ಇಂದಿನಿಂದ ಲಾವಣ್ಯ 42ನೇ ವಾರ್ಷಿಕೋತ್ಸವ – 3 ದಿನದ ’ರಂಗ ಸಂಭ್ರಮ’

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರಿನ ಕಲಾ ಸಂಸ್ಥೆ ಲಾವಣ್ಯ ರಿ. ಬೈಂದೂರು ಇದರ ೪೨ನೇ ವಾರ್ಷಿಕೋತ್ಸವ ಹಾಗೂ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸಂಸ್ಮರಣೆಯ ನಾಟಕೋತ್ಸವ ಫೆ.22ರಿಂದ 24ರ ತನಕ ಪ್ರತಿದಿನ ಸಂಜೆ 6:30ಗಂಟೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ.

Call us

Call us

Visit Now

ಫೆ.22ರಂದು ಪಿ. ಲಂಕೇಶ್ ರಚನೆಯ, ವಸಂತ ಬನ್ನಾಡಿ ನಿರ್ದೇಶನದ, ಲಾವಣ್ಯ ಬೈಂದೂರು ಪ್ರಸ್ತುತಿಯ ’ಸಂಕ್ರಾಂತಿ’ ನಾಟಕ ಪ್ರದರ್ಶನಗೊಳ್ಳಲಿದೆ. ಅಂದಿನ ಸಭಾ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಸಂಗೀತ ಕಲಾವಿದ ಜಗದೀಶ ಆಚಾರ್ ಅವರಿಗೆ ಸನ್ಮಾನ ಇರಲಿದೆ.

Click here

Call us

Call us

ಫೆ. 23ರ ಶನಿವಾರ ರಾಜೇಂದ್ರ ಕಾರಂತ್ ನಿರ್ದೇಶಿಸಿದ ಚಿತ್ತಾರ ಬೆಂಗಳೂರು ಪ್ರಸ್ತುತಿಯ ’ಬಲು ಅಪರೂಪ ನಮ್ ಜೋಡಿ’ ನಾಟಕ ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ರಾಜೇಂದ್ರ ಕಾರಂತರ ನಾಟಕ ಕೃತಿ ಬಿಡುಗಡೆ, ರಂಗಕಲಾವಿದ ಕೃಷ್ಣಮೂರ್ತಿ ಉಡುಪ ಕಬ್ಸೆ ಅವರಿಗೆ ಸನ್ಮಾನ ಇರಲಿದೆ.

ಫೆ.24ರ ಆದಿತ್ಯವಾರ ಶಶಿರಾಜ್ ಕಾವೂರು ರಚಿಸಿ, ಮೋಹನ್ ಚಂದ್ರ ಯು ನಿರ್ದೇಶನ, ರಂಗ ಸಂಗಾತಿ ರಿ. ಮಂಗಳೂರು ಪ್ರಸ್ತುತಿಯ ’ಸಂಪಿಗೆನಗರ ಪೊಲೀಸ್ ಸ್ಟೇಷನ್’ ನಾಟಕ ಪ್ರದರ್ಶನಗೊಳ್ಳಲಿದೆ. ಒಂದು ಯಕ್ಷಗಾನ ಗೊಂಬೆಯಾಟ ಕಲಾವಿದ ಮಂಜು ದೇವಾಡಿಗ ಅರೆಹಾಡಿ ಅವರಿಗೆ ಸನ್ಮಾನ ಇರಲಿದೆ.

 

Leave a Reply

Your email address will not be published. Required fields are marked *

5 − 3 =