ಕುಂದಾಪುರ: ಸೇವಾಭಾರತಿಯಿಂದ ಲಾಕ್‌ಡೌನ್‌ನಲ್ಲಿ ಲಾರಿ, ಟ್ರಕ್ ಚಾಲಕರಿಗೆ ಉಚಿತ ಊಟ ವಿತರಣೆ

Call us

Call us

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಾಕ್‌ಡೌನ್‌ನಿಂದಾಗಿ ಊಟ – ಉಪಹಾರಕ್ಕೆ ಸರಿಯಾದ ಹೋಟೆಲ್‌ಗಳು ಸಿಗದೆ ತೊಂದರೆ ಅನುಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿ, ಟ್ರಕ್‌ಗಳ ಚಾಲಕರ ಹಸಿವು ತಣಿಸುವ ಕಾರ್ಯದಲ್ಲಿ ಕುಂದಾಪುರದ ತಾಲೂಕು ಸೇವಾಭಾರತಿ ಸಂಸ್ಥೆಯ ಕಾರ್ಯಕರ್ತರು ಎರಡು ವಾರಗಳಿಂದ ನಿರಂತರವಾಗಿ ತೊಡಗಿಕೊಂಡಿದ್ದಾರೆ.

Call us

Click here

Click Here

Call us

Call us

Visit Now

Call us

ಸೇವಾ ಭಾರತಿ ಸಂಸ್ಥೆಯ ಮೂಲಕ ನಿತ್ಯವೂ ಮಧ್ಯಾಹ್ನದ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಗೂಡ್ಸ್ ವಾಹನಗಳು ಹಾಗೂ ಅಂಬ್ಯುಲೆನ್ಸ್ ಚಾಲಕರಿಗೆ ಉಚಿತ ಊಟ ಪೊಟ್ಟಣ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಗುತ್ತಿದೆ. ಪ್ರತಿನಿತ್ಯ ಮಧ್ಯಾಹ್ನ ತೆಕ್ಕಟ್ಟೆ ಹಾಗೂ ಕೋಟೇಶ್ವರ ಭಾಗದಲ್ಲಿ ಎರಡು ತಂಡಗಳನ್ನು ಮಾಡಿಕೊಂಡು ಊಟ ವಿತರಿಸಲಾಗುತ್ತಿದೆ. ಆರಂಭದಲ್ಲಿ 100 ಊಟದ ಪೊಟ್ಟಣ ಖಾಲಿಯಾದರೆ ಈಗ 300 ರಿಂದ 350 ಊಟದ ಪೊಟ್ಟಣಗಳನ್ನು ಮಾಡಿ ವಿತರಿಸಲಾಗುತ್ತಿದೆ.

ಕಳೆದ ಎರಡು ವಾರಗಳಿಂದ ಸೇವಾ ಭಾರತಿ ನಡೆಸುತ್ತಿರುವ ಈ ಸೇವಾ ಕಾರ್ಯದಲ್ಲಿ ವಿವಿಧ ದಾನಿಗಳು ಕೈಜೋಡಿಸಿದ್ದು ಅಗತ್ಯವಿರುವ ಆರ್ಥಿಕ ಸಹಕಾರ, ಅಕ್ಕಿ, ತರಕಾರಿಗಳನ್ನು ನೀಡುತ್ತಿದ್ದಾರೆ. ಕುಂದಾಪುರ ಸೇವಾ ಭಾರತಿಯ ಉತ್ಸಾಹಿ ತಂಡ ಪ್ರತಿನಿತ್ಯ ಸೇವಾ ಕಾಯಕದಲ್ಲಿ ತೊಡಗಿಕೊಂಡಿದೆ.

ಇದನ್ನೂ ಓದಿ
► ಜೆಸಿಐ ಕುಂದಾಪುರ ಸಿಟಿಯಿಂದ ಲಾಕ್‌ಡೌನ್‌ನಲ್ಲಿ ಹಸಿದವರಿಗೆ ಊಟ: ನಿತ್ಯವೂ 200ಕ್ಕೂ ಅಧಿಕ ಮಂದಿಗೆ ವಿತರಣೆ – https://kundapraa.com/?p=48043 .
► ಕೊಟೇಶ್ವರ ಶ್ರೀ ರಾಮ ಸಂಘದ ವತಿಯಿಂದ ಲಾಕ್‌ಡೌನ್ ಅವಧಿಯಲ್ಲಿ ಉಚಿತ ಉಪಹಾರದ ವ್ಯವಸ್ಥೆ – https://kundapraa.com/?p=47877 
► ಗಂಗೊಳ್ಳಿ ಯುವಕರಿಂದ ವಾಹನ ಚಾಲಕರು ಹಾಗೂ ನಿರ್ವಾಹಕರಿಗೆ ಊಟೋಪಚಾರ ವ್ಯವಸ್ಥೆ –https://kundapraa.com/?p=47808 .
► ಕುಂದಾಪುರ: ಶ್ರೀ ನಾರಾಯಣಗುರು ಯುವಕ ಮಂಡಲದಿಂದ ಹಸಿದವರಿಗೆ ಊಟ ವಿತರಣೆ – https://kundapraa.com/?p=48029 .

Call us

Leave a Reply

Your email address will not be published. Required fields are marked *

15 + 10 =