ಕುಂದಾಪುರ ಮೂಲದ ಆರು ಸಾಧಕರಿಗೆ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೆಂಗಳೂರು: ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಕೊಡಮಾಡುವ ‘೪೧ನೇ ವಾರ್ಷಿಕ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕುಂದಾಪುರದ ಮೂಲದ ಆರು ಮಂದಿ ಸಾಧಕರಿಗೆ ಸೇರಿದಂತೆ 63 ಗಣ್ಯರಿಗೆ ನ್ಯಾ. ಎನ್. ಕುಮಾರ್, ದೂರದರ್ಶನ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ. ಮಹೇಶ್ ಜೋಶಿ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ದಿನೇಶ್ ವೈದ್ಯ ಅಂಪಾರು ಅವರಿಗೆ ಸಮಾಜ ಸೇವೆಗಾಗಿ, ಉಡುಪಿಯಲ್ಲಿ ನೆಲೆಸಿರುವ ರೋಟರಿ ಜಿಲ್ಲೆ 3180 ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ ಅವರಿಗೆ ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ, ಉದ್ಯಮಿ ಎ. ಎಸ್. ರಮೇಶ್ ಆಚಾರ್ಯ ಅವರಿಗೆ ಸಮಾಜ ಸೇವೆಗಾಗಿ, ಕತಾರ್‌ನಲ್ಲಿ ನೆಲೆಸಿರುವ ಕತಾರ್ ಕರ್ನಾಟಕ ಸಂಘದ ನಿಕಟಪೂರ್ವಾಧ್ಯಕ್ಷ ದೀಪಕ್ ಶೆಟ್ಟಿ ಅವರಿಗೆ ಸಮಾಜ ಸೇವೆಗಾಗಿ, ಕುಂದಾಪುರದ ವೈದ್ಯ ಡಾ. ಸತೀಶ್ ಪೂಜಾರಿ ಅವರಿಗೆ ಸಂಘಟನೆ ಹಾಗೂ ವೈದ್ಯಕೀಯ ಕ್ಷೇತ್ರದ ಸೇವೆಗಾಗಿ, ಕುಂದಾಪುರ ನಾಟ್ಯವಸಂತ ನಾಟ್ಯಾಲದ ನಿರ್ದೇಶಕಿ ಪವಿತ್ರ ಅಶೋಕ್ ಅವರಿಗೆ ನೃತ್ಯ ಕ್ಷೇತ್ರದ ಸಾಧನೆಗಾಗಿ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿ ಪ್ರದಾನಿಸಿ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಕನಿಷ್ಠ ಎರಡು ಆಪರೇಷನ್ ಆಗಿರಬೇಕೆಂಬ ಮಾತಿದೆ. ಅಂದರೆ, ಯುವಕರಿಗೆ ಅಲ್ಲಿ ಅವಕಾಶ ಸಿಗುವುದಿಲ್ಲ. ಆರ್ಯಭಟ ಪ್ರಶಸ್ತಿಯಲ್ಲಿ ೫ನೇ ತರಗತಿಯಿಂದ ಮೊದಲ್ಗೊಂಡು ೮೦ರ ವಯೋಮಾನದ ವರೆಗೂ ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಸಿಕ್ಕವರೂ ಆರ್ಯಭಟ ಪ್ರಶಸ್ತಿಗೆ ಹಂಬಲಿಸುವ ಘನತೆಯನ್ನು ಈ ಸಂಸ್ಥೆ ಸಂಪಾದಿಸಿದೆ ಎಂದರು. / ಕುಂದಾಪ್ರ ಡಾಟ್ ಕಾಂ ಸುದ್ದಿ. /


Aryabhata award Dinesh vaidyaAryabhata award Sathish poojaryAryabhata award Balakrishna Maddodi Aryabhata award Deepak shetty

????????????????????????????????????
Aryabhata award AS Ravindra Acharya

Featured write-ups about our Proud Achievers
► ಅಂಪಾರು ದಿನೇಶ್ ವೈದ್ಯ ಅವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ – http://kundapraa.com/?p=14225
► ಡಾ. ಸತೀಶ್ ಪೂಜಾರಿ ಅವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ – http://kundapraa.com/?p=14201
► ಕುಂದಾಪುರದ ದೀಪಕ್ ಶೆಟ್ಟಿ ಅವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ – http://kundapraa.com/?p=14081
► ಬಾಲಕೃಷ್ಣ ಮದ್ದೋಡಿ ಅವರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ – http://kundapraa.com/?p=14166

Leave a Reply

Your email address will not be published. Required fields are marked *

4 × 1 =