ತ್ರಾಸಿ ಬೀಚ್ ಸುರಕ್ಷತೆಗಿಲ್ಲ ಆದ್ಯತೆ, ಹೆದ್ದಾರಿ ಗೋಳು ಮುಂದುವರಿಯುವ ಸಾಧ್ಯತೆ!

Call us

Call us

ಕುಂದಾಪುರ ತಾಪಂ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಮಾರ್ದನಿ

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತ್ರಾಸಿ-ಮರವಂತೆ ಬೀಚ್‌ನಲ್ಲಿ ತಡೆಗೋಡೆ ರಚನೆ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿಗೆ ಬರುವ ಪ್ರವಾಸಿದರ ಇದರ ಮೇಲೆಯೇ ನಡೆಯುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿಯೇ ಪ್ರವಾಸಿಗರ ವಾಹನ ಹಾಗೂ ಇತರ ವಾಹನಗಳು ಸರತಿ ಸಾಲಿನಲ್ಲಿ ನಿಂತು ಅಪಾಯಕ್ಕೆ ದಾರಿ ಪಡೆಕೊಟ್ಟಿದೆ. ಇಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ನಾಮಫಲಕವನ್ನೂ ಅಳವಡಿಸಿಲ್ಲ. ಈ ಬಗ್ಗೆ ಗಮನ ಹರಿಸುವುದು ಯಾರು. ಅಪಘಾತವಾದಗಲೇ ಎಚ್ಚರವಹಿಸಬೇಕೆ. ಮುಂಜಾಗೃತಾ ಕ್ರಮ ಕೈಗೊಳ್ಳಲು ಪೊಲೀಸ್ ಹಾಗೂ ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ ಸದಸ್ಯ ಪ್ರವೀಣಕುಮಾರ್ ಶೆಟ್ಟಿ ಆಗ್ರಹಿಸಿದರು.

Click here

Call us

Call us

ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜರುಗಿದ 16ನೇ ತಾಪಂ. ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ತಾಪಂ ಸದಸ್ಯ ಮಹೇಂದ್ರ ಪೂಜಾರಿ ಮಾತನಾಡಿ ಬೈಂದೂರಿನಿಂದ ಕುಂದಾಪುರದ ತನಕದ ಚತುಷ್ಪಥ ಹೆದ್ದಾರಿ ಅಪಘಾತಕ್ಕೆ ಎಡೆಮಾಡಿಕೊಟ್ಟಿದೆ. ಅವೈಜ್ಞಾನಿಕ ತಿರುವು, ಪ್ರಮುಖ ವೃತ್ತಗಳಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸದಿರುವುದು ನಾಗರಿಕರ ಪ್ರಾಣಕ್ಕೆ ಕುತ್ತು ತಂದಿದೆ. ಈವರೆಗೆ ಹತ್ತಾರು ಅಪಘಾತಗಳಾಗಿ ಜನರ ಪ್ರಾಣಕ್ಕೆ ಅಪಾಯ ಎದುರಾಗಿದ್ದರೂ ಸಂಬಂಧಿತ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಕಂಪೆನಿ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಇದಕ್ಕೆ ಸದಸ್ಯರಾದ ಕರಣ್ ಪೂಜಾರಿ, ಸುರೇಂದ್ರ ಖಾರ್ವಿ ಧ್ವನಿಗೂಡಿಸಿ ಹೆದ್ದಾರಿ ಮೇಲೆಯೇ ಸರ್ವಿಸ್ ಬಸ್‌ಗಳನ್ನು ನಿಲ್ಲಿಸಲಾಗುತ್ತಿದ್ದು, ಉಳಿದ ವಾಹನಗಳಿಗೂ ತೊಂದರೆಯಾಗುತ್ತಿದೆ. ಜಕ್ಷನ್‌ನಿಂದ ಸ್ವಲ್ಪ ದೂರದಲ್ಲಿ ಹೆದ್ದಾರಿ ಬದಿಯಲ್ಲಿ ಬಸ್ ನಿಲ್ಲಿಸಲು ಕ್ರಮ ವಹಿಸುವಂತೆ ಮನವಿ ಮಾಡಿಕೊಂಡರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಇದಕ್ಕೆ ಪ್ರತಿಕ್ರಿಯಿಸಿದ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಹೆದ್ದಾರಿ ಸಮಸ್ಯೆಗಳ ಬಗ್ಗೆ ಎಸಿ ಅವರೊಂದಿಗೆ ಸಮಾಲೋಚಿಸಿ ಅವರ ನಿರ್ದೇಶನದಂತೆ ಕ್ರಮವಹಿಸಿದ್ದೇವೆ. ಕಾಮಗಾರಿ ನಿರ್ವಹಿಸುತ್ತಿರುವ ಕಂಪೆನಿಯ ವಿರುದ್ಧ ದೂರ ಬಂದರೆ ಸ್ವೀಕರಿಸಿ ಕ್ರಮವಹಿಸಲು ಸಿದ್ಧರಿದ್ದೇವೆ. ತಾಲೂಕಿನ ಎಲ್ಲಾ ಜಂಕ್ಷನ್‌ಗಳಲ್ಲಿಯೂ ಟ್ರಾಫಿಕ್ ಪೊಲೀಸ್ ನೇಮಿಸಲು ಸಿಬ್ಬಂದಿ ಕೊರತೆ ಇರುವುದರ ಹೊರತಾಗಿಯೂ ಉತ್ತಮ ಸೇವೆ ನೀಡಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದರು.

