ಕುಂದಾಪುರದಲ್ಲಿ ಯಕ್ಷಗಾನ ಪ್ರದಶನಕ್ಕೆ ಆಗ್ರಹಿಸಿ ಪತ್ರ ಚಳವಳಿ, ಅಭಿಮಾನಿಗಳ ಸಮಾವೇಶ

Click Here

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರದ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ಅವಕಾಶ ಮಾಡಿಕೊಡಬೇಕೆಂದು ಯಕ್ಷಗಾನ ಅಭಿಮಾನಿಗಳು, ಸಮಾನ ಮನಸ್ಕ ಸಂಘ-ಸಂಸ್ಥೆ ಹೋರಾಟಕ್ಕೆ ಅಣಿಯಾಗುತ್ತಿವೆ. ಒಂದೆಡೆ ಯಕ್ಷಗಾನ ಅಭಿಮಾನಿ ರಾಮಕೃಷ್ಣ ಹೇರ್ಳೆ ನೇತೃತ್ವದಲ್ಲಿ ಪತ್ರ ಚಳವಳಿ ಆರಂಭಿಸಿದ್ದರೇ, ಮತ್ತೊಂದೆಡೆ ಕುಂದಾಪುರದಲ್ಲಿ ಯಕ್ಷಾಭಿಮಾನಿಗಳ ಸಮಾವೇಶ ನ.೧೩ ಜರುಗಲಿದೆ. ತಾಲೂಕು ಆಡಳಿತ ಹಿಂದಿನಂತೆ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡದಿದ್ದರೆ ಹೋರಾಟದ ಮಾರ್ಗವನ್ನು ಹಿಡಿಯಬೇಕಾಗುತ್ತದೆ ಎಂಬ ಸಂದೇಶವನ್ನು ಈಗಾಗಲೇ ಯಕ್ಷಾಭಿಮಾನಿಗಳು ರವಾನಿಸಿದ್ದಾರೆ.

Call us

Call us

Visit Now

6 ತಿಂಗಳು ಕಳೆದರೂ ತಕರಾರು ಪತ್ರಕ್ಕೆ ಉತ್ತರವಿಲ್ಲ.
ಕುಂದಾಪುರ ತಹಸೀಲ್ದಾರ್ ಅವರಿಗೆ ಅರ್ಜಿ ಸಮಿತಿ ತಗಾದೆ ಪತ್ರ ಬಂದು ಆರು ತಿಂಗಳು ಕಳೆದರೂ, ತಹಸೀಲ್ದಾರ್ ವಿವರಣೆ ನೀಡಿ ಉತ್ತರಿಸದ ಬಗ್ಗೆ ಯಕ್ಷಗಾನ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದು, ಗಾಯತ್ರಿ ನಾಯ್ಕ್ ವರ್ಗಾವಣೆ ನಂತರ ಅವರ ಸ್ಥಾನಕ್ಕೆ ಜಿ.ಎಂ.ಬೋರ್ಕರ್ ಬಂದು ಎರಡು ತಿಂಗಳು ಕಳೆದರೂ ಅರ್ಜಿಯನ್ನೇ ನೋಡದಿರಲಿಲ್ಲ. ಪರಿಶೀಲಿಸಿ, ಉತ್ತರ ಬರೆಯುತ್ತೇನೆ ಎನ್ನುವ ಮೂಲಕ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಯಕ್ಷಗಾನ ತಿರುಗಾಟ ಆರಂಭವಾಗಿದ್ದು, ಇನ್ನೂ ಪರಿಶೀಲನೆ ಮಾಡುತ್ತಾ ಕೂತರೆ ಯಕ್ಷಗಾನ ಪ್ರದರ್ಶನಕ್ಕೆ ಮಳೆಗಾಲದಲ್ಲಿ ಅನುಮತಿ ನೀಡುತ್ತಾರೆಯೆ ಎಂದು ಯಕ್ಷಭಿಮಾನಿಗಳು ಪ್ರಶ್ನಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

