ಕುಂದಾಪುರ ಎಪಿಎಂಸಿ ಚುನಾವಣೆ: 6ಕ್ಷೇತ್ರಕ್ಕೆ ಚುನಾವಣೆ. 16 ಅಭ್ಯರ್ಥಿಗಳು. ಗದ್ದುಗೆಗೆ ಪೈಪೋಟಿ

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಮತದಾನ ಇಂದು (ಜ.12) ಬರದಿಂದ ಸಾಗುತ್ತಿದೆ. 6 ಕ್ಷೇತ್ರಗಳ 16 ಮಂದಿ ಚುನಾವಣಾ ಕಣದಲ್ಲಿದ್ದು, ಅಭ್ಯರ್ಥಿಗಳು ಭವಿಷ್ಯ ಜ.14ರಂದು ನಿರ್ಧಾರವಾಗಲಿದೆ.

Call us

Call us

ಕುಂದಾಪುರ ಎಪಿಎಂಸಿಯಲ್ಲಿ ಒಟ್ಟು 13 ಕ್ಷೇತ್ರಗಳ ಪೈಕಿ 11 ಕೃಷಿಕರ ಕ್ಷೇತ್ರ, ತಲಾ ಒಂದು ಟಿಎಪಿಸಿಎಂ ಹಾಗೂ ಮಾರಾಟ ಪ್ರತಿನಿಧಿಗಳ ಕ್ಷೇತ್ರವಿದ್ದು, ಕೃಷಿಕರ ಕ್ಷೇತ್ರದ 6 ಅಭ್ಯರ್ಥಿಗಳು ಹಾಗೂ ಸಹಕಾರಿ ಸಂಘಗಳ ಪ್ರತಿನಿಧಿ ಕ್ಷೇತ್ರದ ಓರ್ವರು ಅವಿರೋಧ ಆಯ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಕೃಷಿಕರ ಕ್ಷೇತ್ರದ 6 ಸ್ಥಾನಗಳು ಹಾಗೂ ವರ್ತಕರ ಪ್ರತಿನಿಧಿ ಕ್ಷೇತ್ರದ 1 ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.

ಕ್ಷೇತ್ರಗಳು:
ಶಿರೂರು, ಕಂಬದಕೋಣೆ, ಕಿರಿಮಂಜೇಶ್ವರ, ತ್ರಾಸಿ, ವಂಡ್ಸೆ, ಅಂಪಾರು, ಸಿದ್ದಾಪುರ, ಹಾಲಾಡಿ, ಹೊಂಬಾಡಿ-ಮಂಡಾಡಿ, ತೆಕ್ಕಟ್ಟೆ, ಕುಂದಾಪುರ. ವರ್ತಕರ ಪ್ರತಿನಿಧಿ, ಟಿಎಪಿಸಿಎಂಸಿ

Call us

Call us

ಅವಿರೋಧವಾಗಿ ಆಯ್ಕೆಗೊಂಡವರು:
ಕೃಷ್ಣಾವತಿ ಶೆಡ್ತಿ (ಕಾಂಗ್ರೆಸ್- ಅಂಪಾರು ಕ್ಷೇತ್ರ ಮೀಸಲು ಮಹಿಳೆ) ಕೆ.ರಾಮ ನಾಯ್ಕ್ (ಬಿಜೆಪಿ-ಸಿದ್ದಾಪುರ ಕ್ಷೇತ ಅನುಸೂಚಿತ ಪಂಗಡ), ಗಣೇಶ್ ಶೇರಿಗಾರ್ (ಕಾಂಗ್ರೆಸ್- ಕುಂದಾಪುರ ಸಾಮಾನ್ಯ ಕ್ಷೇತ್ರ) ಹೆಚ್.ವಸಂತ ಶೆಟ್ಟಿ(ಬಿಜೆಪಿ- ತೆಕ್ಕಟ್ಟೆ ಕ್ಷೇತ್ರ ಹಿಂದುಳಿದ ವರ್ಗ ಬಿ) ಮಂಜುಳಾ (ಬಿಜೆಪಿ- ಹೊಂಬಾಡಿ-ಮಂಡಾಡಿ ಮೀಸಲು ಮಹಿಳೆ), ಚಂದ್ರ ಸಮಗಾರ(ಬಿಜೆಪಿ- ಹಾಲಾಡಿ ಕ್ಷೇತ್ರ ಅನುಸೂಚಿತ ಜಾತಿ) ಎಸ್.ರಾಜು ಪೂಜಾರಿ(ಕಾಂಗ್ರೆಸ್ – (ಸಹಕಾರಿ ಮಾರುಕಟ್ಟೆ ಪ್ರತಿನಿಧಿ ಕ್ಷೇತ್ರ ಸಾಮಾನ್ಯ)

ಚುನಾವಣಾ ಕಣದಲ್ಲಿ:

