ಕರೋನಾ ಮಾರ್ಗಸೂಚಿಯಲ್ಲಿ ಧಾರ್ಮಿಕ ಕಾರ್ಯಕ್ರಮ, ಆಚರಣೆಗೆ ನಿಷೇಧ: ಕಾಂಗ್ರೆಸ್ ಖಂಡನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಉಪ ಚುನಾವಣಾ ಪ್ರಚಾರ ಮುಗಿಯುವ ತನಕ ಕರೋನಾ ಮಾರ್ಗಸೂಚಿಯನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ಪ್ರಕಟಿಸಿಕೊಂಡು , ಉಪ ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ತಮ್ಮ ಮನಸ್ಸಿಚ್ಚೆಯಂತೆ ಮಾರ್ಗಸೂಚಿ ಪ್ರಕಟಿಸಿತ್ತಿರುವುದು ಖಂಡನಾರ್ಹ ಎಲ್ಲಾ ಆಚರಣೆಗೆ ,ರಾಜಕೀಯ ಸಭೆಗೆ ಅವಕಾಶ ಮಾಡಿ ಕೊಟ್ಟು ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ನಿಷೇಧಿಸಿರುವುದು ತೀವ್ರ ಖಂಡನೀಯ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಆರೋಪಿಸಿದ್ದಾರೆ.

Click here

Click Here

Call us

Call us

Visit Now

Call us

Call us

ಕಳೆದ ವರ್ಷದ ಲಾಕ್ ಡೌನ್ ಕಾರಣದಿಂದ ಕರಾವಳಿ ಭಾಗದಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ನಡೆಯುವ ದೈವ ,ದೇವರುಗಳ ಎಲ್ಲಾ ಆಚರಣೆಗಳು ರದ್ದುಗೊಂಡಿದ್ದವು. ಈ ಬಾರಿ ದಿನಾಂಕ 16-4-2021 ರಂದು ಹೊರಡಿಸಿರುವ ಮಾರ್ಗ ಸೂಚಿಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಸೀಮಿತ ಜನರಿಗೆ ಅವಕಾಶ ಮಾಡಿಕೊಟ್ಟು ,ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ನಿಷೇಧಿಸಿರುವುದು ಸರಿಯಾದ ಕ್ರಮವಲ್ಲ. ಹಿಂದೆ ಇಂತಹ ಮಾರಕ ರೋಗಗಳು ಬಂದಾಗ ಋುಷಿ ಮುನಿಗಳು , ಸ್ವಾಮಿಜಿಗಳು ಹೋಮ ಹವನ ಯಜ್ಞ ಯಾಗ ಮಾಡಿಸಿ ದೇವರ ಮೊರೆ ಹೋಗಿರುವುದು ಇತಿಹಾಸ. ಇಂತಹ ನಿರ್ಧಾರ ಕಾಂಗ್ರೆಸ್ ಸರಕಾರ ಪ್ರಕಟಿಸಿದ್ದರೇ ಧಾರ್ಮಿಕ ಭಾವನೆಗೆ ಚ್ಯುತಿ ಬಂದಿದೆ ಎಂದು ರಸ್ತೆಗೆ ಇಳಿದು ಹೋರಾಟ ಪ್ರಾರಂಭವಾಗುತಿತ್ತು. ಆದರೆ ಈಗ ಇವರೆಲ್ಲಾ ಜಾಣ ಮೌನಕ್ಕೆ ಶರಣಾಗಿದ್ದಾರೆ. ಕರೋನಾ ಕಾರಣದಿಂದ ಸೀಮಿತ ಸಂಖ್ಯೆಯಲ್ಲಿ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟು , ಧಾರ್ಮಿಕ ಕಾರ್ಯಕ್ರಮ ಮತ್ತು ಆಚರಣೆ ನಿಷೇಧ ಮಾಡಿರುವುದು ಜನರ ಭಾವನೆಗಳೊಂದಿಗೆ ಸರಕಾರ ಆಟ ಆಡಿದಂತಾಗಿದೆ. ಯಾವುದೇ ಕಾರಣಕ್ಕೂ ಇಂತಹ ನಿರ್ಧಾರ ಸಮರ್ಥನಿಯ ಮತ್ತು ಸಮಂಜಸವಲ್ಲ. ಈ ನಿರ್ಧಾರ ಸರಕಾರ ಪುನರಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಳೆದ ವರ್ಷ ಹದಿನೈದು ದಿನ ಅಥವಾ ತಿಂಗಳಿಗೊಮ್ಮೆ ಮಾರ್ಗಸೂಚಿ ಹೊರಡಿಸುತ್ತಿದ್ದರಿಂದ ಜನ ಮಾನಸಿಕವಾಗಿ ತಯಾರಾಗುತ್ತಿದ್ದರು. ಈಗ ವಾರಕ್ಕೆ 2-3 ಬಾರಿ ಯದ್ವಾ ತದ್ವಾ ಮಾರ್ಗಸೂಚಿ ಹೊರಡಿಸಿ ರಾಜ್ಯದ ಜನರನ್ನು ಭಯಭೀತರನ್ನಾಗಿಸಲಾಗುತ್ತಿದೆ.

ಆಲೋಚನೆ, ಯೋಜನೆ, ಯೋಚನೆಯಿಲ್ಲದ ಸರಕಾರದ ಈ ಕ್ರಮಗಳಿಂದ ಸಾರ್ವಜನಿಕರು ಅಕ್ಷರಶಃ ಗೊಂದಲದಲ್ಲಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ವರದಿ , ಕರೋನಾ ಮಾರ್ಗಸೂಚಿ ಮತ್ತು ಲಾಕ್ ಡೌನ್ ,ಪರಿಕ್ಷೆಗಳ ಕುರಿತು ಸಚಿವರುಗಳ ಮಧ್ಯೆ ಮತ್ತು ಮುಖ್ಯಮಂತ್ರಿ ಮತ್ತು ಸಚಿವರುಗಳ ಮಧ್ಯೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ. ಕರೋನಾ ನಿಯಂತ್ರಣಕ್ಕೆ ಸರಕಾರ ತೆಗೆದುಕೊಳ್ಳುವ ಜನಪರ ತಿರ್ಮಾನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಸರಕಾರದ ತಿರ್ಮಾನ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆಯಂತಾಗಬಾರದು. ರಾಜ್ಯದ ಜನತೆ ಸಂಕಷ್ಠ ಮತ್ತು ಸಂದಿಗ್ದತೆಯಲ್ಲಿರುವ ಸಂದರ್ಭದಲ್ಲಿ ಸರಕಾರ ಜನಪರ ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:
► ಕೊರೋನಾ ಏರಿಕೆ ಹಿನ್ನೆಲೆ: ಧಾರ್ಮಿಕ ಆಚರಣೆ, ಮದುವೆ, ಇತರೆ ಸಮಾರಂಭಗಳಿಗೆ ಲಗಾಮ – https://kundapraa.com/?p=47340 .

Call us

Leave a Reply

Your email address will not be published. Required fields are marked *

7 + eleven =