ಕುಂದಾಪುರ: ತಾಲೂಕು ಪಂಚಾಯತ್ ಇಒ ವರ್ಗಾವಣೆಗೆ ಸದಸ್ಯರ ಪಟ್ಟು, ಸಭಾತ್ಯಾಗ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವರ್ಗಾವಣೆಗೆ ಪಟ್ಟು ಹಿಡಿದ ಆಡಳಿತ ಪಕ್ಷದ ಸದಸ್ಯರು. ಕರ್ತವ್ಯ ಲೋಪ, ತಾ.ಪಂ ಸದಸ್ಯರಿಗೆ ಅಗೌರವ ತೋರಿದ ಅಧಿಕಾರಿಯ ವರ್ಗಾವಣೆಗೆ ಆಗುವ ತನಕ ಸಭೆಯಲ್ಲಿ ಭಾಗವಹಿಸಲಾರೆವು ಎಂದು ಸಭಾತ್ಯಾಗ ನಡೆಸಿದ ಘಟನೆಗೆ ಕುಂದಾಪುರ ತಾಲೂಕು ಪಂಚಾಯತ್ ಸಾಕ್ಷಿಯಾಯಿತು.

Click Here

Call us

Call us

ಸೋಮವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆ ಸಭಾತ್ಯಾಗದೊಂದಿಗೆ ಅಂತ್ಯಗೊಂಡಿದ್ದು ಆಡಳಿತ ಪ್ರತಿಪಕ್ಷಗಳ ಭಿನ್ನ ಧ್ವನಿಯ ನಡುವೆಯೂ ಇಒ ವರ್ಗಾವಣೆ ಇಲ್ಲವೇ ಜಿಪಂ ಎದುರು ಪ್ರತಿಭಟನೆ ಎಂದು ನಿರ್ಣಯ ಕೈಗೊಳ್ಳಲಾಯಿತು.

Click here

Click Here

Call us

Visit Now

ತಾಲೂಕು ಪಂಚಾಯತ್ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಮಾತನಾಡಿ, ತಾಲೂಕು ಪಂಚಾಯತ್ ಸದಸ್ಯರ ಅಹವಾಲುಗಳಿಗೆ ಕಾರ್ಯನಿರ್ವಹಣಾಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಸದಸ್ಯರು ಪ್ರಶ್ನಿಸಿದರೆ ಗಲಾಟೆ ಮಾಡುವುದು, ಏರು ಧ್ವನಿಯಲ್ಲಿ ಮಾತನಾಡುವುದನ್ನು ಮಾಡುತ್ತಿದ್ದಾರೆ. ಮಹಿಳಾ ಸದಸ್ಯರು ಯಾವುದಾದರೂ ವಿಚಾರ ಕೇಳಿ ಕರೆ ಮಾಡಿದರೆ ಅವರನ್ನು ಹೆಂಗಸು ಎಂದು ಸಂಭೋಧಿಸಿ ಸದಸ್ಯರ ಗೌರವಕ್ಕೆ ಚ್ಯುತಿ ತಂದಿದ್ದಾರೆ. ತಮ್ಮ ಮೇಲೆ ಕ್ರಮಕೈಗೊಳ್ಳು ನಿರ್ಣಯ ಕೈಗೊಳ್ಳಲಾವುದು ಎಂದು ತಿಳಿಸಿದರೇ ಗಂಡಸಾದರೆ ಮಾಡಿ ತೋರಿಸಿ ಎಂದು ಸವಾಲು ಹಾಕುತ್ತಾರೆ. ತಾಲೂಕು ಪಂಚಾಯತ್ ಅನುದಾನವನ್ನೂ ಅಪವ್ಯಯ ಮಾಡಿದ್ದಾರೆ. ಅವರು ವರ್ಗಾವಣೆಯಾಗದ ಹೊರತು ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸದಸ್ಯ ಪುಪ್ಪರಾಜ ಶೆಟ್ಟಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಏಕಾಏಕಿ ಸ್ಥಳ ಪರಿವೀಕ್ಷಣೆ ಮಾಡುವ ಅಧಿಕಾರವಿಲ್ಲ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರೊಂದಿಗೆ ತೆರಳಬೇಕೇ ವಿನಃ ಮನಬಂದಂತೆ ತೆರಳುವ ಅಗತ್ಯವೇನಿದೆ. ಸದಸ್ಯರ ಪ್ರಶ್ನೆಗಳಿಗೆ ಅಸಂಬಂಧ ಹೇಳಿಕೆ ನೀಡುವುದು, ಸದಸ್ಯರೊಂದಿಗೆ ದುರ್ವರ್ತನೆ ತೋರುತ್ತಿದ್ದಾರೆ. ಪಡುವರಿ ಪಂಚಾಯತ್ ಮಹಿಳಾ ಸದಸ್ಯರೋರ್ವರು ಸ್ಥಳ ಪರಿಶೀಲನೆಗೆ ತೆರಳಿದ್ದಾಗ ನೀವು ಕಾಲೇಜು ಹುಡುಗಿಯಂತೆ ಕಾಣುತ್ತಿದ್ದೀರಿ. ಇಲ್ಲಿಗೆ ಬರುವುದು ಬೇಡ ಎಂದು ಸ್ಥಳೀಯರ ಮುಂದೆಯೇ ಹೇಳಿ ಸದಸ್ಯರನ್ನು ಅಪಮಾನಗೊಳಿಸಿದ್ದಾರೆ. ಅವರ ವರ್ಗಾವಣೆ ಮಾಡದಿದ್ದರೆ ಜಿಲ್ಲಾ ಪಂಚಾಯತ್ ಎದುರು ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಸಿದರು.

