ಗಾನಕುಸುಮ – 2016: ಸೆಮಿಫೈನಲ್‌ಗೆ 35 ಸ್ವರ್ಧಿಗಳು ಆಯ್ಕೆ

Call us

ಗ್ರಾಮೀಣ ಪರಿಸರದ ಮಕ್ಕಳ ಸಂಗೀತಾಸಕ್ತಿ ಪ್ರೋತ್ಸಾಹ ಶ್ಲಾಘನಾರ್ಯ: ಪ್ರಕಾಶ್ಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಸುಮಾ ಫೌಂಡೇಶನ್ ಸಂಸ್ಥೆಯ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿದೆ ಹಮ್ಮಿಕೊಂಡಿರುವ ಪ್ರತಿವರ್ಷದಂತೆ ಈ ಭಾರಿಯೂ ಆಯೋಜಿಸಲಾಗುತ್ತಿರುವ ಕುಸುಮಾಂಜಲಿ 2016 ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಆಯೋಜಿಸಲಾಗುತ್ತಿರುವ ಗಾನಕುಸುಮದ ಎರಡನೇ ಆವೃತ್ತಿಯ ಮೊದಲ ಸುತ್ತಿನ ಆಯ್ಕೆಗೆ ಗಾಯನ ಸ್ವರ್ಧೆ ನಾಗೂರಿನ ಲಲಿತಾಕಲಾ ಮಂದಿರದಲ್ಲಿ ಜರುಗಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಕಲಿಸುವ ಪರಿಣತಿ ಹೊಂದಿರುವ ಗುರು, ಕಲಿಕೆಗೆ ಬದ್ಧನಾದ ಶಿಷ್ಯ ಮತ್ತು ಪ್ರಾಮಾಣಿಕ ಆಸಕ್ತಿ ಇರುವ ಶ್ರೋತೃಗಳೆಂಬ ತ್ರಿವೇಣಿ ಸಂಗಮವಾದರೆ ಅಲ್ಲಿ ಸಂಗೀತ ಔನ್ನತ್ಯ ಸಾಧಿಸುತ್ತದೆ. ಈ ತ್ರಿವೇಣಿ ಸಂಗಮಕ್ಕೆ ಪರಸ್ಪರ ಪ್ರಭಾವಿಸುವ ಮತ್ತು ಪ್ರಭಾವಿತವಾಗುವ ಗುಣವಿದೆ ಎಂದರು.

ತಾಲೂಕಿನ ಮಕ್ಕಳಲ್ಲಿನ ಸಂಗೀತ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕೆಂಬ ತುಡಿತದೊಂದಿಗೆ ಕುಸುಮ ಫೌಂಡೇಶನ್ ಕಳೆದ ಮೂರು ವರ್ಷಗಳಿಂದ ಪ್ರತಿಭಾನ್ವೇಷಣೆ ತೊಡಗಿ ಕುಸುಮಾಂಜಲಿ ಹಾಗೂ ಗಾನಕುಸುಮ ಸ್ಪರ್ಧೆ ನಡೆಸುತ್ತಿರುವುದು ಶ್ಲಾಘನೀಯ. ನಗರದ ಮಕ್ಕಳಿಗೆ ಟಿವಿ ಮಾಧ್ಯಮಗಳ ರಿಯಾಲಿಟಿ ಶೋಗಳು ವೇದಿಕೆ ನೀಡಿದರೆ, ಗ್ರಾಮೀಣ ಭಾಗದ ಮಕ್ಕಳಿಗೆ ಇಂತಹ ಸಂಸ್ಥೆಗಳು ವೇದಿಕೆ ಸಂತೋಷದ ಸಂಗತಿ ಎಂದರು.

Call us

ತೀರ್ಪುಗಾರರಾಗಿದ್ದ ಆಕಾಶವಾಣಿ ಕಲಾವಿದ ಎಚ್. ಚಂದ್ರಶೇಖರ ಕೆದ್ಲಾಯ ಮಾತನಾಡಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಬಹುಮಾನವಲ್ಲ. ಸಂಗೀತಕ್ಕೆ ಸೋಲದವರಿಲ್ಲ. ಉತ್ತಮ ಸಾಹಿತ್ಯದೊಂದಿಗೆ ಶ್ರುತಿ, ತಾಳ, ಲಯಬದ್ಧವಾಗಿ ಹಾಡಿದಾಗ ಕೇಳುಗರ ಕಿವಿಗೂ ಇಂಪುನೀಡಬಲ್ಲದು ಎಂದರು.

ಸ್ಪರ್ಧೆಯಲ್ಲಿ ಹಲವಾರು ಶಾಲೆ ಹಾಗೂ ಕಾಲೇಜುಗಳಿಂದ 101 ಸ್ಪರ್ಧಿಗಳು ಭಾಗವಹಿಸಿದ್ದು, ಸೆಮಿಫೈನಲ್ ಸುತ್ತಿಗೆ ಜೂನಿಯರ್ ಹಾಗೂ ಸೀನಿಯರ್ ವಿಭಾಗದಿಂದ 35 ಸ್ಪರ್ಧಿಗಳನ್ನು ಆಯ್ಕೆಮಾಡಲಾಯಿತು.

ಆಕಾಶವಾಣಿ ಕಲಾವಿದ ಎಚ್. ಚಂದ್ರಶೇಖರ ಕೆದ್ಲಾಯ, ಸಂಗೀತ ನಿರ್ದೇಶಕ ಭಾಸ್ಕರ್ ಆಚಾರ್ಯ ಬಸ್ರೂರು, ಗಾಯಕಿ ಮೀರಾ ಕಾಮತ್ ಕುಂದಾಪುರ, ನಿವೃತ್ತ ಶಿಕ್ಷಕಿ ಸುಧಾಮೂರ್ತಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕುಸುಮ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ನಳಿನ ಕುಮಾರ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕಿ ವಿದ್ಯಾ ಸ್ಪರ್ಧೆಯ ಪ್ರಸ್ತಾವನೆಗೈದರು. ನೀಡಿದರು. ವೀಗನ್ ಶಂಕರನಾರಾಯಣ ಅವರು ವಂದಿಸಿದರು ಕುಸುಮ ಸಂಸ್ಥೆಯ ಸದಸ್ಯೆಯಾದ ರೇಷ್ಮಾ ಅವರು ಕಾರ್ಯಕ್ರಮ ನಿರೂಪಿಸಿದರು.

ganakusuma-2016-first-round-1ganakusuma-2016-first-round-3ganakusuma-2016-first-round-4 ganakusuma-2016-first-round-5????????????????????????????????????

Leave a Reply

Your email address will not be published. Required fields are marked *

fifteen + thirteen =