Click here

Click Here

Call us

Call us

ಯಕ್ಷಗಾನ ತಿರುಗಾಟ ಆರಂಭ:
ಈಗಾಗಲೇ ಯಕ್ಷಗಾನ ತಿರುಗಾಟ ಆರಂಭವಾಗಿದ್ದು, ಹೆಚ್ಚಿನ ಆಟಗಳು ಗುತ್ತಿಗೆ ಪಡೆಯಲಾಗಿದೆ. ಕುಂದಾಪುರ ನೆಹರೂ ಮೈದಾನದಲ್ಲಿ ನಡೆಯುವ ಡೇರೆ ಮೇಳದ ಆಟ ಬುಕ್ಕಿಂಗ್ ಆಗಿದ್ದು, ನೆಹರೂ ಮೈದಾನಕ್ಕೆ ತಾಲೂಕು ಆಡಳಿತ ಪರವಾನಿಗೆ ನೀಡಿದ ಹಿನ್ನೆಲೆಯಲ್ಲಿ ಗುತ್ತಿಗೆ ಹಿಡಿದವರು ಅತಂತ್ರರಾಗಿದ್ದಾರೆ. ಆಟ ನಡೆಯುವ ಟೆಂಟ್ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ, ವಹಿವಾಟು ನಡೆಸುವವ ಹೊಟ್ಟೆಪಾಡಿಗಾಗಿ ತಯಾರಿ ನಡೆಸುತ್ತಿದ್ದು, ಆಟವೇ ನಡೆಯದಿದ್ದರೆ ಮುಂದೇನು ಎನ್ನುವ ಚಿಂತೆಯಲ್ಲಿದ್ದಾರೆ.

ಪತ್ರ ಚಳವಳಿ:
ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದಶನಕ್ಕೆ ಕುಂದಾಪುರ ತಾಲೂಕು ಆಡಳಿತ ಪರವಾನಿಗೆ ನೀಡಲು ಹಿಂದೇಟು ಹಾಕುತ್ತಿರುವುದ ಖಂಡಿಸಿ ಯಕ್ಷಗಾನ ಅಭಿಮಾನಿ ರಾಮಕೃಷ್ಣ ಹೇರ್ಳೆ ನೇತೃತ್ವದಲ್ಲಿ ಪತ್ರ ಚಳವಳಿ ಆರಂಭಿಸಲಾಗಿದೆ.
ಯಕ್ಷಗಾನ ಪ್ರದರ್ಶನಕ್ಕೆ ಅದರದ್ದೇ ಆದ ಇತಿಹಾಸ ಇರುವ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರರ್ದಶನಕ್ಕೆ ಅವಕಾಶ ನೀಡುವ ಮೂಲಕ ಯಕ್ಷಗಾನ ವೈಭವ ಮತ್ತೆ ನೆಹರೂ ಮೈದಾನಲ್ಲಿ ಮೇಳೈಸಬೇಕು. ಷರತ್ತು ಬದ್ದ ಯಕ್ಷಗಾನ ಪ್ರರ್ದನಕ್ಕೆ ಅವಕಾಶ ನೀಡಬೇಕು ಎಂದು ಪತ್ರ ಚಳವಳಿಯಲ್ಲಿ ಆಗ್ರಹಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಅಭಿಮಾನಿಗಳ ಸಮಾವೇಶ :
ಕುಂದಾಪುರ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಮೀನಾಮೇಷ ಎಣಿಸುತ್ತಿದ್ದು, ಯಕ್ಷಗಾನ ಪ್ರದರ್ಶನ ಕಾಣದ ಸ್ಥಿತಿ ಬಂದಿರುವ ಹಿನ್ನೆಲೆಯಲ್ಲಿ ಕುಂದಾಪುರ ಬೋರ್ಡ್ ಹೈಸ್ಕೂಲ್ ರೋಟರಿ ಲಕ್ಷ್ಮೀವೆಂಕಟರಮಣ ಕಲಾಮಂದಿರದಲ್ಲಿ ಭಾನುವಾರ ಸಂಜೆ 4ಕ್ಕೆ ಯಕ್ಷಗಾನ ಪ್ರೇಮಿಗಳ ಸಮಾವೇಶ ಜರುಗಲಿದೆ.

