ಕೋಟೇಶ್ವರ ಕೆರೆಗೆ ಕಾಲು ಜಾರಿ ಬಿದ್ದ ಮಹಿಳೆ ಸಾವು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಕೈಕಾಲು ತೊಳೆಯಲು ತೆರಳಿದ್ದ ಮಹಿಳೆಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಬೆಂಗಳೂರಿನ ಗಿರಿನಗರದಲ್ಲಿ ನಿವಾಸಿ ತುಳಸಿ ಹೆಚ್.ಆರ್ (56) ಮೃತ ದುರ್ದೈವಿ.

Call us

Call us

Call us

ಬಿಜಾಡಿ ಗ್ರಾಮದ ಹೊದ್ರಾಳಿ ಎಂಬಲ್ಲಿನ ತಮ್ಮ ಸ್ವಂತ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ತುಳಸಿ ಅವರು, ದೇವರ ದರ್ಶನಕ್ಕಾಗಿ ಕೋಟೇಶ್ವರಕ್ಕೆ ದೇವಸ್ಥಾನಕ್ಕೆ ತೆರಳುವ ಮುಂಚೆ ಅಲ್ಲಿನ ಕೆರೆಗೆ ಕೈಕಾಲು ಮುಖ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಈ ವೇಳೆ ಕೆರೆಯ ಸುತ್ತಮುತ್ತ ಯಾರೂ ಇಲ್ಲದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾಕಿಹೋಗಿತ್ತು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply

Your email address will not be published. Required fields are marked *

1 + thirteen =