ಕುಂದಾಪುರ ಪುರಸಭೆ ಯುಜಿಡಿ ಭೂ ಖರೀದಿ ಅವ್ಯವಹಾರ: ತನಿಕೆಗೆ ಸಾಮಾನ್ಯ ಸಭೆಯಲ್ಲಿ ಪರ-ವಿರೋಧ ಅಭಿಪ್ರಾಯ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಯುಜಿಡಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದರೆ ನನ್ನ ತನಿಖೆಗೆ ಬೆಂಬಲವಿದೆ. ತನಿಖೆ ಯಾರಿಂದ ಆಗಬೇಕು ಅನ್ನೊದನ್ನ ಸಭೆ ನಿರ್ಧರಿಸಲಿ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

Call us

Call us

ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಅವರು ಯುಜಿಡಿ ಕಾಮಗಾರಿ ನಿಮಿತ್ತ ಭೂಮಿ ವಿಕ್ರಯದಲ್ಲಿ ಅವ್ಯವಹಾರ ಆಗಿದೆ ಎಂದು ಸದಸ್ಯ ಗಿರೀಶ್ ದೇವಾಡಿಗ ಮಾಡಿದ ಆರೋಪದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರಿಗೆ ನೀವು ಏನೇ ಹೇಳುವುದಿದ್ದರೂ ಬರವಣಿಗೆ ಮೂಲಕ ಕೊಡಿ ಎಂದು ಸೂಚಿಸಿದರು.

Call us

Call us

ಭೂಮಿ ವಿಕ್ರಯ ಬಗ್ಗೆ ಹಿಂದಿನ ಸಭೆಯಲ್ಲಿ ತನಿಖೆಗೆ ಸರ್ವಾನುಮತದ ನಿರ್ಣಯ ಮಾಡಲಾಗಿದೆ ಎಂದು ಬರೆಯಲಾಗಿದ್ದು, ಅದಕ್ಕೆ ವಿರೋಧವಿದೆ ಎಂದು ಹೇಳಿದರು ಸರ್ವಾನುಮತ ನಿರ್ಣಯ ಸರಿಯಲ್ಲ. ವಿರೋಧದ ಬಗ್ಗೆ ಪತ್ರ ಕೊಟ್ಟಿದ್ದು, ಸರ್ವಾನು ಮತ ಬದಲು ಬಹುಮತ ನಿರ್ಣಯ ಎಂದು ತಿದ್ದುಪಡಿ ಮಾಡುವಂತೆ ಸದಸ್ಯ ಚಂದ್ರಶೇಖರ ಖಾರ್ವಿ ಒತ್ತಾಯಿಸಿದ್ದು, ಇದಕ್ಕೆ ಕೋಡಿ ಸದಸ್ಯ ಅಶ್ಪಕ್ ಖಾರ್ವಿ ಬೆಂಬಲಿಸಿದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ ಭೂ ಅವ್ಯವಹಾರ ತನಿಖೆಗೆ ನಿಮ್ಮ ಬೆಂಬಲವಿಲ್ವಾ ಎಂದು ಪ್ರಶ್ನಿಸಿದರು. ತನಿಖೆಗೆ ನಮ್ಮ ಬೆಂಬಲವಿದೆ ಆದರೆ ಸರ್ವಾನುಮತ ನಿರ್ಣಯಕ್ಕೆ ಬೆಂಬಲವಿಲ್ಲ ಎಂದು ಚಂದ್ರಶೇಖರ ಖಾರ್ವಿ ಹೇಳಿದರು. ಚರ್ಚೆ ನಡೆದು ನಿರ್ಣಯ ಮಾಡುವಾಗ ವಿರೋಧ ಪಕ್ಷದ ಸದಸ್ಯರು ಮಾತೇ ಆಡಿರಲಿಲ್ಲ. ಹಾಗಾಗಿ ಅದು ಸರ್ವಾನುಮತ ನಿರ್ಣಯ ಆಗುತ್ತದೆ ಎಂದು ಆಡಳಿತ ಸದಸ್ಯರು ಹೇಳಿದ್ದು, ಸಭೆಯಲ್ಲಿ ಮಾತಿನ ಗದ್ದಲಕೆ ಕಾರಣವಾಯಿತು.

ಹಾಲಾಡಿ ಸದಸ್ಯರ ಕೂರಿಸಿ, ಅವ್ಯವಹಾರ ತನಿಖೆಗೆ ಯಾರ ವಿರೋಧವಿದೆ ಎಂದು ಪ್ರಶ್ನಿಸಿದ್ದು, ಚಂದ್ರಶೇಖರ ಮತ್ತು ಅಶ್ಪಕ್ ತನಿಖೆಗೆ ಸಮ್ಮತವಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದು, ಸರ್ವಾನುಮತದ ಬದಲು ಬಹುಮತದಿಂದ ತೀರ್ಮಾನ ಎಂದು ಲಾಗ್ ಪುಸ್ತಕದಲ್ಲಿ ಬರೆಯಲು ಸೂಚಿಸಿದರು. ವಿರೋಧ ಪಕ್ಷದ ಸದಸ್ಯ ಶ್ರೀಧರ ಶೇರೆಗಾರ್ ಮಾತನಾಡಿ, ಬಡವರ ತೆರಿಗೆ ದುಡ್ಡು ಪೋಲಾಗಬಾರದು ಭೂಮಿ ಅವ್ಯವಹಾರದ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದು, ಭೂವ್ಯವಹಾರ ತನಿಖೆ ವಿಷಯದಲ್ಲಿ ವಿರೋಧಿ ಸದಸ್ಯರಲ್ಲಿ ಒಮ್ಮತ ಮೂಡಲಿಲ್ಲ.