ಸಭೆಯಲ್ಲಿ ಕುಂದಾಪುರ ನೆಹರೂ ಮೈದಾನದಲ್ಲಿ ಅವಕಾಶ ಮಾಡಿಕೊಡುವ ಬಗ್ಗೆ ಚರ್ಚೆ ನಡೆಯಲಿದ್ದು, ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಯಕ್ಷಗಾನ ಪ್ರದರ್ಶನ ಅವಕಾಶ ಮಾಡಿಕೊಡದಿದ್ದರೆ ಮುಂದಿನ ದಾರಿ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಯಕ್ಷಗಾನ ಅಭಿಮಾನಿ ಬಳಗದ ರಾಮಕೃಷ್ಣ ಹೇರ್ಳೆ, ಕಲಾ ಕ್ಷೇತ್ರ ಕುಂದಾಪುರ ಸಂಚಾಲಕ ಬಿ.ಕಿಶೋರ್ ಕುಮಾರ್ ತಿಳಿಸಿದ್ದಾರೆ. © ಕುಂದಾಪ್ರ ಡಾಟ್ ಕಾಂ.

ಇದನ್ನೂ ಓದಿ
► ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ದೊರೆಯುತ್ತಿಲ್ಲ ಅನುಮತಿ – http://kundapraa.com/?p=18845 

Click Here

ಯಾರೆನಂತಾರೆ?

[quote font_size=”15″ bgcolor=”#ffffff” bcolor=”#dd3333″ arrow=”yes”] ಕುಂದಾಪುರ ತಾಲೂಕು ಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ, ವಸ್ತು ಪ್ರದರ್ಶನ ಹಾಗೂ ಇನ್ನಿತರ ಪ್ರದರ್ಶನಕ್ಕೆ ಸ್ಥಳಾವಕಾಶ ಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ. ತಾಲೂಕು ಕೇಂದ್ರದಲ್ಲಿ ಸಂಸ್ಕೃತಿ ಪ್ರದರ್ಶನಕ್ಕೆ ಸ್ಥಳಾವಕಾಶ ಇಲ್ಲಾ ಎನ್ನೋದಕ್ಕೆ ಆಗೋದಿಲ್ಲ. ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ಸಾಧಕ, ಬಾಧಕ ಎಲ್ಲವನ್ನೂ ವಿಮರ್ಷೆ ಮಾಡಿ ಸ್ಥಳಾವಕಾಶಕ್ಕೆ ಪ್ರಯತ್ನಿಸಲಾಗುತ್ತದೆ. ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಬೇಕಾದ ಎಲ್ಲಾ ಪ್ರಯತ್ನ ಮಾಡುತ್ತೇನೆ. – ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಕ್ಷೇತ್ರ ಶಾಸಕ[/quote]

