ಕುಂದಾಪುರ: ಬಿಜೆಪಿಯ ಹಿರಿಯ ಕಟ್ಟಾಳು ಪುಂಡಲೀಕ ನಾಯಕ್ ಇನ್ನಿಲ್ಲ

Call us

Call us

ಕುಂದಾಪುರ: ಭಾರತೀಯ ಜನತಾ ಪಕ್ಷದ ಹಿರಿಯ ಕಟ್ಟಾಳು ಪುಂಡಲೀಕ ನಾಯಕ್ (75)  ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃದು ಸ್ವಭಾವದ, ಮಿತಭಾಷಿಕರೂ ಆಗಿದ್ದ ನಾಯಕರು ಬದುಕಿನ ಸಂಧ್ಯಾ ಕಾಲದವರೆಗೂ ಬ್ರಹ್ಮಚರ್ಯವನ್ನು ಆಚರಿಸಿದ್ದರು. ಹೋಟೆಲ್ ಉದ್ಯಮ, ಪಕ್ಷ, ಸಂಘಟನೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರು.

Click Here

Call us

Call us

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಕ್ರೀಯ ಸದಸ್ಯರಾಗಿದ್ದ ನಾಯಕರು ಕುಂದಾಪುರದಲ್ಲಿ ಸಂಘವನ್ನು ಬಲಪಡಿಸಿದವರಲ್ಲಿ ಓರ್ವರು. ಕುಂದಾಪುರದಲ್ಲಿ ಜನಸಂಘವನ್ನು ಕಟ್ಟಿ ಬೆಳೆಸಿದ ಪುಂಡಲೀಕ ನಾಯಕ್ ಆ  ಮೂಲಕ ರಾಜಕೀಯ ಕ್ಷೇತ್ರಕ್ಕೆ ಧುಮುಕಿ ಪುರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿಪ್ರಭಾವಿ ನಾಯಕರಾಗಿ ಗುರುತಿಸಿಕೊಂಡವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸವನ್ನು ಅನುಭವಿಸಿದ್ದ ಇವರು  1989ರಲ್ಲಿ ಮೊದಲ ಭಾರಿಗೆ ಬಿಜೆಪಿಯ ಅಭ್ಯರ್ಥಿಯಾಗಿಯೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ವರ್ಧಿಸಿದ್ದರು. ಕುಂದಾಪುರದಲ್ಲಿ ಇವರ ಒಡೆತನದಲ್ಲಿ ನಡೆಯುತ್ತಿದ್ದ ‘ನಾಯಕ್ ರೆಸ್ಟೊರೆಂಟ್’ ಆ ಕಾಲದಲ್ಲಿ ಬಹು ಪ್ರಸಿದ್ಧಿಯನ್ನು ಪಡೆದಿತ್ತು. (ಕುಂದಾಪ್ರ ಡಾಟ್ ಕಾಂ ಸುದ್ದಿ)

Click here

Click Here

Call us

Visit Now

ಆರ್.ಎಸ್.ಎಸ್. ಹಾಗೂ ಬಿಜೆಪಿ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರುಗಳೊಂದಿಗೆ ಒಡನಾಟ ಹೊಂದಿದ್ದ ಇವರು ಈ ಭಾಗದಲ್ಲಿ ಅನೇಕ ಜನಪರವಾದ ಹೋರಾಟ, ಚಳುವಳಿಗಳನ್ನು ಸಂಘಟಿಸಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಭಜನೆ ಗಾಯಕ ಮತ್ತು ಉತ್ತಮ ತಬಲಾಪಟುವಾಗಿದ್ದರು, ಪುಸ್ತಕಗಳನ್ನು ಓದುವ ಹವ್ಯಾಸ ಇಟ್ಟುಕೊಂಡ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.

ಮೃತರ ನಿವಾಸಕ್ಕೆ ತೆರಳಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾ ರ್ಜುನ ಹೆಗ್ಡೆ, ಬಿಜೆಪಿ ಅಧ್ಯಕ್ಷ ರಾಜೇಶ್‌ ಕಾವೇರಿ, ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕ ಕಿಶೋರ್‌ ಕುಮಾರ್‌, ಕಿರಣ್‌ ಕೊಡ್ಗಿ,. ಶಿವಾನಂದ, ಮೋಹನ್‌ದಾಸ್‌ ಶೆಣೈ ಮಾಣಿ ಗೋಪಾಲ, ಬುದ್ದ ರಾಜ್‌ ಶೆಟ್ಟಿ, ಎ.ಎಸ್‌.ಎನ್‌. ಹೆಬ್ಟಾರ್ ಮತ್ತಿತರರು ಅಂತಿಮ ದರ್ಶನ ಪಡೆದರು.

Call us

ಶಾಸಕ ಸುನೀಲ್‌ ಕುಮಾರ್‌, ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ, ಮಾಜಿ ಶಾಸಕ ರಘುಪತಿ ಭಟ್‌, ಮಲ್ಯಾಡಿ ಶಿವರಾಮ ಶೆಟ್ಟಿ , ಬಿಜೆಪಿಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ ಉದಯ ಕುಮಾರ್‌ ಶೆಟ್ಟಿ, ಮಾಜಿ ಶಾಸಕ ಯೋಗೀಶ್‌ ಭಟ್‌ ಸೇರಿದಂತೆ ಸೇರಿದಂತೆ ಪಕ್ಷದ ವಿವಿಧ ಗಣ್ಯರು, ಹಿತೈಶಿಗಳು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

ten + four =