮಾರ್ ಶೆಟ್ಟಿಯವರ ಸೂಕ್ತ ಸಲಹೆ, ಕಾಲೇಜು ಉಪನ್ಯಾಸಕರ ಕಠಿಣ ಪರಿಶ್ರಮದಿಂದ ಕಾಲೇಜು ಉತ್ತಮ ಮಟ್ಟದಲ್ಲಿ ಮುನ್ನಡೆಯುತ್ತಿದ್ದು, ವಿದ್ಯಾರ್ಥಿಗಳ ಸತತ ಅಭ್ಯಾಸದಿಂದಾಗಿ ಸಂಸ್ಥೆಯು ಸಾಧನೆಯ ಹಾದಿಯನ್ನು ಉತ್ತಮ ರೀತಿಯಲ್ಲಿ ಕ್ರಮಿಸುವಂತಾಗಿದೆ.

Commercial Content

Leave a Reply

Your email address will not be published. Required fields are marked *

2 × five =