ಕಾನೂನು ಮಾಡುವವರು ಮೊದಲು ಅದನ್ನು ಪಾಲಿಸಲಿ: ಕೆ. ಜಯಪ್ರಕಾಶ್ ಹೆಗ್ಡೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾನೂನು ಮಾಡುವವರೆ ಅದನ್ನು ಮೀರುವುದು ಸರಿಯಲ್ಲ. ಯಾವುದೇ ಪಕ್ಷದ ಜನನಾಯಕರಿರಲಿ ಮೊದಲು ತಾವು ಸಾಮಾಜಿಕ ಅಂತರ ಪಾಲಿಸಿ, ಬಳಿಕ ಜನರಿಗೆ ಪಾಲಿಸುವುಂತೆ ಹೇಳಲಿ ಎಂದು ಸಾಮಾಜಿಕ ಅಂತರ ಪಾಲಿಸದ ನಾಯಕರಿಗೆ ಮಾಜಿ ಸಂಸದ, ಬಿಜೆಪಿ ಪಕ್ಷದ ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಅವರು ಚಾಟಿ ಬೀಸಿದ್ದಾರೆ.

Click Here

Call us

Call us

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅವರು, ಸರಕಾರ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳುತ್ತಿದೆ. ಜನ ತಪ್ಪು ಮಾಡಿದರೆ ಪೊಲೀಸರು ಲಾಠಿ ಪ್ರಯೋಗ ಮಾಡುತ್ತಾರೆ. ಆದರೆ ನಮ್ಮ ಜನನಾಯಕರು ಸಾವಿರಾರು ಜನರನ್ನು ಸೇರಿಸಿ ಅವರ ಮಧ್ಯದಲ್ಲಿ ನಿಲ್ಲುವುದು, ಮಾಸ್ಕ್ ಹಾಕದಿರುವುದು ಮಾಡುತ್ತಿದ್ದಾರೆ. ಅವರಿಗೆ ಶಿಕ್ಷೆ ಕೊಡುವವರು ಯಾರು ಎಂಬುದು ತಿಳಿದಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ.

Click here

Click Here

Call us

Visit Now

ಕಿಟ್ ಕೊಡುವ ನೆಪದಲ್ಲಿ ಸಾವಿರಾರು ಜನರನ್ನು ಒಂದೆಡೆ ಸೇರಿಸುವುದಕ್ಕಿಂತ, ಅವರವರ ಮನೆಗಳಿಗೆ ಕಿಟ್ ತಲುಪಿಸಿದರೆ ಕೊರೋನಾ ನಿಯಂತ್ರಿಸಲು ಅದಕ್ಕಿಂತ ದೊಡ್ಡ ಸಹಾಯ ಇನ್ನೊಂದಿಲ್ಲ. ಜನನಾಯಕರು ಮೊದಲು ಕಾನೂನು ಪಾಲಿಸಲಿ ಎಂದವರು ಹೇಳಿಕೊಂಡಿದ್ದಾರೆ.

ರಾಜ ತಪ್ಪು ಮಾಡಲ್ಲ ಅಂತಲ್ಲ. ಆದರೆ ರಾಜ ಮಾಡಿದ್ಯಾವುದೂ ತಪ್ಪಲ್ಲ ಎಂಬ ಇಂಗ್ಲೀಷಿನ ಉಕ್ತಿಯನ್ನು ಉಲ್ಲೇಕಿಸಿ ಸಾಮಾಜಿಕ ಅಂತರ ಪಾಲಿಸದೇ ತಪ್ಪು ಮಾಡುತ್ತಿರುವ ನಾಯಕರನ್ನು ಎಚ್ಚರಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Call us

Leave a Reply

Your email address will not be published. Required fields are marked *

12 + nineteen =