ಲಾವಣ್ಯ ಬೈಂದೂರು ರಂಗ ಸಂಭ್ರಮ 2016ಕ್ಕೆ ಚಾಲನೆ
ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಹೊಸ ಅಲೆಯ ನಾಟಕಗಳು ಬೆಂಕಿಯಂತೆ ವೇಗವಾಗಿ ಪಸರಿಸಿ ಜನರನ್ನು ತಲುಪುತ್ತಿದ್ದು ಇದಕ್ಕೆ ಹವ್ಯಾಸಿ ರಂಗತಂಡಗಳ ಕೊಡುಗೆ ದೊಡ್ಡದಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್ ಹೇಳಿದರು.
[quote font_size=”14″ bgcolor=”#ffffff” bcolor=”#dd9933″ arrow=”yes” align=”right”]* ನಾಟಕ ಪ್ರದರ್ಶನಕ್ಕಿಂದ ನಾಟಕ ತಯಾರಿಯ ಅಂಶವೇ ಮುಖ್ಯವಾದುದು. ಕಲಾವಿದರು ತಮ್ಮ ಕೆಲಸದೊಳ್ಳಕ್ಕೆ ನಿಷ್ಠೆಯಿಂದ, ಒಗ್ಗಟ್ಟಾಗಿ ತೊಡಗಿಸಿಕೊಂಡು ಮುನ್ನಡೆಯುತ್ತಾರೆ. ನಾಟಕ ಬದುಕು ಕಲಿಸುತ್ತದೆ ಎಂಬುದಕ್ಕೆ ಹಲವಾರು ದೃಷ್ಟಾಂತವಿದೆ. ನಮ್ಮ ಮಕ್ಕಳನ್ನು ಈ ವ್ಯವಸ್ಥೆಯೊಳಕ್ಕೆ ತಂದು ನೋಡಿ. ಅವರ ಬೆಳವಣಿಗೆಯನ್ನು ನೀವೇ ಮೆಚ್ಚುತ್ತೀರಿ. – ಮೋಹನಚಂದ್ರ ಮಂಗಳೂರು, ನಾಟಕ ನಿರ್ದೇಶಕರು[/quote]
ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ಮೂರು ದಿನಗಳ ಕಾಲ ಬೈಂದೂರಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗ ಸಂಭ್ರಮ-2016 ಉದ್ಘಾಟಿಸಿ ಅವರು ಮಾತನಾಡಿದರು. ಹವ್ಯಾಸಿ ಕಲಾವಿದರು ತಮ್ಮ ಪಾತ್ರಗಳಲ್ಲಿ ಹೊಸತನ ತುಂಬುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಾ ಬಂದಿದ್ದಾರೆ. ಉಡುಪಿ, ದ.ಕ, ಕೊಡಗು, ಮಡಿಕೇರಿ ಹಾಗೂ ಕಾಸರಗೋಡುವಿನಲ್ಲಿ ವಿಭಿನ್ನ ಬಗೆಯ ನಾಟಕ ಪ್ರಯೋಗಗಳು ನಿರಂತರವಾಗಿ ನಡೆದು ಹೊಸ ಅಲೆ ಸೃಷ್ಠಿಸಿದೆ ಎಂದರು.
ಸರ್ವಧರ್ಮ, ಮತಪಂಥೀಯರನ್ನು ಪ್ರೀತಿಸಬೇಕಾದ ಸಂದರ್ಭದಲ್ಲಿ ಬೇರೆಯದರೇ ಚಿಂತನೆಗೆ ಒಳಗಾಗಿ ವಿಭಜನೆಯಾಗುತ್ತಿರುವ ಕಾಲಘಟ್ಟದಲ್ಲಿ ಲಾವಣ್ಯದಂತಹ ಸಂಸ್ಥೆಗಳ ಏಕತೆಯ ದಾರಿ ಹಿಡಿದಿರುವುದು ಶ್ಲಾಘನಾರ್ಹ ಎಂದರು.
ಲಾವಣ್ಯ ಬೈಂದೂರು ಅಧ್ಯಕ್ಷ ಬಿ. ರಾಮ ಟೈಲರ್ ಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ, ಮಂಗಳೂರು ರಂಗಸಂಗಾತಿ ನಿದೇರ್ಶಕ ಮೋಹನಚಂದ್ರ ಯು. ಅತಿಥಿಗಳಾಗಿ ಉಪಸ್ಥಿತರಿದ್ದರು. ಹಿರಿಯ ರಂಗ ಕಲಾವಿದ ಭವಾನಿ ಶಂಕರ್ ನಾಯಕ್ (ಬೋಜಣ್ಣ) ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ನಾಟಕ ಸ್ವರ್ಧೆಯಲ್ಲಿ ಪ್ರಶಸ್ತಿ ವಿಜೇತ ಮುದ್ದಣ್ಣನ ಪ್ರಮೋಷನ್ ಪ್ರಸಂಗ ನಾಟಕದ ಕಲಾವಿದರು ಹಾಗೂ ತಂತ್ರಜ್ಞರಿಗೆ ಅಭಿನಂದಿಸಲಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ
ಲಾವಣ್ಯದ ಸದಸ್ಯ ಗಿರೀಶ್ ಬೈಂದೂರು ಸ್ವಾಗತಿಸಿದರು. ಕಾರ್ಯದರ್ಶಿ ನರಸಿಂಹ ಬಿ. ನಾಯಕ್ ವಂದಿಸಿದರು. ಸುಬ್ರಹ್ಮಣ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.