ಲಾಕ್‌ಡೌನ್: ನಿಯಮ ಉಲ್ಲಂಘಿಸಿದರೆ ಜೈಲು ಖಚಿತ – ಎಎಸ್ಪಿ ಹರಿರಾಂ ಶಂಕರ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ೧೪೪ ಸೆಕ್ಷನ್ ಜಾರಿಯಲ್ಲಿದೆ. ಇದು ತಿಳಿದಿದ್ದು ಅಗನತ್ಯವಾಗಿ ಮನೆ ಹೊರಕ್ಕೆ ಬರುವುದು, ಗುಂಪು ಸೇರುವುದು ಮುಂತಾದ ಕಾನೂನು ಮೀರಿದ ವರ್ತನೆ ಕಂಡುಬಂದರೆ ಪೊಲೀಸ್ ಇಲಾಖೆ ಕಠಿಣ ಕ್ರಮ ಅನುಸರಿಸಲಿದೆ ಎಂದು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಹೇಳಿದರು.

Call us

Call us

Visit Now

ಅವರು ಮಂಗಳವಾರ ಕುಂದಾಪುರದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕೊರೋನಾ ವಿಚಾರದಲ್ಲಿ ಜನರು ಭಯ ಪಡುವ ಅಗತ್ಯವಿಲ್ಲ. ಆದರೆ ಅಗತ್ಯ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು. ಕುಂದಾಪುರದ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ನಾಗರಿಕರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

Click here

Call us

Call us

ಶಿರೂರು, ಹೊಸಂಗಡಿ, ನಾಗೋಡಿ ಚೆಕ್‌ಪೋಸ್ಟ್‌ಗಳಲ್ಲಿ ಖಾಸಗಿ ವಾಹನ ಹಾಗೂ ಜನಸಂಚಾರವನ್ನು ಸಂಪೂರ್ಣ ನಿಬಂರ್ಧಿಸಲಾಗಿದೆ. ಗಡಿಯಲ್ಲಿ ಆರೋಗ್ಯ ಸಿಬ್ಬಂಧಿಗಳನ್ನ ನೇಮಿಸಲಾಗಿದೆ. ತುರ್ತು ಸೇವೆಯ ವಾಹನ, ತರಕಾರಿ, ಹಾಲಿನ ವಾಹನಗಳನ್ನಷ್ಟೇ ಬಿಡಲಾಗುತ್ತಿದೆ. ಎಲ್ಲೆಡೆಯೂ ಆಸ್ಪತ್ರೆ, ಮೆಡಿಕಲ್, ದಿನಸಿ ಹಾಗೂ ತರಕಾರಿ ಅಂಗಡಿಗಳು ನಿತ್ಯವೂ ತೆರೆದಿರುತ್ತದೆ. ಆದರೆ ಅಲ್ಲಿಯೂ ಜನರು ಗುಂಪುಗುಂಪಾಗಿ ಬರುವಂತಿಲ್ಲ. ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳುವುದು ಅಗತ್ಯ. ಇದರೊಂದಿಗೆ ಸರಕಾರದ ಆದೇಶವನ್ನು ಪಾಲಿಸುವುದು ಕಡ್ಡಾಯ ತಪ್ಪಿದಲ್ಲಿ ಪೊಲೀಸರು ಕಾನೂನು ರಿತ್ಯಾ ಕ್ರಮ ಕೈಗೊಳ್ಳುತ್ತಾರೆ ಎಂದವರು ಎಚ್ಚರಿಸಿದರು. ಈ ಮಧ್ಯೆ ದೇವಸ್ಥಾನ ಹಾಗೂ ಆಭರಣದ ಅಂಗಡಿಗಳು ಬಂದ್ ಇರುವುದನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಯುವ ಸಾಧ್ಯತೆಯಿದ್ದು, ಸೂಕ್ತ ಎಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ ಎಂದರು.

ಹೋಮ್ ಕ್ವಾರಂಟೈನ್‌ನಲ್ಲಿರುವವರು ಹೊರಬಂದರೆ ಎಚ್ಚರ:
ಹೋಮ್ ಕ್ವಾರಂಟೈನ್‌ನಲ್ಲಿರುವವರು ಅನಗತ್ಯವಾಗಿ ಹೊರಗೆ ಸುತ್ತುತ್ತಿದ್ದಾರೆ ಎಂಬ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಂತವರ ಮನೆಗೆ ತೆರಳಿ ನೋಟಿಸ್ ಅಂಟಿಸಿ, ಹೊರಬರದಂತೆ ತಿಳಿಸಲಾಗಿದೆ. ಪ್ರತಿ ದಿನ ಎರಡು ಭಾರಿ ಪೊಲೀಸರು ಅವರ ಮನೆಗೆ ತೆರಳಲಿದ್ದಾರೆ. ಜನರು ಭಯಪಡುವ ಅಗತ್ಯವಿಲ್ಲ ಎಂದರು. /ಕುಂದಾಪ್ರ ಡಾಟ್ ಕಾಂ ಸುದ್ದಿ/

 

Leave a Reply

Your email address will not be published. Required fields are marked *

sixteen − eight =