ಸದಸ್ಯರುಗಳಾದ ನಾರಾಯಣ ಗುಜ್ಜಾಡಿ, ಕರುಣ್ ಪೂಜಾರಿ ಧ್ವನಿಗೂಡಿಸಿದರು. ಆಡಳಿತ ಪಕ್ಷದಿಂದ ಸದಸ್ಯರ ಬಹುಮತದ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳು ಇದೆಲ್ಲವನ್ನೂ ಅಸಹಾಯಕರಾಗಿ ವೀಕ್ಷಿಸುತ್ತಿದ್ದರು.

Call us

ಕಾಂಗ್ರೆಸ್ ಗೈರು:
ಸಾಮಾನ್ಯ ಸಭೆಗೆ ಕಾಂಗ್ರೆಸ್ ಪಕ್ಷದ ಸದಸ್ಯರು ಗೈರಾಗುವ ಮೂಲಕ ತಮ್ಮ ಆಡಳಿತ ಪಕ್ಷದ ಸದಸ್ಯರ ವಿರುದ್ಧ ತಮ್ಮ ಅಸಮಧಾನ ಹೊರಗೆಡವಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರನ್ನು ವರ್ಗಾವಣೆ ಮಾಡುವ ನಿರ್ಣಯ ಕೈಗೊಳ್ಳುವ ಮೊದಲು ಅವರನ್ನು ಅಧ್ಯಕ್ಷ ಕೊಠಡಿಗೆ ಕರೆದು ಮಾತನಾಡೋಣ. ನಮ್ಮ ಬಳಿ ಅವರು ದುರ್ವರ್ತನೆ ತೋರಿಲ್ಲ. ಒಂದು ಭಾರಿ ಅವರಿಗೆ ತಿದ್ದಿಕೊಳ್ಳಲು ಅವಕಾಶ ಮಾಡಿಕೊಡೋಣ ಎಂದಿರುವುದಕ್ಕೆ ಆಡಳಿತ ಪಕ್ಷದ ಸದಸ್ಯರು ಒಪ್ಪದಿದ್ದಾಗ ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸಭೆಯಿಂದ ದೂರ ಉಳಿದರು. ಆದರೆ ಆಡಳಿತ ಪಕ್ಷದ ನಿರ್ಣಯಕ್ಕೆ ತಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಭಾತ್ಯಾಗ ಪ್ರಥಮ:
ಜಿಪಂ ತಾಪಂ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಗೈರಾಗುವುದನ್ನು ಪ್ರಶ್ನಿಸಿ, ಅಧಿಕಾರಿಗಳು ಹಾಗೂ ಸದಸ್ಯರ ನಡುವೆ ವಾಗ್ಯುದ್ದಗಳು ನಡೆದು ಸದಸ್ಯರು ಸಭಾತ್ಯಾಗ ಮಾಡಿದ ಉದಾಹರಣೆಗಳಿವೆ. ಆದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಭಾರಿಗೆ ಕಾರ್ಯನಿರ್ವಹಣಾಧಿಕಾರಿ ವರ್ಗಾವಣೆ ಮಾಡಬೇಕೆಂದು ಪಟ್ಟು ಹಿಡಿದು