[quote font_size=”15″ bgcolor=”#ffffff” bcolor=”#184599″ arrow=”yes”] ಕಾನೂನು ಉಲ್ಲಂಘನೆ ಆದರೆ ಅರ್ಜಿ ಸಮಿತಿ ವಿಚಾರಣೆ ಮಾಡುತ್ತಿದ್ದು, ಅದಕ್ಕೆ ತಹಸೀಲ್ದಾರ್ ಉತ್ತರಿಸಬೇಕು ಅಷ್ಟೇ. ಕುಂದಾಪುರ ನೆಹರೂ ಮೈದಾನದಲ್ಲಿ ತಲತಲಾಂತರ ದಿಂದ ನಡೆದು ಬರುತ್ತಿದ್ದ ಯಕ್ಷಗಾನ ಪ್ರದರ್ಶನಕ್ಕೆ ಪರವಾನಿಗೆ ನಿರಾಕರಣೆ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಈ ಬಗ್ಗೆ ಉಡುಪಿ ಜಿಲ್ಲಾಡಳಿತ ಜೊತೆ ಮಾತನಾಡಿ ಸಮಸ್ಯೆ ಪರಿಹಾರ ಮಾಡಲಾಗುತ್ತದೆ. ಅವಶ್ಯಬಿದ್ದರೆ ಅಸಂಬ್ಲಿಯಲ್ಲೂ ಯಕ್ಷಗಾನ ಪ್ರದರ್ಶನ ಕುರಿತು ದ್ವನಿ ಎತ್ತಲಾಗುತ್ತದೆ. – ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಹಾಗೂ ಅರ್ಜಿ ಸಮಿತಿ ಸದಸ್ಯ.[/quote]

[quote font_size=”15″ bgcolor=”#ffffff” bcolor=”#11600a” arrow=”yes”] ಸ್ವಚ್ಛತೆ ಹಾಗೂ ಕಾನೂನಿಗೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ಅದರ ಪರಿಹಾರದ ಮಾರ್ಗೋಪಾಯ ಕಂಡಕೊಳ್ಳಬೇಕಾಗಿದೆ. ಕುಂದಾಪುರ ಪಟ್ಟಣ ಜನರಿಗೆ ಯಕ್ಷಗಾನ ನೋಡಲು ನೆಹರೂ ಮೈದಾನ ಪ್ರಶಸ್ತ ಸ್ಥಳ. ಮೇಳಗಳ ಆಟ ಶನಿವಾರ ಮಾತ್ರ ಜರುಗುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಾರದು. ವಿದ್ಯಾರ್ಥಿ ನಿಲಯದ ಮಕ್ಕಳಿಗೂ ಆಟ ನೋಡುವ ಅವಕಾಶವೂ ದೊರಕುತ್ತದೆ.

ನೆಹರೂ ಮೈದಾನದಲ್ಲಿ ಇನ್ನಿತರ ಕಾರ‍್ಯಕ್ರಮಗಳು ನಡೆಯುತ್ತಿದ್ದು, ಯಕ್ಷಗಾನಕ್ಕೆ ಮಾತ್ರ ಅವಕಾಶ ನೀಡದಿರುವುದು ಅರ್ಥವಾಗುತ್ತಿಲ್ಲ. ನಾನು ಈಗಾಗಲೇ ಕುಂದಾಪುರ ತಹಸೀಲ್ದಾರ್ ಜೊತೆ ಮಾತನಾಡಿದ್ದು, ಸಮಸ್ಯೆ ಶೀಘ್ರದಲ್ಲೆ ಬಗೆಹರಿಯಲಿದೆ. ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿಪಡಿಸುವುದು ಸರಿಯಲ್ಲ.  ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ, ಉಡುಪಿ-ಚಿಕ್ಕಮಗಳೂರು ಕ್ಷೇತ್ರ [/quote]

