ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ವಕ್ವಾಡಿಯವರಾದ ಉದ್ಯಮಿ, ಸಿನೆಮಾ ವಿತರಕ ವಿ. ಕೆ. ಮೋಹನ್(60) ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೋಟೆಲ್ ಉದ್ಯಮದಲ್ಲಿ ತೊಡಗಿಕೊಡಿದ್ದ ಮೋಹನ್ ಅವರು ಸಿನೆಮಾ ನಿರ್ಮಾಣ, ಸಿನೆಮಾ ವಿತರಕರಾಗಿಯೂ ಗುರುತಿಸಿಕೊಂಡಿದ್ದರು. ಡಾ. ರಾಜ್ ಕುಟುಂಬದವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಅವರು ಕೆಲ ಸಿನೆಮಾಗಳಲ್ಲಿಯೂ ಕಾಣಿಸಿಕೊಂಡಿದ್ದರು. ಕುಂದಾಪುರಕ್ಕೆ ವಿವಿಧ ಸಂದರ್ಭಗಳಲ್ಲಿ ಸಿನೆಮಾ ನಟ-ನಟಿಯರನ್ನು ಕರೆತಂದು ಸ್ಥಳೀಯ ಕಾರ್ಯಕ್ರಮಗಳಿಗೆ ಮೆರಗು ನೀಡುತ್ತಿದ್ದರು.
ಕೆಲ ದಿನಗಳ ಹಿಂದೆ ಮೋಹನ್ ಅವರಿಗೆ ಸೇರಿದ ಕ್ಲಬ್ ಮೇಲೆ ದಾಳಿ ನಡೆದಿತ್ತು. ಆ ಬಳಿಕವೂ ಉದ್ಯಮದಲ್ಲಿ ಆರ್ಥಿಕ ಹಿಂಜರಿತ ಅನುಭವಿಸಿದ್ದರು. ಇದೆಲ್ಲವೂ ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ ಎನ್ನಲಾಗಿದೆ.
ನಿನ್ನೆ ಹೋಟೇಲ್ ಬಂದಿದ್ದ ಅವರು ಇಂದು ಬೆಳಿಗ್ಗೆ ರೂಮ್ ಬಾಗಿಲು ತೆರೆಯದೇ ಇದ್ದುದರಿಂದ ಅನುಮಾನಗೊಂಡು ಕಿಟಕಿ ತೆರೆದು ನೋಡಿದಾಗ ಅವರು ನೇಣಿಗೆ ಶರಣಾಗಿರುವುದು ತಿಳಿದುಬಂದಿತ್ತು. /ಕುಂದಾಪ್ರ ಡಾಟ್ ಕಾಂ ಸುದ್ದಿ./