ತಾಲೂಕು ಪಂಚಾಯತ್ ಸದಸ್ಯರು ಸಭಾತ್ಯಾಗ ನಡೆಸಿದ್ದಾರೆ. ಸಭೆಯ ಆರಂಭದ ನಾಡಗೀತೆಯ ಬಳಿಕ ಕೆಲವು ಕಾಲ ಸಭೆ ಮೌನಕ್ಕೆ ಜಾರಿತ್ತು. ಸದಸ್ಯರ ಹಾಜರಾತಿ ಮುಗಿದ ನಂತರ ಮಾತನಾಡುವಂತೆ ಅಧ್ಯಕ್ಷರು ಸೂಚಿಸಿದರು. ಮೊದಲು ಮಾತನಾಡಿದ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಇಓ ಇದ್ದರೆ ಮಾತನಾಡಲು ಸಾಧ್ಯವಿಲ್ಲ. ಸಭೆಯಲ್ಲಿ ಭಾಗವಹಿಸಲೂ ಮನಸ್ಸಾಗದು. ಅವರನ್ನು ವರ್ಗಾವಣೆ ಮಾಡಬೇಕು ಎಂದು ಪಟ್ಟು ಹಿಡಿದರು.

ಕಾಟಾಚಾರಕ್ಕೆ ಜಯಂತಿ
ಮಹಾವೀರ ಜಯಂತಿ ಆಚರಣೆ ಭಾನುವಾರವಿದ್ದರೂ ತಾಪಂ ಮಾತ್ರ ಸೋಮವಾರ ಸಾಮಾನ್ಯ ಸಭೆ ಆರಂಭಕ್ಕೂ ಮುನ್ನ ಮಹಾವೀರರ ಪೋಟೋಗೆ ಹೂವು ಹಾಕಿ ಕಾಟಾಚಾರಕ್ಕೆ ಮಹಾವೀರ ಜಯಂತಿ ಆಚರಿಸಿತು.

 

ತಾಲೂಕು ಪಂಚಾಯತ್‌ನ ಕಾಮಗಾರಿಗಳ ಬಗೆಗೆ ಸದಸ್ಯರ ಗಮನಕ್ಕೆ ತರುತ್ತಿಲ್ಲ. ಇದರಿಂದ ೧೫ಲಕ್ಷ ರೂ. ಅನುದಾನ ವಾಪಾಸ್ಸು ಹೋಗಿದೆ. ಮಾರ್ಚ್ ಅಂತ್ಯದಲ್ಲಿ ಎಲ್ಲಾ ಗ್ರಾ.ಪಂ ಬಜೆಟ್ ತರಿಸಿಕೊಳ್ಳಬೇಕಿತ್ತು. ಆದರೆ ಇವರಗೆ ಬೇಕಾಗಿರುವ ಏಳು ಪಂಚಾಯತಿಯ ಬಜೆಟ್ ಮಾತ್ರ ತರಿಸಿಕೊಂಡಿದ್ದಾರೆ. ಇದರಿಂದ ಪಂಚಾಯತ್ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ. ಯಾವುದೇ ಕೆಲಸ ಮಾಡುವಾಗಲೂ ತಾಲೂಕು ಪಂಚಾಯತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಹಾಗೂ ಗೌರವನ್ನೂ ನೀಡುತ್ತಿಲ್ಲ. ಹಾಗಾಗಿ ಸದಸ್ಯರ ಒತ್ತಾಯದಂತೆ ಕಾರ್ಯನಿರ್ವಹಣಾಧಿಕಾರಿ ಬದಲಾವಣೆಗೆ ನಿರ್ಣಯ ಮಂಡಿಸಲಾಗಿದೆ.  – ಜಯಶ್ರೀ ಸುಧಾಕರ ಮೊಗವೀರ, ಅಧ್ಯಕ್ಷೆ, ತಾಪಂ ಕುಂದಾಪುರ

