ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್‌ನಲ್ಲಿ ಕುಂದಾಪುರದ ಮೂರು ಮುತ್ತುಗಳು!

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೆಂಗಳೂರು: ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿ ಕನ್ನಡಿಗರ ಫೇವರೀಟ್ ಕಾರ್ಯಕ್ರಮವೆಂದೆನಿಸಿಕೊಂಡಿರುವ ಮಜಾ ಟಾಕೀಸ್‌ನಲ್ಲಿ ಕುಂದಾಪುರದ ಮೂರು ಮುತ್ತು ಖ್ಯಾತಿಯ ರೂಪಕಲಾ ತಂಡ ಕಲಾವಿದರು ಭಾಗವಹಿಸಿದ್ದಾರೆ. ತಂಡದ ಸತೀಶ್ ಪೈ, ಸಂತೋಷ್ ಪೈ ಹಾಗೂ ಅಶೋಕ್ ಶಾನುಭೋಗ್ ಶೋನಲ್ಲಿ ಸೃಜನ್ ಜೊತೆ ತರಲೆ ಮಾಡಿದ್ದಾರೆ.

Call us

Click Here

Click here

Click Here

Call us

Visit Now

Click here

ಕಲರ್ಸ್ ಕನ್ನಡ ವಾಹಿನಿಯಲ್ಲಿ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿರುವ ಸೃಜನ್ ಲೋಕೇಶ್ ಸಾರಥ್ಯದ ‘ಮಜಾ ಟಾಕೀಸ್’ ಕಾರ್ಯಕ್ರಮವನ್ನು ಟಿವಿ ನೋಡುವ ಮಂದಿ ಮಿಸ್ ಮಾಡಿಕೊಳ್ಳುವುದಿಲ್ಲ. ಆರಂಭಗೊಂಡ ಮೊದಲ ಕಂತಿನಿಂದ ಇಲ್ಲಿಯ ತನಕ ಅತಿ ಹೆಚ್ಚು ಪ್ರೇಕ್ಷಕರನ್ನು ಹಿಡಿದಿಟ್ಟು ವಾಹಿನಿಯ ಟಿ.ಆರ್.ಪಿ ಹೆಚ್ಚಿಸಿದ್ದ ಹೆಗ್ಗಳಿಕೆ ಈ ಕಾರ್ಯಕ್ರಮಕ್ಕಿದೆ. ಅರಳು ಹುರಿದಂತೆ ಮಾತನಾಡುವ ಸೃಜನ್ ಲೋಕೇಶ್ ಹಾಗೂ ಅವರ ತಂಡದ ಕಾಮಿಡಿ ಪ್ರೇಕ್ಷಕನಿಗೆ ಇನ್ನಿಲ್ಲದ ಮನೋರಂಜನೆ ನೀಡುತ್ತಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಬಹಳಷ್ಟು ಸಿನೆಮಾ ನಟರು ಭಾಗವಹಿಸಿ ಇದು ತನಗೆ ಸಿಕ್ಕ ಸದಾವಕಾಶ ಎಂದು ಉದ್ಗರಿಸಿದನ್ನು ನೀವು ನೋಡಿರುತ್ತಿರಿ ಬಿಡಿ.

ಈ ಪ್ರಸಿದ್ಧ ಶೋನಲ್ಲಿ ಕುಂದಾಪುರದ ಮೂರು ಮುತ್ತು ಖ್ಯಾತಿಯ ಕಾಮಿಡಿ ಕಿಲಾಡಿಗಳಾದ ಸತೀಶ್ ಪೈ, ಸಂತೋಷ್ ಪೈ ಹಾಗೂ ಅಶೋಕ್ ಶಾನುಭೋಗ್ ಭಾಗವಹಿಸಿ ಹಾಸ್ಯಾಭಿಮಾನಿಗಳ ಕುತೂಹಲ ಕೆರಳಿಸಿದ್ದಾರೆ. ಮಜಾ ಟಾಕೀಸ್ ಕಾಮಿಡಿ ಕಿಂಗ್ ಸೃಜನ್ ಲೋಕೇಶ್ ಜೊತೆ ಕುಂದಾಪುರ ಕಾಮಿಡಿ ಕಿಂಗ್‌ಗಳು ಹೇಗೆ ಮಾತನಾಡಿದ್ದಾರೆ, ಹೇಗೆ ತರಲೆ ಮಾಡಿದ್ದಾರೆ ಎಂಬುದು ಸದ್ಯದ ಕುತೂಹಲ. ಇಂದು ಕಾರ್ಯಕ್ರಮದ ಶೂಟಿಂಗ್ ಮುಗಿದಿದ್ದು, ಫೆಬ್ರವರಿಯಲ್ಲಿ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ ಎಂದು ರೂಪಕಲಾ ತಂಡದ ನಿರ್ದೇಶಕ ಸತೀಶ್ ಪೈ ತಿಳಿಸಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಕುಂದಾಪ್ರ ಡಾಟ್ ಕಾಂ ಮೊಬೈಲ್ App ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ರೂಪಕಲಾ ಕುಂದಾಪುರ – ಕಲಾಪ್ರಿಯರಿಗೆ ಹಾಸ್ಯದ ರಸದೌತಣ ಬಡಿಸಿದ ನಾಟಕ ಸಂಸ್ಥೆ

Call us

Kundapura Mooru Muttu Fame drama artist participated in Maja Takies (1) Kundapura Mooru Muttu Fame drama artist participated in Maja Takies (2) Kundapura Mooru Muttu Fame drama artist participated in Maja Takies (3)Kundapura Mooru Muttu Fame drama artist participated in Maja Takies (6)Kundapura Mooru Muttu Fame drama artist participated in Maja Takies (7)Kundapura Mooru Muttu Fame drama artist participated in Maja Takies (5) Kundapura Mooru Muttu Fame drama artist participated in Maja Takies (4)

Leave a Reply

Your email address will not be published. Required fields are marked *

1 × 3 =