[quote font_size=”15″ color=”#000000″ bgcolor=”#ffffff” bcolor=”#f48200″ arrow=”yes”]ಉಡುಪಿ ಜಿಲ್ಲಿಗೆ ಅತೀ ಬುದ್ದಿವಂತರ ಜಿಲ್ಲೆ ಎಂದು ಹೆಸರು ಬರಲು ಯಕ್ಷಗಾನ ಸಾಹಿತ್ಯದ ಕೊಡುಗೆ ಅಪಾರ. ಗಂಡುಮೆಟ್ಟಿದ ಹಾಗೂ ಜಾನಪದ ಕಲೆಯಾಗಿದ್ದು, ನಮಗೆ ಬುದ್ದಿವಂತಿಕೆ, ವಿದ್ವತ್ ಕೊಟ್ಟ್ಚಿದ್ದರೆ ಅದಕ್ಕೆ ಯಕ್ಷಗಾನ ಕೊಡುಗೆ ಅಪಾರ. ತಾಲೂಕ್ ಕೇಂದ್ರದಲ್ಲಿ ಯಕ್ಷಗಾನಕ್ಕೆ ಅವಕಾಶ ಇಲ್ಲ ಎಂದರೆ ಅದಕ್ಕೆ ಅರ್ಥವೇ ಇಲ್ಲ. ಕ್ರೀಡೆ ಹಿನ್ನೆಲೆಯಲ್ಲಿ ಗಾಂಧಿ ಮೈದಾನ ಕಿತ್ತುಕೊಂಡಿದ್ದು, ಪ್ರಸಕ್ತ ನೆಹರೂ ಮೈದಾನ ಕೂಡಾ ಕಿತ್ತುಕೊಂಡು ನಮ್ಮ ಮನೆಯಿಂದ ನಮ್ಮ ಹೊರಹಾಕುತ್ತಿದ್ದಾರೆ. ಸಾರ್ವಜನಿಕ ಸಭೆ, ಸಮಾರಂಭ, ಯಕ್ಷಗಾನಕ್ಕೆ ಇರುವ ಮೈದಾನ ನಮ್ಮ ಹಕ್ಕಾಗಿದ್ದು, ಅದನ್ನ ಕಿತ್ತುಕೊಳ್ಳುವ ಪ್ರಯತ್ನ ಮಾಡಿದರೆ, ಧರಣಿ ಪ್ರತಿಭಟನೆ ಮೂಲಕ ತಕ್ಕ ಉತ್ತರ ಕೊಡಬೇಕಾಗುತ್ತದೆ. ಹಕ್ಕಿನ ಜಾಗ ಕೊಡೋದಿಲ್ಲ ಎಂದ್ರೆ ಬಿಡೋಕೆ ಆಗೋದಿಲ್ಲ. – ಬಸ್ರೂರು ಅಪ್ಪಣ್ಣ ಹೆಗ್ಡೆ, ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿ ಬಸ್ರೂರು.[/quote]

[quote font_size=”15″ color=”#000000″ bgcolor=”#ffffff” bcolor=”#930000″ arrow=”yes”]ಯಕ್ಞಗಾನ ಕುಂದಾಪುರ ನೆಲದಲ್ಲಿ ಹುಟ್ಟಿಬೆಳೆದಿದೆ ಎಂದರೆ ತಪ್ಪಾಗೋದಿಲ್ಲ. ಕುಂದಗನ್ನಡಿಗರು ಯಕ್ಷಗಾನಕ್ಕಾಗಿ ಬದುಕನ್ನೇ ಮೀಸಲಿಟ್ಟವರು. ಇಷ್ಟುವರ್ಷದಿಂದ ನೆಹರೂ ಮೈದಾನದಲ್ಲಿ ಯಕ್ಷಗಾನ ನಡೆಯುತ್ತಿದ್ದು, ಎಂದೂ ಹುಟ್ಟದ ಸಮಸ್ಯೆ ಈಗ್ಯಾಕೆ ಬಂತು. ಉಡುಪಿ ಜಿಲ್ಲೆಯ ಹೆಚ್ಚಿನ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ನಡೆಯುತ್ತಿದ್ದು, ಶಾಲೆ ಹಾಗೂ ಸ್ವಚ್ಛತೆ ಹಿನ್ನೆಲೆಯಲ್ಲಿ ನಿರಾಕರಣ ಸಮಂಜಸವೇ ಆಲ್ಲ. ಯಕ್ಷಗಾನ ಪದರ್ಶನ ಸ್ಥಳದಿಂದ ಶಾಲೆ ಹಾಗೂ ಹಾಸ್ಟೆಲ್ ಹಿಂದಿದ್ದು, ನಿರಾಕರಣೆಗೆ ಇದು ಕಾರಣವಾಗಬಾರದು. ಸ್ಚಚ್ಛತೆ ಬಗ್ಗೆ ಸಂಬಂಧಪಟ್ಟವರಿಗೆ ಜವಾಬ್ದಾರಿ ವಹಿಸಬೇಕು. ಧಾರ್ಮಿಕವಾಗಿ ಯಕ್ಷಗಾನ ಶಾಸ್ತ್ರೋಕ್ತವಾಗಿ ಬೆಳೆದು ಬಂದ ರಂಗ ಕಲೆ, ಯಕ್ಷಗಾನಕ್ಕೆ ಅವಕಾಶ ಕೊಡೋದಿಲ್ಲ ಎನ್ನೋದು ಸಮಂಜಸವೇ ಅಲ್ಲ. ಈ ಬಗ್ಗೆ ಹಿರಿಯರೊಂದಿಗೆ ಯಕ್ಷಪ್ರಿಯರ ಜೊತೆ ಚರ್ಚೆ ನಡೆಸಿ, ಮುಂದಿನ ಹೆಜ್ಜೆ ಇಡಲಾಗುತ್ತದೆ. ನೆಹರೂ ಮೈದಾನದಲ್ಲಿ ಯಕ್ಷಗಾನಕ್ಕೆ ಅವಕಾಶ ನೀಡಲೇ ಬೇಕು ಎನ್ನೋದು ಒತ್ತಾಯ. – ಸುಬ್ರಹ್ಮಣ್ಯ ಧಾರೇಶ್ವರ, ಖ್ಯಾತ ಯಕ್ಷಗಾನ ಭಾಗವತ, ಕಿರಿಮಂಜೇಶ್ವರ. [/quote]