ಕಾರ್ಯನಿರ್ವಣಾಧಿಕಾರಿ ವರ್ಗಾವಣೆ ಮಾಡುವ ವಿಚಾರದಲ್ಲಿ ಆಡಳಿತ ಪಕ್ಷ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದೆ. ಅಧ್ಯಕ್ಷರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿಯೊಂದಿಗೆ ಮಾತನಾಡಿ ಒಂದು ಅವಕಾಶ ಕೊಟ್ಟು ನೋಡೋಣ ಎಂದು ಹೇಳಿತ್ತು. ಆದರೆ ಆಡಳಿತ ಪಕ್ಷದವರು ಒಪ್ಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಸಾಮಾನ್ಯ ಸಭೆಯಿಂದ ದೂರ ಉಳಿದರು. ಸದಸ್ಯರಿಗೆ ಅಗೌರವ ತೋರಿರುವುದು ಹೌದಾದರೆ ಅದು ಖಂಡನೀಯ. ಕೆಎಎಸ್ ಅಧಿಕಾರಿಗಳನ್ನು ಇಓ ಸ್ಥಾನಕ್ಕೆ ನೇಮಿಸುವ ನಿರ್ಧಾರ ಸ್ವಾಗತಾರ್ಹ. – ರಾಜು ದೇವಾಡಿಗ, ತಾಪಂ ಸದಸ್ಯರು.

ತಾಪಂ ಎಲ್ಲಾ ಕೆಲಸಗಳನ್ನು ಕಾನೂನುಬದ್ಧವಾಗಿಯೇ ಮಾಡಿದ್ದೇನೆ. ಎಲ್ಲದ್ದಕ್ಕೂ ದಾಖಲೆ ಇದೆ. ಸದಸ್ಯರು ವಿನಾಕಾರಣ ತನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ವೈಯಕ್ತಿಕ ಆರೋಪ ಮಾಡುವ ಮೂಲಕ ಕಾರ್ಯನಿರ್ವಹಣಾಧಿಕಾರಿ ಸ್ಥಾನದದಲ್ಲಿ ಕುಳಿತವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಗ್ರಾಪಂ ಪಿಡಿಓ ಜೊತೆಗೆ ಉತ್ತಮ ಭಾಂದವ್ಯವಿದ್ದು, ಒಳ್ಳೆಯ ಅಭಿಪ್ರಾಯವೂ ಇದೆ. ಸಭೆಯ ನಡಾವಳಿಯಲ್ಲಿ ಜಿಪಂ ಸಿಇಓ ಅವರಿಗೆ ತಿಳಿಸುತ್ತೇನೆ. ಅವರು ತೆಗೆದುಕೊಳ್ಳುವ ನಿರ್ಣಣಯಕ್ಕೆ ತಾನು ಬದ್ಧನಿದ್ದೇನೆ. – ಚಿನ್ನಪ್ಪ ಮೊಯ್ಲಿ, ಕಾರ್ಯನಿರ್ವಹಣಾಧಿಕಾರಿ

Leave a Reply

Your email address will not be published. Required fields are marked *

2 × 3 =