ಕುಂದಾಪುರ ಪುರಸಭೆ ಸಾಮಾನ್ಯ ಸಭೆ: ಜಾಗ ಒತ್ತುವರಿ ತೆರವು, ನಗರ ಪ್ರವೇಶ ದ್ವಾರಕ್ಕೆ ಆಗ್ರಹ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಪುರಸಭೆ ಸಾಮಾನ್ಯ ಸಭೆ ಮಂಗಳವಾರ ನಡೆಯಿತು.

Call us

Call us

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಫ್ಲೈಓವರ್‌ನಲ್ಲಿ ಕುಂದಾಪುರ ನಗರ ಪ್ರವೇಶಕ್ಕೆ ಮುಖ್ಯದ್ವಾರವೇ ಇಲ್ಲದಂತಾಗಿದೆ. ಬಹುಪಾಲು ಸರಕಾರಿ ಕಛೇರಿಗಳು ಇರುವ ಪ್ರದೇಶ ಹಾಗೂ ಕುಂದಾಪುರ ನಗರ ಆರಂಭವಾದ್ದರಿಂದ ಎಲ್‌ಐಸಿ ರಸ್ತೆ ಎದುರು ನಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಹಲವು ಭಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಎನ್‌ಹೆಚ್‌ಆರ್‌ಐ ನಮ್ಮ ಮನವಿಗೆ ಸ್ಪಂದಿಸದಿದ್ದರೇ ಕುಂದಾಪುರದ ನಾಗರಿಕರೇ ಪ್ರವೇಶ ಮಾಡಿಕೊಳ್ಳಬೇಕಾಗುತ್ತದೆ ಎಂದು ಪುರಸಭಾ ಸದಸ್ಯ ಗಿರೀಶ್ ದೇವಾಡಿಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಸಭೆಯಲ್ಲಿದ್ದ ಸದಸ್ಯರು ಮೇಜು ತಟ್ಟಿ ಅನುಮೋದಿಸಿದರು.

ಫ್ಲೈಓವರ್ ನೀರು ಸರ್ವಿಸ್ ರಸ್ತೆ ಬೀಳುತ್ತಿದ್ದು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಅಸಮರ್ಪಕ ಕಾಮಗಾರಿ ಸರ್ವಿಸ್ ರಸ್ತೆಯೇ ಮಾಯವಾಗಿದೆ ಇದನ್ನು ಶೀಘ್ರವಾಗಿ ದುರಸ್ತಿಗೊಳಿಸುವಂತೆ ಸದಸ್ಯ ಚಂದ್ರಶೇಖರ ಖಾರ್ವಿ ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್ ದೀಪ ಅಳವಡಿಸದಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ ಆದರು.

Click here

Click Here

Call us

Call us

Visit Now

ಈ ವೇಳೆ ಉಪಸ್ಥಿತರಿದ್ದ ಎನ್‌ಹೆಚ್‌ಆರ್‌ಐ ಇಂಜಿನಿಯರ್‌ಗಳು ಮಾತನಾಡಿ, ಕುಂದಾಪುರ ನಗರಕ್ಕೆ ಫ್ಲೈಓವರ್‌ನಿಂದ ಪ್ರವೇಶಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಇಲ್ಲಿಗೆ ಭೇಟಿ ನೀಡಿದ್ದ ಪ್ರಾಜೆಕ್ಟ್ ಡೈರೆಕ್ಟರ್ ತಿಳಿಸಿದ್ದಾರೆ. ಸಂಪೂರ್ಣ ಕಾಮಗಾರಿ ಮುಗಿದ ಬಳಿಕ ಹೆದ್ದಾರಿ ದೀಪ ಅಳವಡಿಸಲಾಗುವುದು ಎಂದರು. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿಯ ದುರವಸ್ಥೆ ಹಾಗೂ ಕುಂದಾಪುರ ನಾಗರಿಕರ ಬೇಡಿಕೆಯನ್ನು ಮುಂದಿಟ್ಟು ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ನಿರ್ಣಯ ಮಾಡಲಾಯಿತು.

ಕುಂದಾಪುರದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. 2015ರ ನಂತರದಲ್ಲಿ ಪುರಸಭೆ ರಸ್ತೆ ಜಾಗ ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದ್ದ ಅಧಿಕಾರಿಗಳು, ಕೆಲವು ಕಟ್ಟಡಗಳನ್ನಷ್ಟೇ ತೆರವು ಮಾಡಿ ಸುಮ್ಮನಾಗಿದ್ದಾರೆ. ಸೆಟ್‌ಬ್ಯಾಕ್ ನಿರ್ಮಿಸದೇ ಜಾಗ ಒತ್ತುವರಿ ಮಾಡಿ ಕಟ್ಟಡ ಕಟ್ಟಿದವರ ಮೇಲೆ ಕ್ರಮ ಯಾಕಿಲ್ಲ ಎಂದು ಸದಸ್ಯ ಗಿರೀಶ್ ದೇವಾಡಿಗ ಪ್ರಶ್ನಿಸಿದರು. ಇದಕ್ಕೆ ಸದಸ್ಯ ಶ್ರೀಧರ ಶೇರೆಗಾರ್ ಪೂರಕವಾಗಿ ಮಾತನಾಡಿ, ಪುರಸಭೆ ಕಂಪೌಂಡ್ ಒಂದನ್ನು ತೆರವು ಮಾಡಿದ್ದು ಬಿಟ್ಟರೆ ಮತ್ತಾವ ಪ್ರಗತಿಯೂ ಆಗಿಲ್ಲ. ಪುರಸಭೆ ಒಳಗೆ ಎಷ್ಟು ಸರ್ಕಾರಿ ಭೂಮಿ ಇದೆ ಎಂದು ಪ್ರಶ್ನಿಸಿದರು.

Call us

ಕುಂದಾಪುರ ಶಾಸ್ತ್ರ ಪಾರ್ಕ್ ಬಳಿ ಲೋಕೋಪಯೋಗಿ ಕಟ್ಟಡ ಪ್ರದೇಶ, ಬೋರ್ಡ್ ಹೈಸ್ಕೂಲ್ ಪಕ್ಕದ ಸ್ಥಳ ಹಾಗೂ ಪೆರ್ರಿ ರಸ್ತೆ ಎಂಡ್ ಪಾಯಿಂಟ್‌ನಲ್ಲಿ ವಾಹನ ನಿಲುಗಡೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ ಎಂದು ನಾಮನಿರ್ದೇಶಕ ಸದಸ್ಯ ರತ್ನಾಕರ ಶೇರೆಗಾರ್ ಸಲಹೆ ನೀಡಿದರಲ್ಲದೇ, ಪಾರ್ಕಿಂಗ್ ಸಮಸ್ಯೆ ಬಗೆಹರಿಸುವ ಜೊತೆಗೆ ಪಾದಚಾರಿಗಳಿಗೆ ನಡೆದಾಡಲು ಪಾದಚಾರಿ ಮಾರ್ಗವೂ ಇರಲಿ ಎಂದರು.

ಕುಂದಾಪುರ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಏನೆಲ್ಲಾ ಮಾಡಲು ಸಾಧ್ಯ ಎನ್ನುವ ಬಗ್ಗೆ ವರದಿ ಸಿದ್ದಪಡಿಸಿ ಪುರಸಭೆಗೆ ನೀಡಿದ್ದು, ಪುರಸಭೆ ಸಹಕರಿಸಿದರೆ ಸುಗಮ ಸಂಚಾರ ವ್ಯವಸ್ಥೆ ಮಾಡಲು ಸಾಧ್ಯ ಎಂದು ಟ್ರಾಫಿಕ್ ಎಸ್ಸೈ ಸುದರ್ಶನ್ ತಿಳಿಸಿದರು.

ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಪ್ರತಿಕ್ರಿಯಿಸಿ ಕುಂದಾಪುರ ಪುರಸಭೆಗೆ ಸಂಬಂಧಿಸಿದ ಸರ್ಕಾರಿ ಜಾಗದ ಬಗ್ಗೆ ಆರ್‌ಟಿಸಿ ಬದಲಾವಣೆಗೆ ಕೊಟ್ಟಿದ್ದು, 200 ಆರ್‌ಟಿಸಿ ಕಂದಾಯ ಇಲಾಖೆಯಲ್ಲಿ ಬಾಕಿಯಾಗಿದೆ. ಆರ್‌ಟಿಸಿಯಲ್ಲಿ ಕುಂದಾಪುರ ಪುರಸಭೆ ಎಂದು ಬದಲಾಗಬೇಕಿದ್ದು, ಎರಡು ವರ್ಷದಿಂದ ಬದಲಾಗದಿರುವುದು ಸಮಸ್ಯೆ ಆಗಿದೆ. ಪುರಸಭೆ ಜಾಗ ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟಿದವರಿಗೆ ನೋಟಿಸ್ ಮಾಡಲಾಗಿದ್ದು, ಕಟ್ಟಡ ತೆರವು ಮಾಡಲು ನೋಟಿಸ್ ಮಾಡಲಾಗುತ್ತದೆ. ನೋಟಿಸ್ ನಂತರವೂ ಒತ್ತುವರಿ ತೆರವು ಮಾಡದಿದ್ದರೆ, ಒತ್ತುವರಿ ಜಾಗದ ಕಟ್ಟಡ ಡೆಮಾಲಿಶ್ ಮಾಡಲಾಗುತ್ತದೆ.

ಕುಂದಾಪುರದ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸದಸ್ಯರ ಪ್ರಶ್ನೆಗೆ ಸರಕಾರಿ ಆಯುರ್ವೇದ ವೈದ್ಯೆ ಡಾ. ರಶ್ಮಿ ಉತ್ತರಿಸಿ ಕುಂದಾಪುರದಲ್ಲಿ ಇದೂವರಗೆ ಎರಡು ಮಲೇರಿಯಾ ಒಂದು ಡೆಂಗ್ಯು ಪ್ರಕರಣ ಪತ್ತೆಯಾಗಿದ್ದು, ಎಲ್ಲರೂ ವಲಸೆ ಕಾರ್ಮಿಕರಾಗಿದ್ದಾರೆ. ವೈದ್ಯರ ನಡಿಗೆ ಮನೆ ಕಡೆಗೆ ಕಾರ‍್ಯಕ್ರಮದಲ್ಲಿ ಪ್ರತೀಮನೆಯ ಸದಸ್ಯರ ಕರೋನ ಜೊತೆ ಮಲೇರಿಯಾ, ಬ್ಲಾಕ್ ಪಂಗಸ್ ಪರೀಕ್ಷೆ ಮಾಡುತ್ತಿದ್ದು, ಜನರ ಸಹಕಾರ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದೂವರೆಗೆ ೩೦೮೦೧ ಜನರಿಗೆ ವ್ಯಾಕ್ಸಿನ್ ಮಾಡಿದ್ದು, ಪ್ರಸಕ್ತ ಕೋವಿಡ್ ಆಸ್ಪತ್ರೆಯಲ್ಲಿ ಸಕ್ರೀಯ ೩೯ ಪ್ರಕರಣವಿದ್ದು, ಯಾರೂ ಐಸಿಯಲ್ಲಿ ದಾಖಲಾಗಿಲ್ಲ. ಕರೋನ ಬಂದು ಗುಣಮುಖರಾದವರ ಕಫ ಇನ್ನಿತರ ಪರೀಕ್ಷೆಗೆ ಸಹಕಾರ ನೀಡಬೇಕು ಎಂದರು.

ಪುರಸಭೆ ಸದಸ್ಯರಾದ ಮೋಹನದಾಸ್ ಶೆಣೈ, ಪ್ರಭಾಕರ ವಿ, ಅಶ್ವಿನಿ ಪ್ರದೀಪ್, ಸಂತೋಷ ಶೆಟ್ಟಿ, ಅಶ್ಪಕ್, ಲಕ್ಷ್ಮೀಬಾಯಿ, ರಾಘವೇಂದ್ರ ಖಾರ್ವಿ, ಕಮಲ ಮಂಜುನಾಥ ಪೂಜಾರಿ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು. ಆರೋಗ್ಯ ಇಲಾಖೆ, ಸಂಚಾರಿ ಪೊಲೀಸ್, ಮೆಸ್ಕಾಂ, ಯುಜಿಡಿ, ಸ್ವಜಲಧಾರೆ ಯೋಜನೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

16 + fourteen =