  • ಬಿಜೆಪಿ ಬೆಂಬಲಿತರು: ಶಿರೂರು-ವೆಂಕಟ ಪೂಜಾರಿ, ಕಂಬದಕೋಣೆ-ದೀಪಕ್ ಕುಮಾರ್ ಶೆಟ್ಟಿ, ಕಿರಿಮಂಜೇಶ್ವರ-ಮಂಜು ದೇವಾಡಿಗ, ವಂಡ್ಸೆ ಚಂದ್ರ ಆಚಾರ್, ತ್ರಾಸಿ-ರಾಧಕೃಷ್ಣ ಶೇರಿಗಾರ್. ವರ್ತಕರ ಪ್ರತಿನಿಧಿ-ರಾಮರಾಯ ಕಾಮತ್.
  • ಕಾಂಗ್ರೆಸ್ ಬೆಂಬಲಿತರು: ಶಿರೂರು-ಮಹಾಬಲ ದೇವಾಡಿಗ, ಕಂಬದಕೋಣೆ-ವಸಂತ ಶೆಟ್ಟಿ, ಕಿರಿಮಂಜೇಶ್ವರ ನರಸಿಂಹ ಪೂಜಾರಿ, ವಂಡ್ಸೆ-ಸಂಜೀವ ಪೂಜಾರಿ, ತ್ರಾಸಿ ಶರತ್ ಕುಮಾರ್ ಶೆಟ್ಟಿ, ವರ್ತಕರ ಕ್ಷೇತ್ರ-ರಾಜೇಶ್ ಪೈ.

ಕುಂದಾಪುರ ಎಪಿಎಂಸಿ ಚುನಾವಣೆಗೆ ಒಟ್ಟು 43 ನಾಮಪತ್ರ ಸಲ್ಲಿಕೆಯಾಗಿದ್ದು, 16 ಮಂದಿ ಕಣದಲ್ಲಿ ಉಳಿದಿದ್ದಾರೆ. ಶಿರೂರು ಮತ್ತು ಕಂಬಕೋಣೆ ಎರಡು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನವೀನ್‌ಚಂದ್ರ ಉಪ್ಪುಂದ ಹಾಗೂ ರವಿಚಂದ್ರ ಉಪ್ಪುಂದ ಸ್ಪರ್ಧಿಸುತ್ತಿದ್ದಾರೆ. ಉಳಿದ ಎಲ್ಲಾ ಅಭ್ಯರ್ಥಿಗಳಿಗೂ ಪಕ್ಷದ ಬೆಂಬಲ ಇದೆ. ಈ ಬಾರಿ ಚುನಾವಣೆಯಲ್ಲಿ ಕಳೆದ ಬಾರಿ ಎಪಿಎಂಸಿ ಚುನಾಯಿತ ಸದಸ್ಯರು ಸ್ಪರ್ಧಿಸುತ್ತಿಲ್ಲ. ಕಳೆದ ಬಾರಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆ ಅಗುದ್ದವರೂ ಚುನಾವಣೆಗೆ ಸ್ಪರ್ಧಿಸದಿದ್ದರೂ, ಒಂದು ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದ ದೀಪಕ್ ಕುಮಾರ್ ಶೆಟ್ಟಿ ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಬಾರಿ ಶಿರೂರು ಕ್ಷೇತ್ರ ದಿಂದ ಆಯ್ಕೆ ಆಗಿದ್ದಾರೆ, ಈ ಬಾರಿ ಕಂಬದಕೋಣೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಕಳೆದ ಅವಧಿಯಲ್ಲಿ ಎಪಿಎಂಸಿ ಬಿಜೆಪಿ ಬೆಂಬಲಿತರ ಆಡಳಿತದಲ್ಲಿದ್ದು, ಕಾಂಗ್ರೆಸ್ 5, ಬಿಜೆಪಿ 8 ಬೆಂಬಲಿತರು. ಬಿಜೆಪಿ ಅಧಿಕಾರದಲ್ಲಿದ್ದ ಎಪಿಎಂಸಿ, ಈ ಬಾರಿ ಯಾರಿಗೆ ಬರುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕಸ್ತೂರಿ ರಂಗನ್ ವರದಿ, ಡೀಮ್ಡ್ ಫಾರೆಸ್ಟ್, ವಿದ್ಯುತ್, ಕೃಷಿ ಉತ್ಪನ್ನ ಮಾರುಕಟ್ಟೆ ಉನ್ನತೀಕರಣ ಮುಂತಾದ ಸಂಗತಿ ಇಟ್ಟುಕೊಂಡು ಚುನಾವಣೆ ಪ್ರಚಾರ ನಡೆಯುತ್ತಿದೆ. ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನ ರೈತರಿಂದ ವಿಕ್ರಯಿಸುವುದಿಲ್ಲ ಏಲಂ ಮಾಡುವ ಕ್ರಮವೂ ಇಲ್ಲ. ಬದಲಾಗಿ ರೈತರಿಗೆ ಮಾರಾಟಕ್ಕೆ ಮಾರುಕಟ್ಟೆ ಸೌಲಭ್ಯ ಒದಗಿಸಿದ್ದು, ವಾರ್ಷಿಕ 60 ಲಕ್ಷ ಟರ್ನ್‌ಓವರ್ ನಡೆಸುತ್ತಿದೆ. ಮಾರುಕಟ್ಟೆಯಲ್ಲಿ ಅಡಿಕೆ, ತೆಂಗು ಹೆಚ್ಚು ಮಾರಾಟವಾಗುತ್ತಿದ್ದು, ಶೇ.1ರ ಮಾರಾಟ ತೆರಿಗೆ ಟಿಎಪಿಸಿಎಂಎಸ್ ಸಂಗ್ರಹಿಸುತ್ತಿದೆ. ಶನಿವಾರ ಸಂತೆಯಲ್ಲೂ ಕೂಡಾ ಮಾರಾಟಗಾರಿಂದ ಸುಂಕ ವಸೂಲು ಮಾಡುತ್ತದೆ. © ಕುಂದಾಪ್ರ ಡಾಟ್ ಕಾಂ.

 

Leave a Reply

Your email address will not be published. Required fields are marked *

4 × five =