ಕುಂದಾಪುರ ಆನಗಳ್ಳಿ ರೌಡಿಗಳ ಹಿತ್ತಲ ಮನೆಯಾಗಿದೆ: ಸುರೇಶ್ ಆನಗಳ್ಳಿ ಆತಂಕ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಒಂದು ಕಾಲದಲ್ಲಿ ಬಡವರು, ಕಾರ್ಮಿಕರು ಸಹಬಾಳ್ವೆಯಿಂದ ಬದುಕಿದ್ದ ಆನಗಳ್ಳಿ ಇಂದು ಕುಂದಾಪುರದ ರೌಡಿಗಳಿಗೆ ಹಿತ್ತಲಮನೆಯಾಗಿದೆ. ಅಕ್ರಮಗಳ ವಿರುದ್ಧ ಧ್ವನಿಎತ್ತುವವರನ್ನು ಮಣಿಸುವ ವೃತ್ತಿಪರ ರೌಡಿಗಳು ತಂಡವೇ ವ್ಯವಸ್ಥಿತವಾಗಿ ತಲೆಯೆತ್ತುತ್ತಿರುವುದು ತೀರಾ ಆತಂಕಕಾರಿ ಸಂಗತಿ ಖ್ಯಾತ ರಂಗಕರ್ಮಿ, ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ನಿರ್ದೇಶಕ ಸುರೇಶ್ ಆನಗಳ್ಳಿ ವಿಷಾದ ವ್ಯಕ್ತಪಡಿಸಿದರು.

Call us

Call us

Visit Now

ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೆಲ ದಿನಗಳ ಹಿಂದೆ ತನ್ನ ಸಹೋದರ ಸುಧೀಂದ್ರ ಆಚಾರ್ಯ ತನ್ನ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆಗೆ ಕಲ್ಲು ಅಡ್ಡವಿಟ್ಟು ಇದೇ ತಂಡ ಹಲ್ಲೆನಡೆಸಿ ದರೋಡೆಗೈದಿದ್ದರೂ ಪೊಲೀಸರು ಅದೊಂದು ದೊಂಬಿ ಎಂದು ಪ್ರಕರಣ ದಾಖಲಿಸಿ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ ಎಂದವರು ಆರೋಪಿಸಿದರು.

Click Here

Click here

Click Here

Call us

Call us

ಕಾರ್ಯಕ್ರಮವೊಂದರ ಬ್ಯಾನರ್ ವಿಷಯಕ್ಕೆ ಸಂಬಂಧಿಸಿ ಪೂರ್ವದ್ವೇಷವನ್ನಿಟ್ಟುಕೊಂಡಿದ್ದ ವ್ಯಕ್ತಿಯೋರ್ವರು ಅವರ ಬೆಂಬಲಿಗರ ಮೂಲಕ ತನ್ನ ಸಹೋದರ ಸುಧೀಂದ್ರ ಆಚಾರ್ಯ ಅವರಿಗೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿ ಕೊನೆಗೆ ಅವರೇ ಅವರಿಗೆ ಬೇಕಾದ ಆಸ್ಪತ್ರೆಗೆ ಸೇರಿಸಿ ಗಂಭೀರ ಪ್ರಕರಣ ಅಲ್ಲವೆಂದು ಬಿಂಬಿಸಲು ಹೊರಟ್ಟಿದ್ದರು. ಇಷ್ಟಕ್ಕೆ ಬಿಡದ ಈ ತಂಡ ಆನಗಳ್ಳಿಯಲ್ಲಿರುವ ನಮ್ಮ ಮನೆ ಹಾಗೂ ಆಸ್ಪತ್ರೆಯಲ್ಲಿರುವ ತಮ್ಮನನ್ನು ನೋಡಲು ಬರುವವರಿಗೂ ಆತನನ್ನು ಮಾತನಾಡಿಸಲು ಬರಬೇಡಿ ಎಂದು ಬೆದರಿಕೆಯೊಡ್ಡುತ್ತಿದೆ. ಆನಗಳ್ಳಿ ಮಾರ್ಗದಲ್ಲಿರುವ ಮನೆಯೊಂದು ರೌಡಿಗಳ ಅಡ್ಡವಾಗಿ ಪರಿವರ್ತನೆಯಾಗುತ್ತಿದ್ದರೂ, ಇಲ್ಲಿನ ಜನರು, ಪೊಲೀಸರು ಹಾಗೂ ಜನಪ್ರತಿನಿಧಿಗಳು ಸೊಲ್ಲೆತ್ತದಿರುವುದು ಪ್ರಜಾಪ್ರಭುತ್ವದ ಬಹುದೊಡ್ಡ ಅಣಕವೆಂದು ಸುರೇಶ್ ಆನಗಳ್ಳಿ ಹೇಳಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ನ.5ರಂದು ಉಪವಾಸ ಸತ್ಯಾಗ್ರಹ:
ಆನಗಳ್ಳಿ ಪರಿಸರದ ಯುವಕರಿಗೆ ಹಣ, ಹೆಂಡದ ಆಸೆ ತೋರಿಸಿ ರೌಡಿಸಂಗೆ ಬೆಂಬಲಿಗರನ್ನಾಗಿ ನೇಮಿಸಿಕೊಂಡು ಹಲ್ಲೆ, ದರೋಡೆ ನಡೆಸುತ್ತಾ ಈ ಭಾಗದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗುವಂತೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಈ ಭಾಗದ ಜನಪ್ರತಿನಿಧಿಗಳು, ಪೊಲೀಸರು ಕಣ್ಣುಮುಚ್ಚಿ ಕುಳಿತಿದ್ದಾರೆ.  ಅನ್ಯಾಯ ನಡೆಯುತ್ತಿದ್ದರೂ ಯಾರೋಬ್ಬರೂ ಸೊಲ್ಲೆತ್ತುತ್ತಿಲ್ಲ. ಹಾಗಾಗಿ ತಾನು ಆ ರೌಡಿಯ ಮನೆಯ ಎದುರೇ ಗಾಂಧಿ-ಅಂಬೇಡ್ಕರ್ ಹೆಸರಿನಲ್ಲಿ ನ.5ರಂದು ಉಪವಾಸ ಸತ್ಯಾಗ್ರಹ ಮಾಡಿ ಪ್ರತಿಭಟಿಸುತ್ತೇನೆ ಎಂದವರು ತಿಳಿಸಿದ್ದಾರೆ.

ಸುರೇಶ್ ಆನಗಳ್ಳಿ ಅವರು ಬಿಡುಗಡೆ ಮಾಡಿದ್ದ ಪತ್ರಿಕಾ ಹೇಳಿಕೆಯ ಪ್ರತಿಗಳು.

suresh-anangalli-press-not-about-anagalli-roudies-1suresh-anangalli-press-not-about-anagalli-roudies-2

Leave a Reply

Your email address will not be published. Required fields are marked *

nine − six =