ಕುಂದಾಪುರ ಯುವಕನ ಮೇಲಿನ ಹಲ್ಲೆಯ ವೀಡಿಯೋ ಬೆಂಗಳೂರನ್ನು ಹತ್ತಿ ಉರಿಸಿತು

Click Here

Call us

Call us

.

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾವೇರಿ ನದಿ ನೀರು ಹಂಚಿಕೆಯ ವಿಷಯ ಸಂಬಂಧ ತಮಿಳುನಾಡಿನಲ್ಲಿ ಕನ್ನಡಿಗರ ವಿರುದ್ಧ ದಾಳಿ ನಡೆದ ದಾಳಿ ಬೆಂಗಳೂರನ್ನು ಹತ್ತಿ ಊರಿಯುವಂತೆ ಮಾಡಿತ್ತು.

Click Here

Click here

Click Here

Call us

Call us

ಕುಂದಾಪುರ ತಂಡದ ಚಾಲಕ ಮಂಜುನಾಥ ಕುಲಾಲ ಅವರ ಮೇಲೆ ತಮಿಳರು ಅಮಾನವೀಯ ಹಲ್ಲೆ ಮಾಡಿರುವುದನ್ನು ವೀಡಿಯೊ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಬಳಿಕ ಎಲ್ಲೆಡೆ ಗಲಾಟೆ ಆರಂಭಗೊಂಡಿತು. ನಾಮ್ ತಮಿಳಾರ್ ಇಯಕ್ಕಂ ಎಂಬ ಸಂಘಟನೆಯ ಸದಸ್ಯರು ರಾಮೇಶ್ವರದಲ್ಲಿ ನಿಲ್ಲಿಸಿದ್ದ ಕರ್ನಾಟಕ ನೋಂದಣಿಯ ವಾಹನಗಳಿಗೆ ಮತ್ತು ಅದರಲ್ಲಿದ್ದ ಕನ್ನಡಿಗರಿಗೆ ಮನಸೋ ಇಚ್ಛೆ ದಾಳಿ ನಡೆಸಿದರು. ಅದನ್ನು ಸಂಘಟನೆಯವರೇ ವೀಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಗಲಭೆಗಳು ಆರಂಭಗೊಂಡಿದ್ದವು. ತಮಿಳುನಾಡಿನ ವಾಹನಗಳಿಗೆ ಬೆಂಕಿ, ಸೊತ್ತು ನಾಶಕ್ಕೆ ಕರ್ನಾಟಕದ ಕೆಲವು ಸಂಘಟನೆಗಳೂ ಮುಂದಾಗಿದ್ದವು. ಕೊನೆಗೆ ಒಬ್ಬ ಯುವಕ ದಾರುಣವಾಗಿ ಗುಂಡೇಟಿಗೆ ಬಲಿಯಾಗಬೇಕಾಯಿತು. ಪರಿಸ್ಥಿತಿ ನಿಯಂತ್ರಿಸಲು ಹಲವಡೆ ಕರ್ಪ್ಯೂ ಜಾರಿಗೊಳಿಸಲಾಗಿದೆ. ಕುಂದಾಪ್ರ ಡಾಟ್ ಕಾಂ.

ಕುಂದಾಪುರಿಗರು ಸೇಫ್:
ದುಷ್ಕರ್ಮಿಗಳಿಂದ ಏಟು ತಿಂದ ವಾಹನ ಚಾಲಕ ಮಂಜುನಾಥ ಕುಲಾಲ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದರೇ ವಾಹನದಲ್ಲಿದ್ದ ಇತರೆ ಹನ್ನೊಂದು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ತಮಿಳುನಾಡಿನಿಂದ ಪೊಲೀಸ ಭದ್ರತೆಯಲ್ಲಿ ರೈಲಿನ ಮೂಲಕ ಕರ್ನಾಟಕಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಮಂಜುನಾಥ ಕುಲಾಲ್ ಅವರ ವಾಹನ ಸಹಿತ ಹಿಂತಿರುಗಲಿದ್ದು ಕರ್ನಾಟಕದ ಗಡಿಯವರೆಗೆ ತಮಿಳುನಾಡು ಪೊಲೀಸರು ರಕ್ಷಣೆ ನೀಡಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Read this
► ಕಾವೇರಿ ನೀರು ಹಂಚಿಕೆ ವಿವಾದ. ಕುಂದಾಪುರದ ಯುವಕನಿಗೆ ಹಲ್ಲೆ, ವಾಹನ ಜಖಂ – http://kundapraa.com/?p=17456

Leave a Reply

Your email address will not be published. Required fields are marked *

5 × two =