ಸದಸ್ಯರ ಅನುದಾನ ವಿನಿಯೋಗವಾಗದಿರುವ ಕುರಿತು ಪ್ರತಿಕ್ರಿಯಿಸಿದ ಸದಸ್ಯ ಜಗದೀಶ್ ದೇವಾಡಿಗ, ಪ್ರತಿ ಸದಸ್ಯನಿಗೆ ಸಿಗುವ ಅನುದಾನವೇ 4 ಲಕ್ಷ ರೂ. ಅದೂ ಅಭಿವೃದ್ಧಿಗೆ ಬಳಕೆಯಾಗದ ಸ್ಥಿತಿ ಎದುರಾಗಿದೆ. ಆಡಳಿತ ವೈಫಲ್ಯದಿಂದ 40 ಲಕ್ಷ ರೂ. ಅನುದಾನ ಬಳಕೆಯಾಗದಿದ್ದರೇ ಅದಕ್ಕೆ ಸದಸ್ಯರು ಹೊಣೆಯಲ್ಲ. ಕ್ಷೇತ್ರದ ವ್ಯಾಪ್ತಿಯಲ್ಲಿ ಹತ್ತಾರು ಕೆಲಸಗಳು ಬಾಕಿ ಇದ್ದು ಅನುದಾನ ಒದಗಿಸಿಕೊಡಿ ಎಂದು ಆಗ್ರಹಿಸಿದರು. ಇದರ ಬೆನ್ನಲ್ಲೇ ಸದಸ್ಯ ಉಮೇಶ್ ಶೆಟ್ಟಿ, ಪುಪ್ಪರಾಜ್ ಶೆಟ್ಟಿ, ಕರಣ ಪೂಜಾರಿ, ಮಾಲತಿ ಶೇರುಗಾರ್, ವಾಸುದೇವ ಪೈ ಮೊದಲಾದವರು ಅಧ್ಯಕ್ಷರ ಆಡಳಿತ ವೈಫಲ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷರು ಅಧಿಕಾರಿಗಳಿಂದ ಕೆಲಸ ತೆಗೆಸುವಲ್ಲ ವಿಫಲರಾಗಿದ್ದಾರೆ. ಪಾಲನಾ ವರದಿ ಪ್ರಯೋಜನಕ್ಕಿಲ್ಲದಂತಾಗಿದೆ. ಕಾಟಾಚಾರಕ್ಕೆ ಸಭೆ ನಡೆಯುತ್ತಿದೆ. ಜಿಲ್ಲಾ ಪಟ್ಟದ ಅಧಿಕಾರಿಗಳು, ಕುಂದಾಪುರ ತಹಶೀಲ್ದಾರರು ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸಭೆಯಲ್ಲಿ ಗೋಕಳ್ಳತನ, ಸೋಲಾರ್ ಅವ್ಯವಸ್ಥೆ, ಆದಾಯ ದೃಢೀಕರಣ ಪತ್ರ, ಮೀಟರ್ ಬಡ್ಡಿ ದಂದೆ, ೯೪ಸಿ ಅರ್ಜಿ ಮೊದಲಾದ ವಿಚಾರಗಳ ಬಗೆಗೆ ಚರ್ಚಿ ನಡೆಯಿತು.

ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಎಸ್. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಗುಜ್ಜಾಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್, ಬೈಂದೂರು ತಹಸೀಲ್ದಾರ್ ಬಿ.ಪಿ ಪೂಜಾರ್, ಕುಂದಾಪುರ ಡಿವೈಎಸ್ಪಿ ಬಿ. ಪಿ. ದಿನೇಶ್ ಕುಮಾರ್ ಉಪಸ್ಥಿತರಿದ್ದರು.  ಕುಂದಾಪ್ರ ಡಾಟ್ ಕಾಂ ಸುದ್ದಿ.

 

Leave a Reply

Your email address will not be published. Required fields are marked *

one × five =