ನಾಮ ನಿರ್ದೇಶಕ ಸದಸ್ಯರಿಗೆ ಸಭೆಯಲ್ಲಿ ಮಾತನಾಡುವುದಕ್ಕೆ ಅವಕಾಶವಿದೆಯಾ, ಅವರ ಹಕ್ಕುಗಳೇನು ಎಂದು ಚಂದ್ರಶೇಖರ ಖಾರ್ವಿ ಪ್ರಶ್ನಿಸಿದ್ದು ನಾಮನಿರ್ದೇಶಕ ಸದಸ್ಯರ ಕೆರಳಿಸಿತು. ಹಿರಿಯ ಸದಸ್ಯ ಮೋಹನದಾಸ ಶೆಣೈ ನಾಮನಿರ್ದೇಶಕ ಸದಸ್ಯರಿಗೆ ವೋಟಿನ ಹಕ್ಕು ಬಿಟ್ಟು ಸಭೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಏನೆಲ್ಲಾ ಹಕ್ಕಿದೆಯೋ ಅವೆಲ್ಲಾ ಅನ್ವಯವಾಗಿತ್ತದೆ ಎಂದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ನಾಮನಿರ್ದೇಶಕ ಸದಸ್ಯರ ಹಕ್ಕುಗಳ ಬಗ್ಗೆ ಓದಿ ಹೇಳಿದ ನಂತರ ಸಭೆ ಮುಂದುವರಿಯಿತು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

ಕುಂದಾಪುರ ರಿಂಗ್ ರಸ್ತೆಯು 25 ಕೋಟಿ ಅನುದಾನದಲ್ಲಿ ಸರ್ವಋತು ರಸ್ತೆಯಾಗಿ ಅಭಿವೃದ್ಧಿ ಹೊಂದಲಿದೆ ಎಂದ ಶಾಸಕ ಹಾಲಾಡಿ ಅವರ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಮೇಜುತಟ್ಟಿ ಸ್ವಾಗತಿಸಿದರು. ವಿರೋಧ ಸದಸ್ಯ ಚಂದ್ರಶೇಖರ ಖಾರ್ವಿ ಅವರು ಮಾತನಾಡಿ, ವಿಧಾನಸಭೆಯಲ್ಲಿ ಚುಕ್ಕಿ ಪ್ರಶ್ನೆಯಲ್ಲಿ ಯಾವುದೇ ಅನುದಾನ ಇಲ್ಲ ಎಂದು ಹೇಳಿದ್ದಾರಲ್ಲ ಎಂದು ಮರುಪ್ರಶ್ನೆ ಹಾಕಿದರು. ಇದಕ್ಕೆ ಹಾಲಾಡಿ ಅವರು ಅನುದಾನ ದೊರೆತಿರುವ ಬಗ್ಗೆ ಸರ್ಕಾರಿ ಆದೇಶ ಪ್ರತಿ ತೋರಿಸಿದರು. ಕೋಡಿ ಸರ್ವಋತು ರಸ್ತೆಗೆ 5, ಕೋಟಿ, ಚರ್ಚ್‌ರಸ್ತೆ, ಪೆರ್ರಿ ರಸ್ತೆ, ಖಾರ್ವಿಕೇರಿ ರಸ್ತೆ ಸರ್ವಋತು ರಸ್ತೆಗೆ ಅನುದಾನ ಮಂಜೂರಾಗಿದ್ದು, ಶಾಸಕನಾಗಿ ಇವೆಷ್ಟು ನನ್ನಿಂದ ಸಾಧ್ಯ. ನಿಮ್ಮ ಎಲ್ಲಾ ಬೇಡಿಕೆ ಈಡೇರಿಸಲು ನಾನು ಸಿಎಂ ಆದಮೇಲೆ ನೋಡುವ ಎಂದರು. ಅದಕ್ಕೆ ಸಭೆಯಲ್ಲಿ ನೀವಿನ್ನು ಮಂತ್ರಿಯೇ ಆಗಿಲ್ವಲಾ ಎಂದು ಕಾಲೆಳೆದರೆ, ಸದಸ್ಯ ಶ್ರೀಧರ ಶೇರೆಗಾರ್ ಮಂತ್ರಿಯಾಗದೆ ಸಿಎಂ ಆಗಿದ್ವಾರೆ ಎಂದು ಶಾಸಕರ ರಕ್ಷಣೆಗೆ ಬಂದರು. ಹಾಲಾಡಿ ಸಿಎಂ ಆದರೆ ನಮ್ಮೂರಿಗೆ ಹೆಮ್ಮೆಯೇ ಆದರೆ ಇದೂವರಗೆ ಕುಂದಾಪುರಕ್ಕೆ ಮಂತ್ರಿಸ್ಥಾನ ಸಿಕ್ಕಿಲ್ಲ. ಮಂತ್ರಿಯಾಗಿದ್ದರೆ ನಮ್ಮೂರಿಗೆ ಗೌರವ ಬರುತ್ತಿತ್ತು ಎಂದು ವಿರೋಧ ಸದಸ್ಯರು ಹೇಳಿದರು.

Leave a Reply

Your email address will not be published. Required fields are marked *

twelve − 8 =