[quote font_size=”15″ color=”#000000″ bgcolor=”#ffffff” bcolor=”#4f4400″ arrow=”yes”]ತಲೆ-ತಲಾಂತರದಿಂದ ನಡೆದು ಬಂದ ಯಕ್ಷಗಾನ ನಮ್ಮ ಮಣ್ಣಿನ ಕಲೆಯಾಗಿದ್ದು, ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಕುಂದಾಪುರ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕೊಡಲೇ ಬೇಕು. ಹಲವಾರು ವರ್ಷದಿಂದ ಕುಂದಾಪುರ ನೆಹರೂ ಮೈದಾನದಲ್ಲಿ ಯಕ್ಷಗಾನ ನಡೆದುಬರುತ್ತಿದ್ದು, ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಇಷ್ಟು ವರ್ಷ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಿ, ಈಗ ಕೊಡದಿರಲು ಕೊಡುವ ಕಾರಣ ತರವಲ್ಲ. ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಯಕ್ಷಗಾನದ ಜೀವಂತಿಕೆ ಉಳಿಸಬೇಕು. ಯಕ್ಷಗಾನ ಪ್ರದಶನಕ್ಕೆ ನಿರಾಕರಣೆ ಕಲೆಗೆ ಮಾಡಿದ ಅಪಚಾರ ಆಗುತ್ತದೆ. – ಕೊಂಡದಕುಳಿ ರಾಮಚಂದ್ರ ಹೆಗಡೆ, ಖ್ಯಾತ ಬಡಗುತಿಟ್ಟು ಕಲಾವಿದ, ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ.[/quote] ಕುಂದಾಪ್ರ ಡಾಟ್ ಕಾಂ ವರದಿ.

ಇದನ್ನೂ ಓದಿ
► ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ದೊರೆಯುತ್ತಿಲ್ಲ ಅನುಮತಿ – http://kundapraa.com/?p=18845 

One thought on “ಕುಂದಾಪುರದಲ್ಲಿ ಯಕ್ಷಗಾನ ಪ್ರದಶನಕ್ಕೆ ಆಗ್ರಹಿಸಿ ಪತ್ರ ಚಳವಳಿ, ಅಭಿಮಾನಿಗಳ ಸಮಾವೇಶ

Leave a Reply

Your email address will not be published. Required fields are marked *

twelve − 2 =